Advertisement
ಕನ್ನಡಿಗರ ಕನ್ನಡ ಕೂಟ (ಕನ್ನಡಿಗರು ದುಬಾೖ) ಸಮಿತಿ ಅಧ್ಯಕ್ಷ ಅರುಣ್ ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಡಾ| ಸಿ.ಎನ್. ಮಂಜುನಾಥ್, ಸಂಸದರು – ಲೋಕಸಭಾ ಸದಸ್ಯರು, ಹೆಸರಾಂತ ಹೃದ್ರೋಗ ತಜ್ಞ ಮತ್ತು ಬೆಂಗಳೂರಿನ ಜಯದೇವ ಇನ್ಸ್ಟಿಟ್ಯೂಟ್ ಆಫ್ ಕಾರ್ಡಿಯೋವಾಸ್ಕಾಲರ್ಸೈನ್ಸ್- ರಿಸರ್ಚ್ನ ಮಾಜಿ ನಿರ್ದೇಶಕರು, ದಂಪತಿ ಸಮೇತರಾಗಿ ಪಾಲ್ಗೊಂಡು “ಕನ್ನಡ ರತ್ನ’ ಪ್ರಶಸ್ತಿ ಸ್ವೀಕರಿಸಿ ಕಾರ್ಯಕ್ರಮದ ಕೇಂದ್ರ ಬಿಂದುವಾಗಿ ಮತ್ತು ಮುಖ್ಯ ಭಾಷಣಕಾರರಾಗಿ ದುಬಾೖ ಕನ್ನಡಿಗರನ್ನುದ್ದೇಶಿಸಿ ಕನ್ನಡ ನಾಡಿನ ಕಲೆ, ಸಾಹಿತ್ಯ, ಸಂಸ್ಕೃತಿ, ಪರಂಪರೆ, ಆರೋಗ್ಯ, ಆಹಾರ, ಸಂಬಂಧಗಳ ಬಗ್ಗೆ ಸುದೀರ್ಘವಾಗಿ ಮಾತನಾಡಿದರು.
Related Articles
Advertisement
ಪ್ರವೀಣ್ ಶೆಟ್ಟಿ NRI ಫೋರಂ ಯುಎಇ ಅವರು ಕನ್ನಡಿಗರು ಕನ್ನಡ ಕೂಟದ ವೇದಿಕೆಯಲ್ಲಿಯೇ ಕನ್ನಡ ಭವನಕ್ಕಾಗಿ ಆಗ್ರಹಿಸಿದರು. ನಮಗೆ ಕನ್ನಡ ಭವನ್ ನಿರ್ಮಿಸಲು ಹಣದ ಆವಶ್ಯಕತೆ ಇಲ್ಲ, ಸರಕಾರದ ಮಟ್ಟದಲ್ಲಿ ಅನುಮತಿ ಕೊಡಿಸುವಂತೆ ಕನ್ನಡ NRI ಫೋರಂನ ಅಧ್ಯಕ್ಷರಾದ ಡಾ| ಆರತಿ ಕೃಷ್ಣ ಮತ್ತು ಸಂಸದರಾದ ಡಾ| ಸಿ. ಎನ್. ಮಂಜುನಾಥ್ ಅವರನ್ನು ವಿನಂತಿಸಿದರು.
ಡಾ| ಆರತಿ ಕೃಷ್ಣ ಅವರು ತಮ್ಮ ಭಾಷಣದಲ್ಲಿ ಮುಂದಿನ ರಾಜ್ಯೋತ್ಸವದ ವೇಳೆ ಶುಭ ಸುದ್ದಿಯೊಂದಿಗೆ ಮರಳುವುದಾಗಿ ಘೋಷಿಸಿದರು. ಕನ್ನಡ ಸಾಹಿತ್ಯ ಪರಿಷತ್ನ ಅಧ್ಯಕ್ಷರಾದ ನಾಡೋಜ ಡಾ| ಮಹೇಶ್ ಜೋಶಿ ಅವರು ಕನ್ನಡಿಗರು ಕನ್ನಡ ಕೂಟದ ಕಾರ್ಯಗಳನ್ನು ಶ್ಲಾ ಸಿ, ಕನ್ನಡ ಭವನ ನಿರ್ಮಾಣಕ್ಕಾಗಿ ಸಾಹಿತ್ಯ ಪರಿಷತ್ನ ಕಡೆಯಿಂದ ಬೇಕಾದ ರೀತಿಯಲ್ಲಿ ಸಹಕರಿಸುವುದಾಗಿ ತಿಳಿಸಿದರು.
ಸಂಜೆ ನೆಡೆದ ಕಾರ್ಯಕ್ರಮದಲ್ಲಿ ಕನ್ನಡ NRI ಫೋರಂನ ಅಧ್ಯಕ್ಷರಾದ ಡಾ| ಆರತಿ ಕೃಷ್ಣ, ಕನ್ನಡ ಸಾಹಿತ್ಯ ಪರಿಷತ್ನ ಅಧ್ಯಕ್ಷರಾದ ನಾಡೋಜ ಡಾ| ಮಹೇಶ್ ಜೋಶಿ, ಡಾ| ಬಿ.ಆರ್.ಶೆಟ್ಟಿ ಉದ್ಯಮಿಗಳು, ಪ್ರವೀಣ್ ಶೆಟ್ಟಿ ಅಧ್ಯಕ್ಷರು ಫಾರ್ಚ್ಯೂನ್ ಹೊಟೇಲ್ಸ್ , ಸರ್ವೋತ್ತಮ ಶೆಟ್ಟಿ ಅಧ್ಯಕ್ಷರು ಅಬುಧಾಬಿ ಕನ್ನಡ ಸಂಘ, ಸತೀಶ್ ಪೂಜಾರಿ ಅಧ್ಯಕ್ಷರು ಶಾರ್ಜಾ ಕನ್ನಡ ಸಂಘ, ಬು ಅಬ್ದುಲ್ಲಾ ಉದ್ಯಮಿಗಳು ಯುಎಈ, ಕನ್ನಡಿಗರ ಕನ್ನಡ ಕೂಟ (ಕನ್ನಡಿಗರು ದುಬಾೖ) ನ ನಿಕಟಪೂರ್ವ ಅಧ್ಯಕ್ಷರಾದ ಸಾದನ್ ದಾಸ್ ಮುಂತಾದ ಗಣ್ಯರು ಮತ್ತು ಕನ್ನಡಿಗರ ಕನ್ನಡ ಕೂಟ (ಕನ್ನಡಿಗರು ದುಬಾೖ) ಸಂಘದ ಸದಸ್ಯರು, ಪದಾಧಿಕಾರಿಗಳು ಉಪಸ್ಥಿತರಿದ್ದು ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿದರು.
ಇದೇ ಕಾರ್ಯಕ್ರಮದಲ್ಲಿ ಡಾ| ಸುಷ್ಮಾ ಶಂಕರ್ ಅವರ ಭೂತದ ಹಾಡು ಪುಸ್ತಕನ್ನು ಲೋಕಾರ್ಪಣೆಗೊಳಿಸಲಾಯಿತು. ಅಲ್ಲದೇ ಅಂತಾರಾಷ್ಟ್ರೀಯ ಬೈಕ್ ರೇಸರ್ಐಶ್ವರ್ಯ ಪಿಸ್ಸೆ ಅವರ ಸಾಧನೆಗಾಗಿ ಸಮ್ಮಾನಿಸಲಾಯಿತು. ದಿ| ನರಸಿಂಹರಾಜು ಅವರ ಜನ್ಮ ಶತಮಾನೋತ್ಸವ ಸಂದರ್ಭದಲ್ಲಿ ಕನ್ನಡಿಗರು ದುಬಾೖ ಸಂಘದ ಸದಸ್ಯರು ಗೌರವ ಸಲ್ಲಿಸಿದರು.
ಅವರ ಮಗಳಾದ ಸುಧಾ ನರಸಿಂಹರಾಜು ಅವರು ವೀಡೀಯೋ ಮೂಲಕ ದುಬಾೖ ಕನ್ನಡಿಗರಿಗೆ ವಂದನೆ ಸಲ್ಲಿಸಿದರು.ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಭೈರತಿ ರಣಗಲ್ ಚಿತ್ರದ ಟ್ರೇಲರ್ ಅನ್ನು ಪ್ರದರ್ಶಿಸಿದ್ದು ದುಬಾೖ ಕನ್ನಡಿಗರ ಉತ್ಸಾಹವನ್ನು ಇಮ್ಮಡಿಗೊಳಿಸಿತ್ತು. ಕಾರ್ಯಕ್ರಮದ ಪ್ರಾಯೋಜಕರನ್ನು ಮುಖ್ಯ ಅತಿಥಿಗಳು ಸಮ್ಮಾನಿಸಿ ಉತ್ತೇಜಿಸಿದ್ದು ಕಾರ್ಯಕ್ರಮದ ವಿಶೇಷಗಳಲ್ಲಿ ಒಂದು.
ಈ ಕಾರ್ಯಕ್ರಮಕ್ಕೆ ಸಂಯುಕ್ತ ಅರಬ್ ಸಂಸ್ಥಾನದ ವಿವಿಧ ಭಾಗಗಳಿಂದ ಸಾವಿರಾರು ಕನ್ನಡಿಗರು ಭಾಗವಹಿಸಿದ್ದರಲ್ಲದೇ ಕಲಾವಿದರು ಹಾಡು, ನೃತ್ಯ ಸೇರಿದಂತೆ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಲಾ ಪ್ರತಿಭೆಯನ್ನು ಪ್ರದರ್ಶಿಸಿದರು. ಕಾರ್ಯಕ್ರಮದುದ್ದಕ್ಕೂ ಹಳದಿ, ಕೆಂಪು ಬಾವುಟ ಹಾರಾಡಿ, ಎಲ್ಲರ ಬಾಯಲ್ಲಿ ಕನ್ನಡ ಜಯಘೋಷ ಮೊಳಗಿತು. ಕಾರ್ಯಕ್ರಮದ ನಿರೂಪಣೆಯನ್ನು ವಹಿಸಿದ್ದ ರವಿ ಸಂತು ಅಚ್ಚುಕಟ್ಟಾಗಿ ನಿರ್ವಹಿಸಿ ಎಲ್ಲರ ಗಮನ ಸೆಳೆದರು.