Advertisement

ಕೇಂದ್ರ ಸರ್ಕಾರದ ಈ ಲೋಗೋ ವಿನ್ಯಾಸ ಸ್ಪರ್ಧೆಯಲ್ಲಿ ಭಾಗವಹಿಸಿ 50,000 ರೂ. ಗೆಲ್ಲಿ..!

04:17 PM May 27, 2021 | Team Udayavani |

ನವ ದೆಹಲಿ : ಕೇಂದ್ರ ಸರ್ಕಾರದ ಒನ್ ನೇಷನ್ ಒನ್ ರೇಷನ್ ಕಾರ್ಡ್ ಯೋಜನೆಗಾಗಿ ಲೋಗೋವನ್ನು ವಿನ್ಯಾಸ ಸ್ಪರ್ಧೆಗೆ ಮುಕ್ತ ಅವಕಾಶವನ್ನು ನೀಡಿದೆ.

Advertisement

ಕೇಂದ್ರ ಸರ್ಕಾರದ ಸಿಟಿಜನ್  MyGov  ತನ್ನ ಅಧಿಕೃತ ಟ್ವೀಟರ್ ಖಾತೆಯ ಮೂಲಕ ಈ ಮಾಹಿತಿಯನ್ನುಹಂಚಿಕೊಂಡಿದೆ.

ಕೇಂದ್ರ ಸರ್ಕಾರದ ಒನ್ ನೇಷನ್ ಇನ್ ರೇಷನ್ ಲೋಗೋ ಸ್ಪರ್ಧೆಯಲ್ಲಿ ಭಾಗವಹಿಸಿ ಜಯಗಳಿಸಿದ ಸ್ಪರ್ಧಿಗೆ 50,000 ರೂ.ಗಳ ನಗದು ಬಹುಮಾನ ನೀಡಲಾಗುವುದು. ಮಾತ್ರವಲ್ಲದೇ, ವಿಜೇತರಿಗೆ ಕೇಂದ್ರ ಸರ್ಕಾರದ ಮುದ್ರೆ ಇರುವ ಇ-ಪ್ರಮಾಣ ಪತ್ರವನ್ನೂ ಕೊಡಲಾಗುತ್ತದೆ   ಎಂದು ಟ್ವೀಟರ್ ಮೂಲಕ  ತಿಳಿಸಿದೆ.

ಇದನ್ನೂ ಓದಿ : ಸಿ.ಎಂ. ಬದಲಾವಣೆ ಅಸಾಧ್ಯ : ಯಡಿಯೂರಪ್ಪ ಬೆಂಬಲಕ್ಕೆ ನಿಂತ ಶಾಸಕ ನಡಹಳ್ಳಿ

ಇನ್ನು, ಸ್ಪರ್ಧೆಯಲ್ಲಿ ಭಾಗವಹಿಸುವ ಮೂವರಿಗೆ ಸಮಾಧಾನಕರ ಬಹುಮಾನವಾಗಿ, ಇ-ಪ್ರಮಾಣ ಪತ್ರವನ್ನು ನೀಡಲಾಗುವುದು. ಸ್ಪರ್ಧೆಯಲ್ಲಿ ಭಾಗವಹಿಸಲು ಮೇ 31 ಮೇ 2021 ರ ಒಳಗೆ ಅರ್ಜಿ ಸಲ್ಲಿಸಬೇಕಾಗಿ MyGov ತನ್ನ ಟ್ವೀಟರ್ ಮಾಹಿತಿ ಮೂಲಕ ಹೇಳಿದೆ.

Advertisement

ಅರ್ಜಿ ಸಲ್ಲಿಸುವುದು ಹೇಗೆ..?

ಸರ್ಕಾರದ ಈ ಲೋಗೋ ಸ್ಪರ್ಧೆಯಲ್ಲಿ ಭಾಗವಹಿಸಲು, myGov.in ಪೋರ್ಟಲ್‌ ಗೆ ಭೇಟಿ ನೀಡಬೇಕಾಗುತ್ತದೆ. ನಂತರ, ಅವರು ಲಾಗಿನ್ ಟು ಪಾರ್ಟಿಸಿಪೇಟ್ ಟ್ಯಾಬ್ ನನ್ನು ಕ್ಲಿಕ್ ಮಾಡಿ.  ನಂತರ, ನೋಂದಣಿ ವಿವರಗಳನ್ನು ಭರ್ತಿ ಮಾಡಿ. ನೋಂದಣಿ ಆದ ನಂತರ ನಿಮ್ಮ ಎಂಟ್ರಿಯನ್ನು ಸಲ್ಲಿಸಿ.

ಇನ್ನು, ಕೇಂದ್ರ ಸರ್ಕಾರದ ಈ ಸರ್ಕಾರಿ ಲೋಗೋ ವಿನ್ಯಾಸ ಸ್ಪರ್ಧೆಯಲ್ಲಿ ಭಾಗವಹಿಸಲು ವಯಸ್ಸಿನ ಮಿತಿಯಿಲ್ಲ. ಸ್ಪರ್ಧಿಗಳು ಮೂರು ಬಾರಿ ಪ್ರವೇಶವನ್ನು ದಾಖಲಿಸಬಹುದಾಗಿದೆ.

ನಿಮ್ಮ ಲೋಗೋ ಹೇಗಿರಬೇಕು..?

ಲೋಗೋ jpg, bmp ಅಥವಾ  tiff ನ ಹೈರೆಸೆಲ್ಯುಶನ್ (600 ಡಿಪಿಐ)  ಫಾರ್ಮೇಟ್ ನಲ್ಲಿ ಇರಬೇಕು. ಲೋಗೋ ಹಿಂದಿ ಅಥವಾ ಇಂಗ್ಲಿಷ್ ಭಾಷೆಯಲ್ಲಿ ಇರಬೇಕು. ಹಾಗೂ ನೀವು ತಯಾರಿಸುವ ಲೋಗೋದ ಬಗ್ಗೆ 100 ಪದಗಳಲ್ಲಿ ಮಾಹಿತಿಯನ್ನು ಕೂಡಾ ನೀಡುವುದು ಅವಶ್ಯಕವಾಗಿದೆ.

ಇದನ್ನೂ ಓದಿ : ನನಗೆ ಕಣ್ಣು ನೋವು ಇದ್ದಿದ್ದರಿಂದ ಕಾರಿಂದ ಕೆಳಗೆ ಇಳಿಯಲಿಲ್ಲ: ಶಾಸಕ ಸುರೇಶ್ ಸ್ಪಷ್ಟೀಕರಣ

Advertisement

Udayavani is now on Telegram. Click here to join our channel and stay updated with the latest news.

Next