Advertisement

ಜಿಲ್ಲಾಧಿಕಾರಿ ಸೂಚನೆ ಅನ್ವಯ ಸರಕಾರಕ್ಕೆವರದಿ ರವಾನೆ

10:37 AM Feb 07, 2018 | Team Udayavani |

ಸುಳ್ಯ : ಇಪ್ಪತ್ತು ಸಾವಿರ ಮೇಲ್ಪಟ್ಟು ಜನಸಂಖ್ಯೆ ಇದ್ದರೆ ಆ ನಗರ ಪಂಚಾಯತ್‌ ಅನ್ನು ಪುರಸಭೆಯನ್ನಾಗಿ ಘೋಷಿಸ
ಬಹುದು. ಅದೇ ಕಾರಣಕ್ಕೆ, ಸುಳ್ಯ ನಗರ ಪಂಚಾಯತ್‌ಗೂ ಮೇಲ್ದರ್ಜೆಯ ಕನಸಿದೆ. ಕೆಲ ವರ್ಷಗಳಿಂದ ಪುರಸಭೆಗೇರಲು ಅರ್ಹತೆ ಹೊಂದಿದ್ದರೂ, ಸರಕಾರದ ಅನುಮೋದನೆಯ ನಿರೀಕ್ಷೆ ಹೊತ್ತು ಕಾಯುತ್ತಿದೆ!

Advertisement

18 ವಾರ್ಡ್‌ ಹೊಂದಿರುವ ನಗರ ಪಂಚಾ ಯತ್‌ ವ್ಯಾಪ್ತಿಯಲ್ಲಿ 2011ರ ಜನ ಗಣತಿ ಆಧಾರದಲ್ಲಿ ಇರುವ ಒಟ್ಟು ಸಂಖ್ಯೆ 19,958. ಅನಂತರದ ಏಳು ವರ್ಷದಲ್ಲಿ ಏನೆಂದರೂ, ಐದಾರು ಸಾವಿರ ಜನಸಂಖ್ಯೆ ವೃದ್ಧಿ ಆಗಿರಬಹುದು. 6 ತಿಂಗಳ ಮೇಲ್ಪಟ್ಟು ನಗರದಲ್ಲಿ ವಾಸಿಸುತ್ತಿರುವ ಜನರು ಜನಗಣತಿಯ ಪಟ್ಟಿಯೊಳಗೆ ಸೇರ್ಪಡೆಯಾಗುವ ಕಾರಣ, ಸಂಖ್ಯೆ ಇನ್ನಷ್ಟು ಹೆಚ್ಚಾಗಬ ಹುದು. ನ.ಪಂ.ನಿಂದ ಪುರಸಭೆಗೆ ಮೇಲ್ದರ್ಜೆಗೆ ಏರಲು ಇರುವ ಏಕೈಕ ಅರ್ಹತೆ ಆಗಿರುವ ಜನ ಸಂಖ್ಯೆ, ನಿಯಮಕ್ಕೆ ತಕ್ಕಂತೆ ಇಲ್ಲಿರುವುದರಿಂದ ಮೇಲ್ದರ್ಜೆ ಬೇಡಿಕೆಗೆ ಇನ್ನಷ್ಟು ಬಲ ಬಂದಿದೆ.

ಪ್ರಸ್ತಾವನೆ ಸಲ್ಲಿಕೆ
ಈ ಹಿಂದೆ ನಗರ ಪಂಚಾಯತ್‌ ಅನ್ನು ಮೇಲ್ದರ್ಜೆಗೆ ಏರಿಸುವ ಪ್ರಸ್ತಾವ ಸಲ್ಲಿಕೆ ಆದ ಸಂದರ್ಭದಲ್ಲಿ ಜನಸಂಖ್ಯೆ 20 ಸಾವಿರ ದಾಟಿರಲಿಲ್ಲ. ಹಾಗಾಗಿ ಕೆಲ ನಗರ ವ್ಯಾಪ್ತಿಯ ಗ್ರಾ.ಪಂ ವ್ಯಾಪ್ತಿಯ ಪಂಚಾಯತ್‌ಗಳ ಕೆಲ ಗ್ರಾಮಗಳನ್ನು ಸೇರಿಸುವ ಪ್ರಯತ್ನ ನಡೆದಿತ್ತು. ಆದರೆ ಈಗ ಈಗಿರುವ ನಗರ ಪಂಚಾಯತ್‌ ವ್ಯಾಪ್ತಿಯಲ್ಲೇ 20 ಸಾವಿರಕ್ಕಿಂತ ಮೇಲ್ಪಟ್ಟು ಜನಸಂಖ್ಯೆ ಇದೆ.

ಜಾಲ್ಸೂರು ಗ್ರಾಮದ ಕುಕ್ಕಂದೂರು, ಆಲೆಟ್ಟಿ ಗ್ರಾಮದ ಅರಂಬೂರನ್ನು ಸೇರ್ಪಡೆಗೊಳಿಸುವ ಬಗ್ಗೆ ಪ್ರಸ್ತಾವನೆ ಸಲ್ಲಿಸ
ಲಾಗಿತ್ತು. ಆಲೆಟ್ಟಿ ಗ್ರಾ.ಪಂ.ನಿಂದ ಒಪ್ಪಿಗೆ ಪತ್ರ ಪಡೆಯಬೇಕೆಂಬ ಜಿಲ್ಲಾಧಿಕಾರಿ ಸೂಚನೆ ಅನ್ವಯ ಅವೆಲ್ಲ ಅಂಕಿ ಅಂಶ, ಗಡಿ ಗುರುತಿನ ಕುರಿತು ಪ್ರಸ್ತಾವನೆಯಲ್ಲಿ ಉಲ್ಲೇಖೀಸಿ ಜಿಲ್ಲಾಧಿಕಾರಿ ಮೂಲಕ ಸರಕಾರಕ್ಕೆ ರವಾನಿಸಿದ್ದು, ಬಲ್ಲ ಮೂಲಗಳ ಪ್ರಕಾರ ಶೇ. 90ರಷ್ಟು ಪ್ರಕ್ರಿಯೆಗೆ ಸಮ್ಮತಿ ಸಿಕ್ಕಿ ಈಗ ಸಂಬಂಧಪಟ್ಟ ಸಚಿವಾಲಯದಲ್ಲಿ ಇದೆ. ಈ ಹಿಂದೆ ಮೇಲ್ದರ್ಜೆಗೆ ಸಂಬಂಧಿಸಿ ಮೂರರಿಂದ ನಾಲ್ಕು ಬಾರಿ ಇಂತಹ ಪ್ರಸ್ತಾವನೆಗಳನ್ನು ನ.ಪಂ. ವತಿಯಿಂದ ಸಲ್ಲಿಸಲಾಗಿದೆ.

ವಾರ್ಡ್‌ ವಿಸ್ತರಣೆ
2019ರಲ್ಲಿ ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ಈಗಿರುವ ವಾರ್ಡ್‌ ಸಂಖ್ಯೆ ಹೆಚ್ಚಳಕ್ಕೂ ಪ್ರಕ್ರಿಯೆ ನಡೆದಿದ್ದು, ಮರು ವಿಂಗಡನೆ ಆದಲ್ಲಿ ಎರಡು ವಾರ್ಡ್‌ಗಳ ಹೆಚ್ಚಳವಾಗುವ ಸಾಧ್ಯತೆಯಿದೆ. ಜಯನಗರ ಹಳೆಗೇಟು ವ್ಯಾಪ್ತಿ ಮತ್ತು ಮೊಗರ್ಪಣೆ ಬ್ರಹ್ಮನಗರ ವ್ಯಾಪ್ತಿಯಲ್ಲಿ ಹೊಸ ವಾರ್ಡ್‌ ರಚನೆಯಾಗುವ ಸಾಧ್ಯತೆಯಿದ್ದು, ಇವೆಲ್ಲವೂ ಪುರಸಭೆಯ ಆಸೆಗೆ ಇನ್ನಷ್ಟು ಪೂರಕ ಎಂದು ವ್ಯಾಖ್ಯಾನಿಸಲಾಗಿದೆ.

Advertisement

ಸುಳ್ಯ ನಗರ ಬಾಕಿ
ಜಿಲ್ಲೆಯ ಐದು ತಾಲೂಕು ವ್ಯಾಪ್ತಿಯ ಸ್ಥಳೀಯಾಡಳಿತಗಳು ಮೇಲ್ದರ್ಜೆಗೇರಿದ್ದರೂ, ಸುಳ್ಯ ಮಾತ್ರ ನಗರ ಪಂಚಾ
ಯತ್‌ ಹಂತದಲ್ಲಿಯೇ ಬಾಕಿ ಉಳಿದಿದೆ. ಕೆಲ ಸಮಯಗಳ ಹಿಂದೆ ಪುತ್ತೂರು, ಉಳ್ಳಾಲ ಪುರಸಭೆಗಳು ನಗರಸಭೆಯಾಗಿ ಮೇಲ್ದರ್ಜೆಗೇರಿತ್ತು.

ಅನುದಾನ ಹೆಚ್ಚಳ  
ಪುರಸಭೆಯಾಗಿ ಮೇಲ್ದರ್ಜೆಗೆ ಏರಿದರೆ, ಸರಕಾರದಿಂದ ಬರುವ ಅನುದಾನದ ಪ್ರಮಾಣವೂ ಅಧಿಕವಾಗುತ್ತದೆ. ಹೆಚ್ಚುವರಿ ಪ್ರದೇಶವೂ ಸೇರ್ಪಡೆಗೊಂಡು ನಗರದ ವ್ಯಾಪ್ತಿ ವಿಸ್ತರಿತವಾಗುತ್ತದೆ. ಸರಕಾರದ ಬೇರೆ- ಬೇರೆ ಮೂಲಗಳಿಂದ ಪುರಸಭೆಯ ನಿಧಿಯಿಂದ ಅನುದಾನ ಲಭ್ಯವಾಗುವ ಕಾರಣ ನಗರದ ಅಭಿವೃದ್ಧಿಗೂ ಸಹಕಾರ ಆಗುತ್ತದೆ ಎಂಬ ಲೆಕ್ಕಚಾರದಿಂದಲೇ ಬೇಡಿಕೆ ಹೆಚ್ಚು ಪ್ರಸ್ತುತವಾಗಿದೆ.

ಪ್ರಯತ್ನ ನಡೆದಿದೆ
ನಗರಪಂಚಾಯತ್‌ ಪುರಸಭೆಯಾಗಿ ಮೇಲ್ದಜೆಗೆ ಏರಬೇಕು ಎಂಬ ಕುರಿತು ಮೂರು-ನಾಲ್ಕು ವರ್ಷದ ಹಿಂದೆಯೇ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಅದಕ್ಕೆ ಸಂಬಂಧಿಸಿ ಗಡಿ ಗುರುತಿನ ಬಗ್ಗೆಯು ಸ್ಥಳ ಪರಿಶೀಲಿಸಿ ವರದಿ ಸಲ್ಲಿಸಲಾಗಿತ್ತು.
ಅರ್ಹತೆಯ ಆಧಾರದಲ್ಲಿ ಬೇಡಿಕೆ ಈಡೇರುವುದು ನಿಶ್ಚಿತ.
ಎನ್‌.ಎ.ರಾಮಚಂದ್ರ
ಮಾಜಿ ಅಧ್ಯಕ್ಷರು, ನ.ಪಂ, ಸುಳ್ಯ

ಹೆಚ್ಚು ಅನುದಾನ
ನಗರ ಪಂಚಾಯತ್‌ ಮೇಲ್ದರ್ಜೆಗೆ ಏರಿದರೆ, ಹೆಚ್ಚು ಅನುದಾನ ದೊರೆಯುತ್ತದೆ. ನಗರಕ್ಕೆ ತಾಗಿರುವ ಕೆಲ ಪ್ರದೇಶಗಳು ಪುರಸಭೆಯ ವ್ಯಾಪ್ತಿಗೆ ಬಂದು ಅಭಿವೃದ್ಧಿ ಸಾಧ್ಯವಾಗುತ್ತದೆ.
– ಶ್ರೀಪತಿ ಭಟ್‌
ಸ್ಥಳೀಯರು

ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next