ಮಂಗಳೂರು. ನ.5: ನಗರದಲ್ಲಿ ಐಶಾರಾಮಿ ಹಾಗೂ ಕೈಗೆಟಕುವ ದರದಲ್ಲಿ ಮನೆಗಳನ್ನು ನಿರ್ಮಿಸುತ್ತಿರುವ ಮುಕುಂದ್ ಎಂಜಿಎಂ ರಿಯಾಲ್ಟಿ ಸಂಸ್ಥೆಯಿಂದ ಎಲ್ಲ ರೀತಿಯ ಸೌಕರ್ಯಗಳನ್ನೊಳಗೊಂಡ ಕೇದಾರ್ ಹೈ ಲಿವಿಂಗ್ ಲಕ್ಷುರಿ ಹೋಮ್ಸ್ ವಸತಿ ಸಮುಚ್ಚಯಕ್ಕೆ ಶನಿವಾರ (ನ.5) ಏರ್‌ಪೋರ್ಟ್ ರಸ್ತೆಯ ದೇರೆಬೈಲ್‌ನಲ್ಲಿ ಶಿಲಾನ್ಯಾಸ ನೆರವೇರಿಸಲಾಯಿತು.
ಬಳಿಕ ನಡೆದ ಸಮಾರಂಭದಲ್ಲಿ ದೇರೆಬೈಲ್ ಚರ್ಚ್ ನ ಧರ್ಮಗುರು ರೆ| ಫಾ| ಜೋಸೆಫ್ ಮಾರ್ಟಿಸ್ ಆಶೀರ್ವದಿಸಿ, ಶುಭ ಹಾರೈಸಿದರು. ಸಮಾರಂಭ ಉದ್ಘಾಟಿಸಿದ ಮೇಯರ್ ಜಯಾನಂದ ಅಂಚನ್, ಕೇದಾರ್ ವಸತಿ ಸಮುಚ್ಚಯ ದೇರೆಬೈಲ್ ಪ್ರದೇಶದಲ್ಲಿ ಮಾದರಿ ವಸತಿ ಸಮುಚ್ಚಯವಾಗಿ, ಅಭಿವೃದ್ಧಿಗೆ ಕೊಡುಗೆ ನೀಡುವಂತಾಗಲಿ ಎಂದರು.
ಬ್ರೋಶರ್ ಬಿಡುಗಡೆಗೊಳಿಸಿದ ಮಾಜಿ ಮೇಯರ್, ಕಾರ್ಪೋರೇಟರ್ ಎಂ.ಶಶಿಧರ ಹೆಗ್ಡೆ ಮಾತನಾಡಿ, ದೇರೆಬೈಲ್ ಅಂದರೆ ದೇವರ ಬೈಲು. ಅದಕ್ಕೆ ಪೂರಕವಾಗಿ ಕೇದಾರ್ ಹೆಸರಿನಲ್ಲಿ ವಸತಿ ಸಮುಚ್ಚಯ ನಿರ್ಮಾಣವಾಗುತ್ತಿದೆ. ಕೆಎಸ್‌ಆರ್‌ಟಿಸಿ ಜಂಕ್ಷನ್-ಕಾವೂರು ನಡುವಿನ ಈ ಪ್ರದೇಶ ವೇಗವಾಗಿ ಅಭಿವೃದ್ಧಿಯಾಗುತ್ತಿದೆ ಎನ್ನುವುದನ್ನು ಇಲ್ಲಿರುವ ವಸತಿ ಸಮುಚ್ಚಯಗಳನ್ನು ನೋಡುವಾಗ ತಿಳಿಯುತ್ತದೆ ಎಂದರು.
ಕ್ರೆಡೈ ಕರ್ನಾಟಕ ಉಪಾಧ್ಯಕ್ಷ ಡಿ.ಬಿ.ಮೆಹ್ತಾ ಮಾತನಾಡಿ, ಯುದ್ಧ, ಕೋವಿಡ್‌ನಿಂದಾದ ಆರ್ಥಿಕ ಹಿಂಜರಿತ ಮೊದಲಾದ ಕಾರಣದಿಂದ ಇಂದು ವಿಶ್ವಾದ್ಯಂತ ಹಣದುಬ್ಬರ ದರ ಏರಿಕೆಯಾಗುತ್ತಿದ್ದರೂ, ಭಾರತ ಈಗಲೂ ಸದೃಢ ಸ್ಥಿತಿಯಲ್ಲಿದೆ. ದೇಶದ ರಿಯಲ್ ಎಸ್ಟೇಟ್ ಜಿಡಿಪಿ ಮೇಲ್ಮಟ್ಟದಲ್ಲಿದೆ. ಕಳೆದೊಂದು ವರ್ಷದಲ್ಲಿ ರಿಯಲ್ ಎಸ್ಟೇಟ್ ದರ ಶೇ.೧೦ರಷ್ಟು ಹೆಚ್ಚಾಗಿದ್ದು, ತೊಡಗಿಸಿಕೊಳ್ಳಲು ಇದು ಸಕಾಲ ಎಂದರು.
ಪ್ರಧಾನ ಎಂಜಿನಿಯರ್ ಸುರೇಶ್ ಪೈ, ಸ್ಟ್ರಕ್ಚರಲ್ ಎಂಜಿನಿಯರ್ ಅನಿಲ್ ಹೆಗ್ಡೆ, 3ಡಿ ವಿನ್ಯಾಸ ಮಾಡಿದ ರಾಹುಲ್, ಪ್ರಮುಖರಾದ ಪ್ರೇಮಾನಂದ ಕುಲಾಲ್, ಗೌತಮ್ ಪೈ, ಕಿರಣ್ ಬಾಳಿಗಾ, ನೆಲ್ಸನ್, ನಿಕಿಲ್ ಕಾಮತ್, ನಾಗೇಶ್, ನಿತಿನ್ ಪ್ರಭು ಮೊದಲಾದವರನ್ನು ಗೌರವಿಸಲಾಯಿತು.
ಕಾರ್ಪೋರೇಟರ್ ರಂಜಿನಿ ಎಲ್.ಕೋಟ್ಯಾನ್, ಮುಕುಂದ್ ಎಂಜಿಎಂ ರಿಯಾಲ್ಟಿ ಪ್ರವರ್ತಕರಾದ ಗುರುದತ್ ಶೆಣೈ, ಮಂಗಲ್‌ದೀಪ್ ಉಪಸ್ಥಿತರಿದ್ದರು. ಸ್ಥಳದ ಮಾಲೀಕ ಹಾಗೂ ಕೋ-ಪ್ರಮೋಟರ್ ಎಲಿಯಾಸ್ ಸ್ಯಾಂಕ್ಟಿಸ್ ಸ್ವಾಗತಿಸಿದರು. ಮುಕುಂದ್ ಎಂಜಿಎಂ ರಿಯಾಲ್ಟಿ ಪ್ರವರ್ತಕ ಮಹೇಶ್ ಶೆಟ್ಟಿ ವಂದಿಸಿದರು. ಸೌಜನ್ಯಾ ಹೆಗ್ಡೆ ನಿರೂಪಿಸಿದರು.
ಕೇದಾರ್ ವಸತಿ ಸಮುಚ್ಚಯದ ಕುರಿತು:
ಕೇದಾರ್-ಹೈ ಲಿವಿಂಗ್ ಲಕ್ಶುರಿ ವೈಶಿಷ್ಟ್ಯಗಳಿರುವ ಅಪಾರ್ಟ್ ಮೆಂಟ್ ಆಗಿದ್ದು, 16 ಅಂತಸ್ತುಗಳನ್ನೊಳಗೊಂಡು 78 ಮನೆಗಳು ವಾಸ್ತು ಪ್ರಕಾರ ನಿರ್ಮಾಣವಾಗಲಿದೆ. 2 ಮತ್ತು 3 ಬಿಎಚ್‌ಕೆ ಫ್ಲ್ಯಾಟ್ ಮಾತ್ರವಲ್ಲದೆ, ಐಶಾರಾಮಿ 4 ಬಿಎಚ್‌ಕೆ ಫ್ಲ್ಯಾಟ್ ಗಳು ನಿರ್ಮಾಣಗೊಳ್ಳಲಿವೆ. 2025ರ ಡಿಸೆಂಬರ್ ತಿಂಗಳೊಳಗೆ ಮುಗಿಸುವ ಉದ್ದೇಶದೊಂದಿಗೆ ಕೆಲಸ ಆರಂಭವಾಗಲಿದೆ. ಫ್ಲ್ಯಾಟ್ ಖರೀದಿಸಿದ ಗ್ರಾಹಕರಿಗೆ ಮುಕ್ತ ವಾತಾವರಣದ ಅನುಭವ ಒದಗಿಸುವ ಉದ್ದೇಶದಿಂದ ಸುಮಾರು 15 ಸಾವಿರ ಚದರ ಅಡಿ ಸ್ಥಳವನ್ನು ಲ್ಯಾಂಡ್‌ಸ್ಕೇಪ್ ಗಾರ್ಡನ್‌ಗೆ ಮೀಸಲಿರಿಸಲಾಗಿದೆ. ಉಳಿದಂತೆ ರೂಫ್‌ಟಾಪ್ ಸ್ವಿಮ್ಮಿಂಗ್ ಪೂಲ್, ಬ್ಯಾಡ್ಮಿಂಟನ್ ಕೋರ್ಟ್, ಸ್ನೇಕ್ ಆ್ಯಂಡ್ ಲ್ಯಾಡರ್ ಔಟ್‌ಡೋರ್ ಗೇಮ್, ಓಪನ್ ಏರ್ ಥಿಯೇಟರ್, ಓಪನ್ ಜಿಮ್, ಲೈಬ್ರೆರಿ, ವಿಶಾಲ ವಿಸಿಟರ್ಸ್ ಲೋಬಿ, ಸೋಲಾರ್ ಎಲೆಕ್ಟ್ರಿಕಲ್ ಪ್ಯಾನಲ್, ಸ್ವಯಂ ಚಾಲಿತ ಲಿಫ್ಟ್, ಕಾರು ಪಾರ್ಕಿಂಗ್ ಮತ್ತು ಜನರೇಟರ್ ವ್ಯವಸ್ಥೆ ಹೊಂದಿದೆ. ಹೆಚ್ಚಿನ ಮಾಹಿತಿಗೆ ಕಾಪಿಕಾಡ್‌ನ ಸುಪ್ರಭಾತ್ ಬಿಲ್ಡಿಂಗ್‌ನಲ್ಲಿರುವ ಸಂಸ್ಥೆಯ ಕಚೇರಿ ಅಥವಾ ವೆಬ್‌ಸೈಟ್ www.mukundmgmrealty.comಗೆ ಭೇಟಿ ನೀಡಬಹುದು ಎಂದು ಪ್ರವರ್ತಕ ಗುರುದತ್ ಶೆಣೈ ತಿಳಿಸಿದರು.