Advertisement
ಈ ವರ್ಷ 60ನೇ ಸಂವತ್ಸರದ ಸಮ್ಮೇಳನ, ಇಟಲಿಯ ಕಮಾಲ್ಡೋಲಿ ಅನ್ನುವ ಜಾಗದಲ್ಲಿ ನಡೆಯಿತು. “ದೇವ ಮಾನವನನ್ನಾರಿಸಿ ಎಡೆನ್ ತೋಟದಲ್ಲಿ ಬಿಟ್ಟು ಇದನ್ನು ಬೆಳೆಸಿ ಕಾಪಾಡು’ ಬೈಬಲ್ ಗ್ರಂಥದಿಂದ ಆರಿಸಿದ ಈ ಸಾಲುಗಳ ಆಧಾರಿತ “ಭೂಮಿ ವಾಸಿಸಲು ಹಾಗೂ ರಕ್ಷಿಸಲು ‘ ಇದೆ ಸಮ್ಮೇಳನದ ವಿಷಯವಾಗಿತ್ತು. ನಾನು ಮಾತಾಡುತ್ತ ಪಂಚಮಹಾಭೂತಗಳಲ್ಲಿ ಒಂದಾದ ಭೂಮಿ ನಮಗೆ ಭೂಮಾತಾ. ಹಾಗೆಯೆ ಪ್ರಕೃತಿ ದೇವರು, ಇದನ್ನು ಸಂತ ಫ್ರಾನ್ಸಿಸ್ಕೋ ತನ್ನ ಕಾಂತಿಕೆ ದೆಲ್ಲೆ ಕ್ರೆಯಾತುರೆ ಗ್ರಂಥದಲ್ಲಿ ಹೇಳಿದ್ದಾರೆ. ಈ ಗ್ರಂಥ ಪಂಚ ಮಹಾಭೂತಗಳ ವರ್ಣನೆ. ಇದರಲ್ಲಿ ಜಲ,ಅಗ್ನಿ, ಭೂಮಿ, ಆಕಾಶ, ವಾಯು ಎಲ್ಲ ದೇವರೆಂದಿದ್ದಾರೆ.
Related Articles
Advertisement
ಸಮ್ಮೇಳನದ ವಿಷಯ “ಮತಗಳು ಮತ್ತು ಭೂಮಿ’ ಎರಡಕ್ಕೂ ಇರುವ ಸಂಪರ್ಕ. ಪಂಚೇದ್ರಿಯಗಳಲ್ಲಿ ಒಂದಾದ ಭೂಮಿ ಭೂಮಾತಾ ಇದನ್ನು ಹೇಗೆ ಕಾಪಾಡುವುದು? ಇದರ ಬಗ್ಗೆ ಚರ್ಚೆ ನಡೆದಿತ್ತು. “ಈ ಭೂಮಿ ಬಣ್ಣದ ಬುಗುರಿ’ ಜಿಯನ್ನ ಅವರ ಗಾಯನದ ಮೂಲಕ ನನ್ನ ಭಾಷಣ ಆರಂಭಿಸಿ, ಈ ಹಾಡಿನ ಅರ್ಥ ಎಷ್ಟು ಚೆನ್ನಾಗಿ ಭೂಮಿಯನ್ನು ಒಂದು ಬಣ್ಣದ ಬುಗುರಿಗೆ ಹೋಲಿಸಿ ಮಾನವನ ಕರ್ತವ್ಯಗಳನ್ನು ವಿವರಿಸಿದ್ದಾರೆ ಎಂದು ಹೇಳಿ ನಾವು ಭೂಮಿಯಲ್ಲಿ ಹುಟ್ಟಿ ಅದರಲ್ಲಿ ಒಂದಾಗುತ್ತೇವೆ ಎಂದು ಸಮರ್ಥಿಸಿದೆ.
ಭೂಮಿ ನಮಗೆ ಭೂಮಾತಾ ಎಲ್ಲವು ಭೂಗರ್ಭದಲ್ಲಿ ಅಡಗಿದೆ, ವಿಷ್ಣು ವರಾಹಾವತಾರ ತಾಳಿ ರಕ್ಕಸ ಕಡಲಲ್ಲಿ ಮುಳುಗಿಸಿದ್ದ ಭೂಮಿಯನ್ನು ರಕ್ಷಿಸಿದನು. ಕೃಷ್ಣ ಭೂಮಂಡಲವನ್ನು ತನ್ನ ಬಾಯಲ್ಲಿ ಯಶೋದೆಗೆ ತೋರಿದನು. ಸೃಷ್ಟಿಕರ್ತ ಬ್ರಹ್ಮನು ವಿಷ್ಣುವಿನ ಹೊಕ್ಕಳಿಂದ ಹೊರಟ ಕಮಲದಲ್ಲಿ ಕುಳಿತು ಓಂಕಾರದೊಂದಿಗೆ, ವೇದಘೋಷಣೆಯೊಂದಿಗೆ, ಭೂಮಿಯನ್ನು ಸೃಷ್ಟಿ ಮಾಡಿದ ಬ್ರಹ್ಮ ಮತ್ತೆ ಎಲ್ಲ ಸುಖ ಸಂಪತ್ತುಗಳನ್ನು ಮಾನವನಿಗಿಟ್ಟ. “ಕೈಮುಗಿದು ಒಳಗೆ ಬಾ ಇದು ಸಸ್ಯಕಾಶಿ’ ಸಸ್ಯ ಸಂಪತ್ತು ಪವಿತ್ರ ಕಾಶಿಯಷ್ಟೇ ಪವಿತ್ರ. ದೇವರು ಸಸ್ಯ ಕಾಶಿ ಸೃಷ್ಟಿಸಿ ಪವಿತ್ರ ಮರಗಳನ್ನು ನೀಡಿ ಬಿಲ್ಪತ್ರೆಯ ಒಂದು ಎಲೆ ಶಿವನಿಗರ್ಪಿಸಿದರೆ ಮೋಕ್ಷ ಸಾಧ್ಯ ಎಂದೆ.
ಜೀವನದ ಮೋಕ್ಷ ಹಾಗೂ ಸಂಸಾರದ ಬಗ್ಗೆ, ದಶಾವತಾರಾ, ರಾಮಾಯಣದ ಬಗ್ಗೆ ಮಾಹಿತಿಗಳನ್ನು ಹಂಚಿಕೊಂಡೆ. ನಮ್ಮ ದಿನಚರಿಯಲ್ಲಿ ಭೂಮಿಯ ಪಾತ್ರ ಹೇಳುವಾಗ ತುಳಸಿಯ ಪ್ರಾಮುಖ್ಯ, ಬಾಳೆ ಎಲೆಯ ಶ್ರೇಷ್ಠತೆ, ಬಿಲ್ಪತ್ರೆಯ ಮಹತ್ವ, ವೀಲೆÂàದೆಲೆ ಗುಣಗಳು ಮತ್ತೆ ಭೂದಾನದ ಫಲ, ನೆಲಕ್ಕೆ ಏಕೆ ನಮಸ್ಕರಿಸುತ್ತೇವೆ, ಭೂಮಿ ಪೂಜೆ ಭೂದಾನಗಳ ವಿಷಯ ಹೇಳಿದೆ.
ಭೂಮಿಯ ರಕ್ಷಣೆ ಏಕೆ ಬೇಕು ? ಇದನ್ನು ಹೇಗೆ ಮಾಡಬೇಕು ?ನಾವು ನಮ್ಮ ಮನೆಗಳನ್ನು ಹೇಗೆ ಕಾಪಾಡಿಕೊಳ್ಳುತ್ತೇವೋ ಹಾಗೆಯೇ ನಮ್ಮ ಭೂಮಿಯನ್ನು ಕಾಪಾಡಬೇಕು. ಭೂಮಿಯ ಆರೋಗ್ಯವೇ ಶಾಂತಿ! ಶಾಂತಿ ಸ್ಥಾಪನೆಗೆ ಉತ್ತಮ ಮಾಧ್ಯಮ ಧರ್ಮ ಎಂದು ಹೇಳಿ ಮನುಸ್ಮತಿಯನ್ನು ಸಂಕ್ಷಿಪ್ತವಾಗಿ ವಿವರಿಸಿ ಧರ್ಮವಷ್ಟೇ ಮುಖ್ಯ ಸತ್ಕರ್ಮ, ಕರ್ಮ ಮತ್ತು ಧರ್ಮ ಮಾರ್ಗದಿಂದ ವಸುಧೈವ ಕುಟುಂಬಕಂ ನಡೆದರೆ ಈ ಭೂಮಿ ಶಾಂತಿಧಾಮ ಆಗುವುದರಲ್ಲಿ ಸಂದೇಹವಿಲ್ಲ.
ಹಿಂದೂಮತದ ದೃಷ್ಟಿಕೋನದಲ್ಲಿ ಭೂಮಿ, ಧರ್ಮೋ ರಕ್ಷತಿ ರಕ್ಷಿತಃ ಅನ್ನುವಂತೆ ಧರ್ಮ ಒಂದು ಉತ್ತಮ ಮಾಧ್ಯಮ ಎರಡನೇ ಶತಮಾನದಲ್ಲಿ ಬರೆದ ಮನು ಚಕ್ರವರ್ತಿಯ ಮನು ಧರ್ಮ ಶಾಸ್ತ್ರ ದ ಬಗ್ಗೆ ವಿವರಿಸಿ ಇಂದಿಗೂ ಧರ್ಮಶಾಸ್ತ್ರದ ಅನೇಕ ನೀತಿಗಳು ಶಾಸ್ತ್ರಗಳು ನಮ್ಮ ದಿನಚರಿ ಯಲ್ಲಿದೆ. ಈ ಶಾಸ್ತ್ರಗಳಿಗೆ ವಿರುದ್ಧ ನಡೆದು ಅಧರ್ಮ ತಲೆ ಎತ್ತಿದರೆ ಜನರಿಗೆ ತೊಂದರೆ ಉಂಟಾಗಿ ಶಾಂತಿ ಸ್ಥಾಪನೆಗೆ ಕುಂದು ಬರಬಹುದು. ಧರ್ಮದ ಜತೆ ಸತ್ಕರ್ಮಗಳನ್ನು ಮಾಡಬೇಕು. ಶಾಂತಿ ಸ್ಥಾಪನೆಗೆ ಎಂದು ಹೇಳಿದಾಗ ನೂರಾರು ಜನ ಮೆಚ್ಚಿ ತಲೆ ತೂಗಿದಾಗ ಆತ್ಮತೃಪ್ತಿ ಆಯಿತು.”ವೈಷ್ಣವ ಜನತೋ’ ಹಾಡಿಗೆ ಆತ್ಮಾನಂದ ಅವರ ನೃತ್ಯ ಎಲ್ಲರನ್ನು ಸಂತಸಗೊಳಿಸಿತ್ತು. ನಿಸರ್ಗದಲ್ಲಿ ಮಾಡಿದ ನೃತ್ಯ ಭೂಮಾತೆಗೆ ನಮಿಸಿತ್ತು.