Advertisement

Desi Swara: ಭಾರತ ರಾಯಭಾರ ಕಚೇರಿಯಲ್ಲಿ ಧ್ವಜಾರೋಹಣ

03:39 PM Aug 24, 2024 | Team Udayavani |

ಐರ್ಲೆಂಡ್‌: ಇಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರು ಆ.15ರಂದು ಭಾರತದ ರಾಯಭಾರ ಕಚೇರಿಯಲ್ಲಿ ಭಾರತದ 78ನೇ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಿದರು. ಸುಮಾರು ಮುನ್ನೂರಕ್ಕೂ ಹೆಚ್ಚು ಜನರು ಈ ಆಚರಣೆಯಲ್ಲಿ ಭಾಗವಹಿಸಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಿದರು. ಮಕ್ಕಳು, ಹಿರಿಯರು ವರ್ಣವರ್ಣದ ಉಡುಗೆ ತೊಟ್ಟಿದ್ದರು.

Advertisement

ಭಾರತದ ರಾಯಭಾರಿ ಕಚೇರಿಯಲ್ಲಿ ಆಯೋಜಿಸಿದ ಈ ಕಾರ್ಯಕ್ರಮದಲ್ಲಿ ಐರಿಶ್‌ ಕನ್ನಡಿಗರು ಹಾಗೂ ಐರ್ಲೆಂಡ್‌ನ‌ಲ್ಲಿ ನೆಲೆಸಿರುವ ಇತರ ರಾಜ್ಯದ ಮುಖಂಡರು ನೆರೆದಿದ್ದರು. ಭಾರತದ ರಾಯಭಾರಿಗಳಾದ ಅಖೀಲೇಶ್‌ ಮಿಶ್ರ ಅವರು ಧ್ವಜಾರೋಹಣೆ ಮಾಡಿದ ಅನಂತರ ನೆರೆದಿದ್ದ ಜನರನ್ನು ಉದ್ದೇಶಿಸಿ ಮಾತನಾಡಿ ಭಾರತ ಮತ್ತು ಐರ್ಲೆಂಡ್‌ ದೇಶದ ನಡುವಿನ ಬಾಂಧವ್ಯ, ಕೊಡುಗೆ ಬಗ್ಗೆ ಮಾತನಾಡಿದರು.

ಹಬ್ಬದ ಅಂಗವಾಗಿ ಕೆಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಅಂದು ಸಾಯಂಕಾಲ ಅಖೀಲೇಶ್‌ ಮಿಶ್ರಾ ಅವರು ಐರ್ಲೆಂಡಿನಲ್ಲಿ ನೆಲೆಸಿರುವಂತ ಭಾರತೀಯ ಸಮುದಾಯದ ಗಣ್ಯರು, ಸಂಘಗಳ ಮುಖಂಡರಿಗೆ ಔತಣಕೂಟವನ್ನು ಅವರ ಮನೆಯಲ್ಲಿ ಆಯೋಜಿದ್ದರು. ಇವರ ಜತೆಗೆ ಇತರ ದೇಶದ ರಾಯಭಾರಿಗಳು, ಐರ್ಲೆಂಡ್‌ ಸರಕಾರದ ಮಂತ್ರಿಗಳು, ಬೇರೆಬೇರೆ ಕೌಂಟಿ ಮೇಯರ್‌ಗಳು ಆಗಮಿಸಿದ್ದರು.

ರಾಯಭಾರಿಗಳು ನೆರೆದಿದ್ದ ಜನರನ್ನು ಉದ್ದೇಶಿಸಿ ಮಾತನಾಡಿ ಐರ್ಲೆಂಡಿನಲ್ಲಿ ಭಾರತೀಯರ ಕೊಡುಗೆ ವಿಶೇಷವಾಗಿ ಮಹಿಳೆಯರ ಬಗ್ಗೆ ಹೆಚ್ಚು ಒತ್ತು ಕೊಟ್ಟು ವಿವರಿಸಿದರು. ಭಾರತೀಯ ಮಹಿಳೆಯರ ಆದಾಯ ಐರ್ಲೆಂಡಿನಲ್ಲಿ ನಂಬರ್‌ ಒಂದು ಸ್ಥಾನದಲ್ಲಿದೆ ಎಂದು ಹೇಳಿದರು. ನಿರಂಜನ ಆನಂದ್‌ ಅವರ ಭರತನಾಟ್ಯ, ಅಂಜಲಿ ಮತ್ತು ಸತಾಕ್ಷಿ ಅವರ ಕಥಕ್‌ ನೃತ್ಯ ನೋಡುಗರ ಮನ ಗೆದ್ದಿತು
.
ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಗೆ ಭಾರತದ ಐರ್ಲೆಂಡ್‌ ರಾಯಭಾರಿಯಾಗಿರುವ ಕೆವಿನ್‌ ಕೆಲ್ಲಿ ಅಧ್ಯಕ್ಷತೆ ವಹಿಸಿದ್ದರು. ಭಾರತದ ರಾಯಭಾರಿ ಕಚೇರಿಯಲ್ಲಿ ಮೊದಲನೇ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿರುವ ಮುರುಘರಾಜ್‌ ಅವರು ಕಾರ್ಯಕ್ರಮವನ್ನು ನಡೆಸಿಕೊಟ್ಟು ಧನ್ಯವಾದ ತಿಳಿಸಿದರು.

Advertisement

ಕಾರ್ಯಕ್ರಮದ ಅಂಗವಾಗಿ ಔತಣ ಕೂಟಕ್ಕೆ ಬಂದಿದ್ದ ಗಣ್ಯರಿಗೆ ಉತ್ತರ ಭಾರತ ಮತ್ತು ದಕ್ಷಿಣ ಭಾರತದ ಊಟವನ್ನು ಆಯೋಜಿಸಲಾಗಿತ್ತು. ಮೈಸೂರ್‌ ರಸಂ ಸೇರಿ ಬಗೆ ಬಗೆಯ ಆಹಾರಗಳನ್ನು ಜನರು ತಿಂದು ಆನಂದಿಸಿದರು.

ವರದಿ: ಸುರೇಶ ಮರಿಯಪ್ಪ, ಐರ್ಲೆಂಡ್‌

Advertisement

Udayavani is now on Telegram. Click here to join our channel and stay updated with the latest news.

Next