Advertisement

Desi Swara: ಕನ್ನಡಿಗಾಸ್‌ ಸ್ಟಾರ್‌ ಅವಾರ್ಡ್‌ 2024 ಪ್ರದಾನ

12:17 PM Mar 23, 2024 | Team Udayavani |

ದುಬೈ: ಇಲ್ಲಿ ಮಾ.2ರಂದು ಕಾಲ್ಟನ್‌ ಹೊಟೇಲ್‌ ಸಭಾಂಗಣದಲ್ಲಿ ಸಂಯುಕ್ತ ಅರಬ್‌ ಸಂಸ್ಥಾನದಲ್ಲಿ ನೆಲಸಿರುವ ಕನ್ನಡಿಗ ಸೋಶಿಯಲ್‌ ಮೀಡಿಯಾ ಇನ್‌ಫ್ಲುಯನ್ಸ್‌ರ್‌ ಅವಾರ್ಡ್‌ ಕಾರ್ಯಕ್ರಮ ನಡೆಯಿತು. ರಾಯಲ್‌ ವಿಂಕೋ ಇವೆಂಟ್ಸ್‌ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಸಾಮಾಜಿಕ ಜಾಲತಾಣದಲ್ಲಿ ತಮ್ಮದೇ ಆದ ರೀತಿಯಲ್ಲಿ ಪ್ರತಿಭೆಯನ್ನು ಪ್ರದರ್ಶಿಸುತ್ತಿರುವ ಅನೇಕ ಕನ್ನಡಿಗ ಸೋಶಿಯಲ್‌ ಮೀಡಿಯಾ ಇನ್‌ಫ್ಲುಯನ್ಸ್‌ರ್‌ ಬಂದು ಪ್ರಶಸ್ತಿ ಸ್ವೀಕರಿಸಿದರು.

Advertisement

ದುಬೈ ಉದ್ಯಮಿ ಔಸಾಫ್ ಕನ್ನಡಿಗ ಮತ್ತು ದುಬೈ ಅನಿವಾಸಿ ಕನ್ನಡಿಗರ ಪ್ರಮುಖರಾದ ಫಿರೋಜ್‌ ಅವರು ಬಹಳ ಅಚ್ಚುಕಟ್ಟಾಗಿ ಕಾರ್ಯಕ್ರಮವನ್ನು ಆಯೋಜಿದ್ದರು. ಈ ಕಾರ್ಯಕ್ರಮಕ್ಕೆ ಯುಎಇ ದೇಶದಲ್ಲಿರುವ ಅನೇಕ ಸಾಮಾಜಿಕ ವ್ಯಾವಹಾರಿಕ ಪ್ರಮುಖರು ಆಗಮಿಸಿದ್ದರು.

* ರಫೀಕಲಿ ದುಬೈ ಕನ್ನಡಿಗ

Advertisement

Udayavani is now on Telegram. Click here to join our channel and stay updated with the latest news.

Next