Advertisement

ಜಿಲ್ಲಾಧಿಕಾರಿ ಅನಿರುದ್ಧಗೆ ಬೀಳ್ಕೊಡುಗೆ

11:04 AM Jul 05, 2018 | |

ಬೀದರ: ಬೀದರ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಿ ವರ್ಗಾವಣೆಯಾದ ಅನಿರುದ್ಧ ಶ್ರವಣ ಅವರಿಗೆ ಜಿಲ್ಲಾಡಳಿತದಿಂದ ಬುಧವಾರ ಬೀಳ್ಕೊಡಲಾಯಿತು.

Advertisement

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ ಜಿಲ್ಲಾಡಳಿತ, ಸಹಾಯಕ ಆಯುಕ್ತ ಕಚೇರಿ, ತಹಶೀಲ್ದಾರ ಕಚೇರಿ ಅಕಾರಿಗಳು ಹಾಗೂ ಸಿಬ್ಬಂದಿ ಜಿಲ್ಲಾಕಾರಿ ಅನಿರುದ್ಧಗೆ ಶಾಲು ಹೊದಿಸಿ ಹೂಗುತ್ಛ ನೀಡಿ ಸನ್ಮಾನಿಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಅನಿರುದ್ಧ ಶ್ರವಣ, ಆಯಾ ಇಲಾಖೆಗಳು ಹಾಗೂ ಜಿಲ್ಲಾಧಿಕಾರಿ ಕಚೇರಿ ಮತ್ತು ಜಿಪಂ ಮಧ್ಯೆ ಒಂದು ಶಿಸ್ತುಬದ್ಧವಾದ ಸಮನ್ವಯತೆ ಇದ್ದಾಗಲೇ ಎಲ್ಲ ಕೆಲಸಗಳು ಸುಗಮವಾಗಿ ನಡೆಯಲು ಸಾಧ್ಯವಾಗಿದೆ.

ಬೀದರ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳಾಗಿ ಅತ್ಯಂತ ಪ್ರಾಮಾಣಿಕತೆಯಿಂದ ಕೆಲಸ ಮಾಡಿದ ತೃಪ್ತಿ ತಮಗಿದೆ. ಈ ನೆಲದಲ್ಲಿ ತಾವು ಮಾಡಿದ ಸೇವೆ ಸ್ಮರಣೀಯವಾಗಿ ಇರುತ್ತದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ವಿವಿಧ ಇಲಾಖೆಗ ಅಧಿಕಾರಿಗಳು, ಅನಿರುದ್ಧ ಶ್ರವಣ ಅವರೊಂದಿಗೆ ತಾವು ಸೇವೆ ಸಲ್ಲಿಸಿದ್ದು ಖುಷಿ ನೀಡಿದೆ. ಅವರು ನೀಡುತ್ತಿದ್ದ ಸಲಹೆ, ಮಾರ್ಗದರ್ಶನ ಸ್ಮರಣೀಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

Advertisement

ಜಿಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ| ಸೆಲ್ವಮಣಿ ಆರ್‌., ಶಿವಕುಮಾರ ಶೀಲವಂತ, ಬಸವಕಲ್ಯಾಣ ಸಹಾಯಕ ಆಯುಕ್ತ ಶರಣಬಸಪ್ಪ ಕೋಟಪ್ಪಗೋಳ, ತಹಶೀಲ್ದಾರರು,
ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next