Advertisement

Desi Swara: ಕತಾರ್‌- ಭಾರತೀಯ ಸಾಂಸ್ಕೃತಿಕ ಕೇಂದ್ರ- ಕಲಾವಿದರಿಗೆ ಸಮ್ಮಾನ

01:46 PM Nov 18, 2023 | Team Udayavani |

ಕತಾರ್‌:ಕತಾರ್‌ನ ಭಾರತೀಯ ಸಾಂಸ್ಕೃತಿಕ ಕೇಂದ್ರದ ಮುಂಬಯಿ ಸಭಾಂಗಣದಲ್ಲಿ ಕರ್ನಾಟಕದ ಪ್ರಸಿದ್ಧ ಕಲಾವಿದರನ್ನು ಆದರದಿಂದ ಗೌರವಿಸಲಾಯಿತು. ಕರ್ನಾಟಕ ಸಂಘ ಕತಾರ್‌ ಸಂಭ್ರಮದಿಂದ ಆಚರಿಸಿದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದ ಪ್ರಯುಕ್ತ ಹೆಸರಾಂತ ಕಲಾವಿದರು ಕತಾರ್‌ ದೇಶದ ದೋಹಾ ನಗರಕ್ಕೆ ಆಗಮಿಸಿದ್ದರು.

Advertisement

ಕರ್ನಾಟಕ ರಾಜ್ಯದಾದ್ಯಂತ ಪ್ರಸಿದ್ಧಿ ಪಡೆದಿರುವ ಕನ್ನಡದ ಜೋಗಿ ಎಂದೆ ಚಿರಪರಿಚಿತರಾದ ಗಿರೀಶ್‌ ರಾವ್‌ ಜೋಗಿ ಅವರು, ಎದೆ ತುಂಬಿ ಹಾಡುವೆನು ಖ್ಯಾತಿಯ ಶ್ರೀನಿಧಿ ಶಾಸ್ತ್ರಿ, ಶಾಸ್ತ್ರೀಯ ಸಂಗೀತ ಹಾಗೂ ಚಲನಚಿತ್ರ ಗೀತೆಗಳು ಮಧುರ ಕಂಠದ ಕುಮಾರಿ ಭೂಮಿಕ ಮಧುಸೂದನ್‌ ಹಾಗೂ ರಾಷ್ಟ್ರಮಟ್ಟದ ನಿರೂಪಕಿ ಸವಿಪ್ರಕಾಶ್‌ ಅವರುಗಳನ್ನು ಭಾರತೀಯ ಸಾಂಸ್ಕೃತಿಕ ಕೇಂದ್ರದ ಅಧ್ಯಕ್ಷರಾದ ಎ. ಪಿ. ಮಣಿಕಂಠನ್‌ ಅವರ ನೇತೃತ್ವದಲ್ಲಿ ಐಸಿಸಿ ಉಪಾಧ್ಯಕ್ಷರಾದ ಸುಬ್ರಹ್ಮಣ್ಯ ಹೆಬ್ಟಾಗಿಲು ಅವರ ಸಹಯೋಗದೊಂದಿಗೆ, ಪ್ರಧಾನ ಕಾರ್ಯದರ್ಶಿಗಳಾದ ಮೋಹನ್‌ ಕುಮಾರ್‌ ಅವರ ಉಪಸ್ಥಿತಿಯಲ್ಲಿ ಹಾಗೂ ಕರ್ನಾಟಕ ಸಂಘ ಕತಾರ್‌ ಅಧ್ಯಕ್ಷರಾದ ಮಹೇಶ್‌ ಗೌಡ ಅವರ ಸಮ್ಮುಖದಲ್ಲಿ ಸಮ್ಮಾನಿಸಲಾಯಿತು. ಭಾರತೀಯ ಸಾಂಸ್ಕೃತಿಕ ಕೇಂದ್ರದ ಆಡಳಿತ ಸಮಿತಿಯ ಇತರ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮ ಸರಳವಾಗಿ ನೆರವೇರಿತು. ಉಪಸ್ಥಿತರಿದ್ದ ಸಮಸ್ತ ಕಲಾವಿದರು ಹಾಗೂ ಗಣ್ಯರು ಹರ್ಷವನ್ನು ವ್ಯಕ್ತಪಡಿಸಿದರು. ಕತಾರ್‌ನಲ್ಲಿ ನೆಲೆಸಿರುವ ಭಾರತೀಯರು ಕರ್ನಾಟಕ ಮೂಲದ ಸಮ್ಮಾನಿತರಿಗೆ ಅಭಿನಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next