Advertisement

Desi Swara:ದುಬೈ-ಸಂಪನ್ನಗೊಂಡ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ

12:01 PM Feb 03, 2024 | Team Udayavani |

ದುಬೈ:ದುಬೈಯ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿಯ ಆಶ್ರಯದಲ್ಲಿ ಜ.28ರಂದು ಇಲ್ಲಿನ ಜೆ.ಎಸ್‌.ಎಸ್‌. ಪ್ರೈವೆಟ್‌ ಸ್ಕೂಲ್‌ ದುಬೈಯಲ್ಲಿ ರಘು ಭಟ್‌ ಪೌರೋಹಿತ್ಯದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಯು ದೇವರ ಕಲಶ ಪ್ರತಿಷ್ಠಾಪನೆಯೊಂದಿಗೆ ವಿಧಿವಿಧಾನಗಳೊಂದಿಗೆ ನೆರವೇರಿತು.

Advertisement

ಭಕ್ತರ ಪರವಾಗಿ ಮಹೇಶ್‌ ಅಮೀನ್‌ ಮತ್ತು ಸ್ನೇಹಾ ಮಹೇಶ್‌, ಸಮಿತಿಯ ಪರವಾಗಿ ವಾಸು ಶೆಟ್ಟಿ ಹಾಗೂ ಸೀಮ ವಾಸು ಶೆಟ್ಟಿ ಪೂಜೆಯಲ್ಲಿ ಕುಳಿತು ಪೂಜಾ ಕಾರ್ಯದಲ್ಲಿ ಭಾಗಿಯಾದರು. ಮೊಗವೀರ್ಸ್‌ ಭಜನ ತಂಡ ಯು.ಎ.ಇ. ಮತ್ತು ಶ್ರೀ ರಾಜಾರಾಜೇಶ್ವರಿ ಭಜನ ತಂಡ ದುಬೈ ಇವರು ಭಜನ ಸೇವೆಯನ್ನು ನಡೆಸಿಕೊಟ್ಟರು. ವರಮಹಾಲಕ್ಷ್ಮೀ ಸಮಿತಿಯ ಸುಮಂಗಲೆಯರು ದೀಪಾ ಭಜನ ನೃತ್ಯ ಸೇವೆಯನ್ನು ಸಲ್ಲಿಸಿದರು.

ಸುವರ್ಣ ಸತೀಶ್‌ ಅವರ ನಾಯಕತ್ವದಲ್ಲಿ ಸುಮಂಗಲೆಯರು ವಿವಿಧ ವಿಭಾಗಗಳಲ್ಲಿ ತಮ್ಮ ಸೇವೆಯನ್ನು ನೀಡಿದರು. ಮಹಾಮಂಗಳಾರತಿ ಸಮಯದಲ್ಲಿ ಶಂಖನಾದ ತಂಡದ 14 ಮಂದಿ ಸದಸ್ಯರು ಬಾಲಕೃಷ್ಣ ಸಾಲಿಯಾನ್‌ ನೇತೃತ್ವದಲ್ಲಿ ಶಂಖನಾದ ಸೇವೆಯನ್ನು ಸಲ್ಲಿಸಿದರು. ಸುಮಂಗಲಿ ಪೂಜೆ, ಬ್ರಾಹ್ಮಣ ಆರಾಧನೆ ಅನಂತರ ಭಕ್ತರು ತೀರ್ಥ ಪ್ರಸಾದ ಮತ್ತು ಮಹಾ ಪ್ರಸಾದ ಸ್ವೀಕರಿಸಿದವರು. ಅರಬ್‌ ಸಂಯುಕ್ತ ಸಂಸ್ಥಾನದ ವಿವಿಧ ಭಾಗಗಳಿಂದ ಭಕ್ತರು ಆಗಮಿಸಿದ್ದರು.

ಪೂಜಾ ಕಾರ್ಯಕ್ಕೆ ಸಹಾಯ ಹಸ್ತ ದೇಣಿಗೆಯನ್ನು ನೀಡಿರುವ ದಾನಿಗಳು, ಭಜನ ತಂಡದವರನ್ನು ಹಾಗೂ ಆಕರ್ಷಕ ಪೂಜಾ ಮಂಟಪ ಅಲಂಕಾರವನ್ನು ಮಾಡಿದ ರಾಜೇಶ್‌ ಕುತ್ತಾರ್‌ ತಂಡದವರನ್ನು ಸಮ್ಮಾನಿಸಿ ಗೌರವಿಸಲಾಯಿತು.

Advertisement

ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿಯಲ್ಲಿ ಶಾಂತಾರಾಂ ಆಚಾರ್‌, ಬಿ. ಕೆ. ಗಣೇಶ್‌ ರೈ, ಸತೀಶ್‌ ಪೂಜಾರಿ, ವಿಶ್ವನಾಥ ಶೆಟ್ಟಿ, ಬಾಲ ಕೃಷ್ಣ ಸಾಲಿಯಾನ್‌, ಜೀವನ್‌ ಕುಕ್ಯಾನ್‌, ವಾಸು ಶೆಟ್ಟಿ, ಪದ್ಮರಾಜ್‌ ಎಕ್ಕಾರ್‌, ಧನಂಜಯ್‌ ಶೆಟ್ಟಿಗಾರ್‌, ಸಂದೇಶ್‌ ಜೈನ್‌, ಸುದರ್ಶನ್‌ ಹೆಗ್ಡೆ, ದಿನೇಶ್‌, ಸುಗಂಧರಾಜ್‌ ಬೇಕಲ್‌, ರಮೇಶ್‌, ದೀಪಾ ಜಗನ್ನಾಥ್‌ ಮತ್ತು ಜಸ್ವಿ ವಿವೇಕ್‌ ಇವರುಗಳ ಬಹುದಿನದ ಪೂರ್ವ ತಯಾರಿಯೊಂದಿಗೆ ಪೂಜಾ ಕಾರ್ಯಕ್ರಮವು ಸಾಂಗವಾಗಿ ನೆರವೇರಿತು. ದುಬೈಯಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗರ ಧಾರ್ಮಿಕ ಶ್ರದ್ಧೆ ಹಾಗೂ ಭಕ್ತಿ ಭಾವನೆಗಳಿಗೆ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಸಾಕ್ಷಿಯಾಯಿತು.

ವರದಿ: ಬಿ. ಕೆ. ಗಣೇಶ್‌ ರೈ, ದುಬೈ

Advertisement

Udayavani is now on Telegram. Click here to join our channel and stay updated with the latest news.

Next