Advertisement

Desi swara: ಭಾರತೀಯ ಸಾಂಸ್ಕೃತಿಕ ಕೇಂದ್ರ: ಸ್ವಾತಂತ್ರ್ಯೋತ್ಸವ

03:51 PM Aug 24, 2024 | Team Udayavani |

ಕತಾರ್‌: ಭಾರತೀಯ ಸಾಂಸ್ಕೃತಿಕ ಕೇಂದ್ರದ ಆವರಣದಲ್ಲಿ ಆ.15ರಂದು ಗೌರವಾನ್ವಿತ ಭಾರತೀಯ ರಾಯಭಾರಿಗಳಾದ ವಿಪುಲ್‌ ಅವರು ಆಗಮಿಸಿ ಸುಮಾರು 300ಕ್ಕೂ ಹೆಚ್ಚು ಭಾರತೀಯರ ಸಮ್ಮುಖದಲ್ಲಿ ಭಾರತೀಯ ತ್ರಿವರ್ಣ ಧ್ವಜಾರೋಹಣ ನೆರವೇರಿಸಿದರು.

Advertisement

ಭಾರತೀಯ ಸಾಂಸ್ಕೃತಿಕ ಕೇಂದ್ರದ ಆಡಳಿತ ಸಮಿತಿಯ ಸದಸ್ಯರು, ಭಾರತೀಯ ಸಮುದಾಯ ಹಿತೈಷಿ ವೇದಿಕೆ ಆಡಳಿತ ಸಮಿತಿಯ ಸದಸ್ಯರು, ಭಾರತೀಯ ಸಮುದಾಯದ ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು ಹಾಗೂ ನಾಯಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಧ್ವಜಾರೋಹಣದ ಅನಂತರ ಭಾರತೀಯ ಸಾಂಸ್ಕೃತಿಕ ಕೇಂದ್ರದ ಅಶೋಕಾ ಸಭಾಂಗಣದಲ್ಲಿ ಭಾರತೀಯ ರಾಯಭಾರಿಗಳಾದ ವಿಪುಲ್‌ ಅವರು ಭಾರತೀಯ ರಾಷ್ಟ್ರಪತಿಗಳ ಸಂದೇಶವನ್ನು ಸಭಿಕರಿಗೆ ರವಾನಿಸಿದರು. ಅನಂತರ ಭಾರತೀಯ ಸಾಂಸ್ಕೃತಿಕ ಕೇಂದ್ರದ ಅಧ್ಯಕ್ಷರಾದ ಮಣಿಕಂಠನ್‌ ಭಾಷಣವನ್ನು ಮಾಡಿದರು.

ರಾಷ್ಟ್ರಭಕ್ತಿ ಹಾಗೂ ದೇಶಾಭಿಮಾನವನ್ನು ಪ್ರತಿಬಿಂಬಿಸುವ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಶಾಲಾ ಮಕ್ಕಳು ಹಾಗೂ ಕಲಾವಿದರು ಸೇರಿ ಭಾರತೀಯ ಸ್ವಾತಂತ್ರ್ಯೋತ್ಸವದ ವಿಜೃಂಭಣೆಯನ್ನು ಹೆಚ್ಚಿಸಲು ಕಾರಣರಾದರು.

ಕಾರ್ಯಕ್ರಮದ ಆಯೋಜನೆಯಲ್ಲಿ ಹಲವಾರು ಸೇವಾಕರ್ತರು ಹಾಗೂ ಸ್ವಯಂಸೇವಕರು ತಮ್ಮ ಅಮೂಲ್ಯವಾದ ಸಮಯ ಹಾಗೂ ಪರಿಶ್ರಮದಿಂದ ಹಾಕಿದ್ದರಿಂದ ಸಫಲಗೊಳಿಸಲು ಸಹಾಯವಾಯಿತು. ಭಾರತೀಯ ಸಾಂಸ್ಕೃತಿಕ ಕೇಂದ್ರದ ಉಪಾಧ್ಯಕ್ಷರಾದ ಸುಬ್ರಹ್ಮಣ್ಯ ಹೆಬ್ಟಾಗಿಲು ಅವರು ನಡೆಸಿದ ಭಾರತೀಯ ರಾಯಭಾರಿ ಕಾರ್ಯಾಲಯದ ಅಧಿಕಾರಿಗಳ ಸಹಯೋಗದಿಂದ ಹಾಗೂ ಭಾರತೀಯ ಮೂಲದ ಸಹೋದರ ಸಂಘ ಸಂಸ್ಥೆಗಳ ಸಹಕಾರದಿಂದ ಕಾರ್ಯಕ್ರಮವು ಸುಸೂತ್ರವಾಗಿ ಸಂಪನ್ನಗೊಳ್ಳಲು ಸಾಧ್ಯವಾಯಿತು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next