Advertisement

Politics: ಕಾಂಗ್ರೆಸ್ ಜನರ ಕೈಗೆ ಬೆಲೆ ಏರಿಕೆಯ ಚೊಂಬು ಕೊಟ್ಟಿದೆ; ಅರವಿಂದ ಬೆಲ್ಲದ ವಾಗ್ದಾಳಿ

02:14 PM Jun 16, 2024 | Team Udayavani |

ಹುಬ್ಬಳ್ಳಿ: ಕಾಂಗ್ರೆಸ್ ಸರಕಾರ ಪೆಟ್ರೋಲ್, ಡಿಸೇಲ್ ಹಾಗೂ ಮದ್ಯದ ದರ ಏರಿಕೆ ಮಾಡಿದ್ದು, ಈ ಸರಕಾರ ಯಾವುದೇ ಪರವಾಗಿ ಕೆಲಸ ಮಾಡುತ್ತಿದೆ. ಇದೊಂದು ಜನ ವಿರೋಧಿ ಸರಕಾರವಾಗಿದ್ದು, ಜನರಿಗೆ ಚೊಂಬು ಕೊಟ್ಟಿದೆ ಎಂದು ವಿಪಕ್ಷದ ಉಪ ನಾಯಕ ಅರವಿಂದ ಬೆಲ್ಲದ ರಾಜ್ಯ ಸರಕಾರದ ವಿರುದ್ಧ ಹರಿಹಾಯ್ದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,  ಕಾಂಗ್ರೆಸ್ ಜನರ ಕೈಗೆ ಬೆಲೆ ಏರಿಕೆಯ ಚೊಂಬು ಕೊಟ್ಟಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಜನರು ತಕ್ಕ ಉತ್ತರ ನೀಡಿದ್ದಾರೆ. ಇದೀಗ ಅದೇ ಕಾರಣಕ್ಕೆ ಬೆಲೆ ಏರಿಕೆ ಮಾಡಿ, ಜನರ ಜೇಬಿಗೆ ಕತ್ತರಿ ಹಾಕಿದೆ. ಪೆಟ್ರೋಲ್ ಹಾಗೂ ಡಿಸೇಲ್ ಬೆಲೆ ಏರಿಕೆ ಜನರ ದಿನನಿತ್ಯದ ಜೀವನದ ಮೇಲೆ ಸಾಕಷ್ಟು ಪ್ರಭಾವ ಬೀರುತ್ತದೆ. ಬೇರೆ ರಾಜ್ಯಗಳಿಗೆ ಹೋಲಿಗೆ ಮಾಡಿದ್ರೆ ನಮ್ಮ ರಾಜ್ಯದಲ್ಲಿ ಪೆಟ್ರೋಲ್ ಬೆಲೆ ಕಡಿಮೆ ಇದೆ ಎಂದು ರಾಜ್ಯ ಸರ್ಕಾರ ಹೇಳುತ್ತಿರುವುದು ನಾಚಿಕೆಗೇಡಿನ ವಿಚಾರ.  ಬಡವರು ಕುಡಿಯುವ ಮದ್ಯದ ದರ ಹೆಚ್ಚಳ ಮಾಡಿದೆ. ಸ್ಟಾಂಪ್ ಡ್ಯೂಟಿ ಹಣವನ್ನೂ ಈ ಸರ್ಕಾರ ಹೆಚ್ಚಳ ಮಾಡಿದ್ದು, ಇದೊಂದು ಸಾಮಾನ್ಯ ಜನರ ವಿರೋಧಿ ಸರಕಾರವಾಗಿದೆ. ಗ್ಯಾರಂಟಿ ಮೂಲಕ ಜನರಿಗೆ ಅಕ್ಷಯ ಪಾತ್ರೆ ನೀಡುತ್ತೆವೆಂದು ರಾಜ್ಯದ ಜನತೆಗೆ ಚೊಂಬು ಕೊಟ್ಟಿದ್ದಾರೆ ಎಂದು ಲೇವಡಿ ಮಾಡಿದರು.

ಬಕ್ರೀದ್ ಹಬ್ಬದ ನಿಮಿತ್ತ ಸಾಕಷ್ಟು ಗೋವುಗಳನ್ನು ‌ಕತ್ತರಿಸಲಾಗುತ್ತಿದೆ. ಧಾರವಾಡದಲ್ಲಿ ಗೋವುಗಳನ್ನ ರಕ್ಷಣೆ ಮಾಡಿದವನ ಮೇಲೆ ಹಲ್ಲೆ ಮಾಡಲಾಗಿದೆ. ಹಲ್ಲೆ ಆದಂತಹ ವ್ಯಕ್ತಿಯ ಮೇಲೆ ಪೊಲೀಸರು ದೂರು ದಾಖಲು ಮಾಡಿಕೊಂಡಿದ್ದಾರೆ. ಹಿಂದೂ ವಿರೋಧಿ ನೀತಿ ಹಾಗೂ ಅಲ್ಪಸಂಖ್ಯಾತರ ತುಷ್ಟೀಕರಣವನ್ನು ಸರಕಾರ ಬಿಡಬೇಕು. ಅಪರಾಧ ಚಟುವಟಿಕೆ ಹಿನ್ನೆಲೆಯಿರುವ ವ್ಯಕ್ತಿಗಳಿಗೆ ಸರಕಾರ ಕುಮ್ಮಕ್ಕು ನೀಡುವ ಕೆಲಸ  ಮಾಡುತ್ತಿದೆ. ಸಚಿವ ಜಮೀರ ಅಹ್ಮದ್ ಗುಂಡಾಗಳ ಜೊತೆಗೆ ಸೆಟ್ಲಿಮೆಂಟ್ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಮಾಡಿರೋದು ನೋಡಿದರೆ ಅವನು ಮನುಷ್ಯನೋ ರಾಕ್ಷಸನೋ ತಿಳಿಯುತ್ತಿಲ್ಲ.  ಅವನು ಹೀಗಿದ್ದಾನೆ ಅನ್ನೋದು ಗೊತ್ತಿರಲಿಲ್ಲ.  ಹೀಗಾಗಿ ಅವನ ಕೃಷಿ ರಾಯಭಾರಿ‌ ಮಾಡಲಾಗಿತ್ತು. ಸಮಾಜ ವಿರೋಧಿ, ಕ್ರಿಮಿನಲ್ ಕೆಲಸ ಮಾಡುತ್ತಿರುವವರಿಗೆ ರಾಜಾತಿಥ್ಯ ಕೊಡುತ್ತಿದೆ‌. ಇಂತಹ ಸರಕಾರಕ್ಕೆ ಇನ್ನೇನು ಹೇಳಬೇಕು. ರಾಜ್ಯದಲ್ಲಿ ಕ್ರಮಿನಲ್ ಪ್ರಕರಣಗಳು ಹೆಚ್ಚಾಗಲು ರಾಜ್ಯ ಸರಕಾರದ ಮನಸ್ಥಿತಿ ಕಾರಣ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next