Advertisement

ನೀವು ಮನೆ ಮೇಕಪ್‌ ಮಾಡಿ

10:12 AM Mar 18, 2020 | mahesh |

ಕ್ರೀಂ, ಪೌಡರ್‌ ಹಾಕಿ ಮುಖದ ಅಂದವನ್ನು ತೀಡುತ್ತೀವಲ್ಲ. ಅದೇ ರೀತಿ, ನಮ್ಮ ಮನೆಯ ಒಳಾಂಗಣವನ್ನು ಶೃಂಗಾರ ಮಾಡುವವರು ಈ ಇಂಟೀರಿಯರ್‌ ಡಿಸೈನರ್‌ಗಳು. ಮನೆಗೆ ಬಳಿಯುವ ಬಣ್ಣ, ಇಡುವ ಫ‌ರ್ನಿಚರ್‌ಗಳಿಂದ ಹಿಡಿದು ಎಲ್ಲದರಲ್ಲೂ ಮನೆಯ ಶೋಭೆ ಹೆಚ್ಚಿಸುವ ಇವರಿಗೆ ಸಾಕಷ್ಟು ಡಿಮ್ಯಾಂಡ್‌ ಇದೆ.

Advertisement

ಮನೆ ಚೆನ್ನಾಗಿ ಕಾಣಬೇಕು. ಮನೆಗೆ ಬರುವ ಬಂಧು-ಭಾಂದವರ ಹೊಗಳಬೇಕು. ಮನೆ ಕಟ್ಟೋರಿಗೆ ಇಂಥ ಕನಸುಗಳು ಅನೇಕ. ಆದರೆ, ಮನೆ ಕಟ್ಟಿಸುವ ಮಾಲೀಕನ ಕನಸು ನನಸು ಮಾಡುವವರು ಕಾಂಟ್ರಾಕ್ಟರ್‌ ಅಲ್ಲ, ಎಂಜಿನಿಯರ್‌ಗಳು ಅಲ್ಲವೇ ಅಲ್ಲ. ಅವರೇ ಇಂಟೀರಿಯರ್‌ ಡಿಸೈನರ್ಸ್‌, ಆರ್ಕಿಟೆಕ್ಟ್ ಇಡೀ ಮನೆ ಹೇಗಿರಬೇಕು, ಎಲ್ಲೆಲ್ಲಿ ಏನೇನು ಇದ್ದರೆ ಚೆನ್ನ ಅಂತ ಕಟ್ಟಡ ಕಟ್ಟುವುದಕ್ಕೆ ಪ್ಲಾನ್‌ ಮಾಡಿದರೆ, ಈ ಇಂಟೀರಿಯರ್ಸ್‌, ಆರ್ಕಿಟೆಕ್ಟ್ ಮಾಡಿದ ಪ್ಲಾನ್‌ ಇಟ್ಟುಕೊಂಡೇ, ಮನೆ ಹೇಗೆಲ್ಲ ಚೆನ್ನಾಗಿ ಕಾಣಬೇಕು ಅಂತ ಯೋಚಿಸುತ್ತಾರೆ. ಅಂದರೆ, ಅಡುಗೆ ಮನೆ ಹೇಗೆ ಕಾಣಬೇಕು, ಬೆಡ್‌ರೂಮಿನ ಬಣ್ಣ ಯಾವ ರೀತಿ ಇರಬೇಕು, ಮನೆ ಹೊರಗಿನ ಲುಕ್‌ ಯಾವ ರೀತಿ ಇದ್ದರೆ ಚೆನ್ನಾಗಿರುತ್ತದೆ ಎಂಬುದನ್ನೆಲ್ಲ ಫೈನಲ್‌ ಮಾಡೋದು ಇಂಟೀರಿಯರ್‌ ಡಿಸೈನರ್‌ಗಳೆ.

ಮನೆ ಕಟ್ಟೋದು ಮುಖ್ಯವಲ್ಲ. ಅದು ಚೆನ್ನಾಗಿ ಕಾಣಬೇಕು ಅನ್ನೋದು ಈ ಕಾಲದ ಯೋಜನೆ, ಯೋಚನೆ ಆಗಿರುವುದರಿಂದಲೇ, ಇಂಟೀರಿಯರ್‌ ಡಿಸೈನರ್‌ಗಳಿಗೆ ಪ್ರತ್ಯೇಕ ಕೋರ್ಸ್‌ಗಳೂ ಹುಟ್ಟಿರುವುದು. ಒಟ್ಟಾರೆ, ಮನೆ ಕಟ್ಟೋಕ್ಕೆ ಎಂಜಿನಿಯರ್‌ ಬೇಕು. ಮನೆಯನ್ನು ಚೆಂದಗಾಣಿಸಲು ಡಿಸೈನರ್‌ಗಳು ಇರಬೇಕು. ರೂಪ ಗೊಳಿಸುವುದು ಅಂದರೇನು?

ಇಡೀ ಮನೆಯ ಸ್ಪೇಸ್‌ ಪ್ಲಾನಿಂಗ್‌ ಇವರೇ ಮಾಡೋದು. ಮನೆಗೆ ಗಾಳಿ ಎಲ್ಲಿಂದ ಬರುತ್ತದೆ? ಎಲ್ಲಿ ಕಿಟಕಿ ಇಟ್ಟರೆ ಚೆನ್ನಾಗಿ ಕಾಣುತ್ತದೆ? ಎಲ್ಲ ಋತುಮಾನಗಳಲ್ಲೂ ಮನೆಯಲ್ಲಿ ಗಾಳಿ ಬೆಳಕು ಇರುವಂತೆ ನೋಡಿಕೊಳ್ಳುವುದು ಹೇಗೆ? ಹೀಗೆ ಎಲ್ಲವನ್ನು ಡ್ರಾಫ್ಟ್ ಮಾಡಿ, ಜಾರಿ ಮಾಡುತ್ತಾರೆ. ಇಷ್ಟೇ ಅಲ್ಲ, ಮನೆಗೆ ಹೋಡೆಯುವ ಬಣ್ಣದ ಆಯ್ಕೆ ಕೂಡ ಇವರದೇ.

ಇವಿಷ್ಟೇ ಅಲ್ಲ, ಗೋಡೆ ಹೇಗಿರಬೇಕು, ಹೇಗೆ ಮಾಡಿದರೆ ನೋಟ ಚೆನ್ನಾಗಿರುತ್ತದೆ? ಅದಕ್ಕೆ ಬೇಕಾದ ಬಣ್ಣ, ಟೆಕ್ಚರ್‌, ಡೆಕೋರೇಟೀವ್‌ ಪ್ಲಾನಿಂಗ್‌ ಇವರೇ ಮಾಡುವುದು. ಆಮೇಲೆ, ಇಡೀ ಮನೆ ಚೆನ್ನಾಗಿ ಕಾಣೋಕೆ ಬಣ್ಣದಷ್ಟೇ ಮುಖ್ಯ ಲೈಟಿಂಗ್‌. ಯಾವ ಭಾಗಕ್ಕೆ, ಎಂಥ ಲೈಟಿಂಗ್‌ ಇರಬೇಕು ಅನ್ನೋ ಸ್ಪಷ್ಟ ಕಲ್ಪನೆ ಇವರಿಗಿರಬೇಕು. ಜೊತೆಗೆ, ಪೀಠೊಪಕರಣಗಳು ಕೇವಲ ಕೂರಲು ಮಾತ್ರವಲ್ಲ. ಇದು ಮನೆಯ ಸೌಂದರ್ಯ ಹೆಚ್ಚಿಸಲು ಕೂಡ ನೆರವಾಗಬೇಕು. ಅದಕ್ಕೆ, ಎಂತೆಂಥ ಫ‌ನೀìಚರ್‌ಗಳು ಇರಬೇಕು, ಈಗ ಬೇಡಿಕೆಯಲ್ಲಿರುವ ಫ‌ನೀìಚರ್‌ಗಳು ಯಾವುವು? ಅದನ್ನು ಸರಿಯಾದ ಸ್ಥಳಕ್ಕೆ ಸೇರಿಸುವುದು- ಇವೆಲ್ಲವನ್ನೂ ಇಂಟೀರಿಯರ್‌ ಡಿಸೈನರೇ ತೀರ್ಮಾನ ಮಾಡುವುದು. ದೊಡ್ಡ ಮಾಲ್‌, ಕಾಂಪ್ಲೆಕ್ಸ್‌ಗಳು, ಮದುವೆ ಮಂಟಪ, ಶ್ರೀಮಂತರ ಮನೆಗಳು ಇಲ್ಲೆಲ್ಲ ಕಟ್ಟಡದ ಶಿಲ್ಪದ ಜೊತೆಗೆ ಅಂದಕ್ಕೆ ಪ್ರಾಮುಖ್ಯತೆ ಜಾಸ್ತಿ ಇರುತ್ತದೆ. ಹೀಗಾಗಿ, ಇಂಟೀರಿಯರ್‌ಗಳಿಗೆ ಡಿಮ್ಯಾಂಡ್‌ ಜಾಸ್ತಿ ಇದೆ. ನೀವು ಏನ್‌ ಚೆನ್ನಾಗಿದೆ ಅವರ ಮನೆ ಅಂತ ಹೊಗಳಿದರೆ, ಅದರಲ್ಲಿ ಈ ಡಿಸೈನರ್‌ಗಳ ಪಾಲೂ ಇರುತ್ತದೆ ಅನ್ನೋದು ಗೊತ್ತಿರಲಿ.

Advertisement

ಈ ಇಂಟೀರಿಯರ್‌ ಡಿಸೈನರ್‌ಗಳಿಂದಲೇ ದೊಡ್ಡ ದೊಡ್ಡ ರಿಯಲ್‌ ಎಸ್ಟೇಟ್‌ ಕಂಪನಿಗಳು ಬ್ರಾಂಡ್‌ ಆಗುವುದೂ ಉಂಟು. ಬ್ರಾಂಡ್‌ ಉಳಿಸಿ, ಬೆಳೆಸಲು ಇವರು ತಲೆ ಖರ್ಚು ಮಾಡಬೇಕಾಗುತ್ತದೆ. ಎಷ್ಟೋ ಸಲ ಇಂಟೀರಿಯರ್‌ಗಳಿಂದಲೇ ಮಾರ್ಕೆಟಿಂಗ್‌ ಮಾಡುತ್ತಾರೆ. ಹೀಗಾಗಿ, ಕ್ರಿಯಾಶೀಲ ಡಿಸೈನರ್‌ಗಳಿಗೆ ಬೇಡಿಕೆ ಇದೆ. ಇಂಟೀರಿಯರ್‌ ಡಿಸೈನರ್‌ಗಳು ಕ್ಲೈಂಟ್‌ಗಳ ಜೊತೆ ಸಂಪರ್ಕದಲ್ಲಿರಬೇಕು. ಅವರ ಕನಸುಗಳನ್ನು ಜೋಡಿಸಿ ಇವರು ಮನೆ/ಕಟ್ಟಡಗಳನ್ನು ಶೃಂಗಾರ ಮಾಡಬೇಕಾಗುತ್ತದೆ.

ಕೋರ್ಸ್‌ಗಳು
ಇಂಟೀರಿಯರ್‌ ಡಿಸೈನಿಂಗ್‌ಗೆ ಪ್ರತ್ಯೇಕವಾದ ಕೋರ್ಸ್‌ಗಳಿವೆ. ಕೋರ್ಸ್‌ ಮಾಡುವುದರ ಜೊತೆಗೆ ತಂತ್ರಜ್ಞಾನ ಬಳಕೆಯ ಅರಿವಿದ್ದರೆ ಡಿಮ್ಯಾಂಡ್‌ ಹೆಚ್ಚು. ಇದರಲ್ಲೂ ಕೂಡ ದೀರ್ಘಾವಧಿ, ಅಲ್ಪಾವಧಿ ಕೋರ್ಸ್‌ಗಳು ಇವೆ. ಉದಾಹರಣೆಗೆ, ನ್ಯಾಷನಲ್‌ ಡಿಪ್ಲೊಮೊ ಇನ್‌ ಆರ್ಟ್‌ ಅಂಡ್‌ ಡಿಸೈನ್‌ (ಥ್ರಿಡಿ, ಇಂಟೀರಿಯರ್‌ ) ಲೆವೆಲ್‌3, ಡಿಪ್ಲೊಮೊ ಇನ್‌ ಆರ್ಕಿಟೆಕ್ಟ್ , ಇಂಟೀರಿಯರ್‌ ಪ್ರಾಡಕ್ಟ್ ಡಿಸೈನ್‌, ಇದರಲ್ಲೇ ಮೂರು ವರ್ಷಗಳ ಫ‌ುಲ್‌ಟೈಂ ಕೋರ್ಸ್‌ ಕೂಡ ಇದೆ. ಲೆವೆಲ್‌ 3 ಕೋರ್ಸ್‌ ಪೂರೈಸಿದವರಿಗೆ ಡಿಮ್ಯಾಂಡ್‌ ಜಾಸ್ತಿ ಇದೆ. ಸಾಂಪ್ರದಾಯಿಕ ಕೋರ್ಸ್‌ಗಳಾದ, ಬಿ.ಎ ಇನ್‌ ಇಂಟೀರಿಯ್‌ ಆರ್ಕಿಟೆಕ್ಟ್ ಅಂಡ್‌ ಡಿಸೈನ್‌, ಮೂರು ವರ್ಷಗಳ ಬಿಎ ಇನ್‌ ಇಂಟೀರಿಯರ್‌ ಡಿಸೈನ್‌, ಮೂರು ವರ್ಷದ ಬಿಎಸ್‌ಸಿ ಇನ್‌ ಇಂಟೀರಿಯರ್‌ ಡಿಸೈನ್‌ ಕೋರ್ಸ್‌ಗಳೂ ಲಭ್ಯ. ಐದು ವರ್ಷಗಳ ಬ್ಯಾಚುಲರ್‌ ಆಫ್ ಆರ್ಕಿಟೆಕ್ಟ್ ಇಂಟೀರಿಯರ್‌ ಡಿಸೈನ್‌, ನಾಲ್ಕು ವರ್ಷದ ಬ್ಯಾಚುಲರ್‌ ಆಫ್ ಇಂಟೀರಿಯರ್‌ ಡಿಸೈನ್‌ ಹೀಗೆ, ಅಧ್ಯಯನದ ಬಗ್ಗೆ ಆಸಕ್ತಿ ಇದ್ದರೆ, ಹಲವು ದಾರಿಗಳಿವೆ. ಪದವಿ ಮೆಟ್ಟಿಲು ಹತ್ತಲು ಕನಿಷ್ಠ ಪಿಯುಸಿ ಪಾಸಾಗಿರಬೇಕು. ಎಸ್‌ಎಸ್‌ಎಲ್‌ಸಿಯಲ್ಲಿ, ಪಿಯುಸಿಯಲ್ಲಿ ಶೇ. 50ರಷ್ಟು ಅಂಕ ಪಡೆದಿರಬೇಕು ಅಂತೆಲ್ಲಾ, ಕಾಲೇಜಿಂದ ಕಾಲೇಜಿಗೆ ನಿಬಂಧನೆಗಳೂ ಬದಲಾಗುತ್ತವೆ.

ಎಲ್ಲೆಲ್ಲಿ ಕಲಿಯಬಹುದು?
ಬೆಂಗಳೂರಿನ ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್ ಫ್ಯಾಷನ್‌ ಡಿಸೈನಿಂಗ್‌, ಮಣಿಪಾಲ್‌ ಅಕಾಡೆಮಿ ಆಫ್ ಹೈಯರ್‌ ಎಜುಕೇಷನ್‌, ಮಣಿಪಾಲ್‌ ಸ್ಕೂಲ್‌ ಆಫ್ ಆರ್ಕಿಟೆಕ್ಚರ್‌ ಅಂಡ್‌ ಪ್ಲಾನಿಂಗ್‌, ಬ್ಯಾಂಗಳೂರ್‌ ಸ್ಕೂಲ್‌ ಆಫ್ ಡಿಸೈನ್‌, ನಿಟ್ಟೆ ಇನ್‌ಸ್ಟಿಟ್ಯೂಟ್‌ ಯಲಹಂಕ ಇಲ್ಲೆಲ್ಲಾ ಪದವಿಗೆ ಅವಕಾಶವಿದೆ. ಪದವಿ ಜೊತೆಗೆ ತಾಂತ್ರಿಕ ಜ್ಞಾನ ಇದ್ದರೆ ಅಂದರೆ, ಸ್ಕೆಚ್‌ ಮಾಡಲು, ಕ್ಯಾಟ್‌ ಡಿಸೈನಿಂಗ್‌, 3ಡಿ ಇಂಟೀರಿಯರ್‌ ಡಿಸೈನಿಂಗ್‌, ಆರ್ಕಿಟೆಕ್ಚರ್‌ ಬಿಲ್ಡಿಂಗ್‌ ಕೋಡ್ಸ್‌ ಗೊತ್ತಿರುವವರನ್ನು ಹೀರಾನಂದಾನಿ, ಶೋಭಾ, ಮಂತ್ರಿ ಡೆವಲಪರ್ ನಂಥ ದೊಡ್ಡ ದೊಡ್ಡ ಕಂಪನಿಗಳು ಉದ್ಯೋಗ ಕೊಡಲು ಮುಂದಾಗುತ್ತಿರುವುದರಿಂದ ಕಡಿಮೆ ಸಂಬಳವಂತೂ ಇಲ್ಲ.

ಕೆ.ಜಿ

Advertisement

Udayavani is now on Telegram. Click here to join our channel and stay updated with the latest news.

Next