Advertisement

ಬಸವ ಉತ್ಸವ ಸಿದ್ಧತೆ ಪರಿಶೀಲನೆ

12:53 PM Jan 29, 2018 | |

ಬೀದರ: ಬಸವ ಉತ್ಸವ-2018 ಆಚರಣೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಡಾ| ಎಚ್‌. ಆರ್‌.ಮಹಾದೇವ ಅವರ ಅಧ್ಯಕ್ಷತೆಯಲ್ಲಿ ಮತ್ತೂಂದು ಸುತ್ತಿನ ಸಿದ್ಧತಾ ಸಭೆ ರವಿವಾರ ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ನಡೆಯಿತು.

Advertisement

ಉತ್ಸವದ ಪ್ರಚಾರಾರ್ಥ ಬಸವಜ್ಯೋತಿ ಫೆ.2ರಿಂದ ಹೊರಡುವುದು. ಬಸವ ಜ್ಯೋತಿಯೊಂದಿಗೆ ಕಲಾ ತಂಡಗಳಿರಬೇಕು ಎಂದು ಪತ್ರಕರ್ತ ಬಾಬು ವಾಲಿ ಸಲಹೆ ನೀಡಿದರು. ಬಸವಜ್ಯೋತಿ ವಾಹನ ಅಚ್ಚುಕಟ್ಟಾಗಿ ಸಂಚರಿಸುವ ಎಲ್ಲ ವ್ಯವಸ್ಥೆ ಮಾಡುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದರು. ಬಸವ ಉತ್ಸವ ಮೆರವಣಿಗೆ
ಸಮಯಕ್ಕೆ ಸರಿಯಾಗಿ ಆರಂಭವಾಗುವುದು ಮತ್ತು ಅದರ ಉಸ್ತುವಾರಿಯನ್ನು ಬಸವರಾಜ ಧನ್ನೂರ ಸೇರಿದಂತೆ ಇನ್ನಿತರ ಸಂಘಟಿಕರಿಗೆ ವಹಿಸಲಾಯಿತು.

ಉತ್ಸವದ ಸಿದ್ಧತೆ ಸಂಬಂಧ ಈ ಮೊದಲೇ ರಚಿಸಿದ್ದ ಆಯಾ ಸಮಿತಿಗಳಿಂದ ನಡೆದ ತಯಾರಿ ಕುರಿತು ಸಭೆಯಲ್ಲಿ
ಪರಿಶೀಲಿಸಲಾಯಿತು. ಉತ್ಸವಕ್ಕಾಗಿ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಲಿರುವ ಕಲಾ ತಂಡಗಳ ಪಟ್ಟಿಯನ್ನು ಹಿರಿಯ ಸಾಹಿತಿ ಜಗನ್ನಾಥ ಹೆಬ್ಟಾಳೆ ಸಭೆಗೆ ಓದಿ ಹೇಳಿದರು. ಸುಗಮ ಸಂಗೀತ ಮತ್ತು ಈ ಬಾರಿ ವಿಶೇಷವಾಗಿ ರೂಪಿಸಿರುವ ವಚನ ಅನಾವರಣ ಕಾರ್ಯಕ್ರಮಕ್ಕಾಗಿ ಯೋಗೇಶ ಮಠದ ಅವರು ಕಲಾವಿದರನ್ನು, ರಾಜೇಂದ್ರಸಿಂಗ್‌ ಪವಾರ ಹಾಗೂ ಇತರರು ಸಂಗೀತಗಾರರನ್ನು ಗುರುತಿಸುತ್ತಿದ್ದಾರೆ ಎಂದು ಎಸ್‌.ವಿ.ಕಲ್ಮಠ ಸಭೆಗೆ ಮಾಹಿತಿ
ನೀಡಿದರು.

ಮೂರು ದಿನಗಳ ಕಾಲ ನಡೆಯುವ ಉತ್ಸವಕ್ಕೆ ಶ್ರೀಗಳನ್ನು ಹಾಗೂ ಗಣ್ಯರನ್ನು ಕರೆಯಿಸುವ ಬಗ್ಗೆ ತೀರ್ಮಾನಿಸಲಾಯಿತು. ಉಪನ್ಯಾಸ ನೀಡಲು ನಾನಾ ಶ್ರೀಗಳ ಹಾಗೂ ಗಣ್ಯರ ಹೆಸರುಗಳು ಸಭೆಯಲ್ಲಿ ಕೇಳಿ ಬಂದವು. ಎಲ್ಲರ ಅಭಿಪ್ರಾಯದಂತೆ ಗಣ್ಯರನ್ನು ಸಂಪರ್ಕಿಸಿ, ಆಹ್ವಾನಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿದರು. 

ಇದಕ್ಕೂ ಮೊದಲು ಸಹಾಯಕ ಆಯುಕ್ತ ಶರಣಬಸಪ್ಪ ಕೊಟಪ್ಪಗೋಳ ಪ್ರಾಸ್ತಾವಿಕ ಮಾತನಾಡಿ, ಅನುಭವ
ಮಂಟಪದ ವಿನೂತನ ಕಲ್ಪನೆಯ 770 ಅಮರಗಣಂಗಳನ್ನು ಸೇರಿಸುವ ನಿರ್ಣಯದಂತೆ ನಾಡಿನ ಬೇರೆ ಬೇರೆ
ಭಾಗದ ಶರಣರನ್ನು ಒಗ್ಗೂಡಿಸುವ ಸಿದ್ಧತೆ ನಡೆದಿದೆ ಎಂದು ಸಭೆಗೆ ಮಾಹಿತಿ ನೀಡಿದರು.

Advertisement

ಸಭೆಯಲ್ಲಿ ನಗರಸಭೆ ಅಧ್ಯಕ್ಷೆ ಶಾಲಿನಿರಾಜು ಚಿಂತಾಮಣಿ, ಕಂಠೀರವ ಸ್ಟುಡಿಯೋ ನಿಯಮಿತದ ಅಧ್ಯಕ್ಷೆ ಮೀನಾಕ್ಷಿ ಸಂಗ್ರಾಮ, ಜಿಪಂ ಸದಸ್ಯೆ ಗೀತಾ ಚಿದ್ರಿ, ಸಹಾಯಕ ಆಯುಕ್ತ ಶಿವಕುಮಾರ ಶೀಲವಂತ, ಬಸವಕಲ್ಯಾಣ ಅಭಿವೃದ್ಧಿ
ಮಂಡಳಿಯ ನಿರ್ದೇಶಕ ಶಿವರಾಜ ನರಶೆಟ್ಟಿ, ಹಿರಿಯ ಪತ್ರಕರ್ತ ಶಿವಶರಣಪ್ಪ ವಾಲಿ, ಮುಖಂಡರಾದ ಆನಂದ ದೇವಪ್ಪ, ಮಾರುತಿ ಬೌದ್ದೆ, ಸುರೇಶ ಚನ್ನಶೆಟ್ಟಿ, ಎಂ.ಎಸ್‌.ಮನೋಹರ, ವಿಜಯಕುಮಾರ ಸೋನಾರೆ, ವಿರುಪಾಕ್ಷ ಗಾದಗಿ ಇದ್ದರು.

ಉತ್ಸವದ ಲಾಂಛನ ಬಿಡುಗಡೆಗೊಳಿಸಿದ ಸಚಿವ ಖಂಡ್ರೆ 
ಬೀದರ:
ಬಸವಕಲ್ಯಾಣದಲ್ಲಿ ಫೆಬ್ರವರಿಯಲ್ಲಿ ಜರುಗಲಿರುವ ಬಸವ ಉತ್ಸವ-2018ರ ಲಾಂಛನವನ್ನು ಸಚಿವ
ಈಶ್ವರ ಖಂಡ್ರೆ ಅವರು ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಬಸವ ಉತ್ಸವದ ಪೂರ್ವಭಾವಿ ಸಭೆಯಲ್ಲಿ ಬಿಡುಗಡೆಗೊಳಿಸಿದರು.

ಬಸವ ಉತ್ಸವ ಸಿದ್ಧತೆಯ ರೂಪುರೇಷಗಳ ಬಗ್ಗೆ ಜಿಲ್ಲಾಡಳಿತದಿಂದ ಮಾಹಿತಿ ಪಡೆದು ಬಳಿಕ ಮಾತನಾಡಿದ ಅವರು, ಬಸವ ಉತ್ಸವಕ್ಕಾಗಿ ಕಲಾವಿದರನ್ನು ಗುರುತಿಸುವ ಕಾರ್ಯ ಅತ್ಯಂತ ಪ್ರಾಮಾಣಿಕವಾಗಿ ಹಾಗೂ ಪಾರದರ್ಶಕವಾಗಿ ನಡೆಯಬೇಕು. ಜಿಲ್ಲೆಯ ಎಲ್ಲಾ ಕಲಾವಿದರಿಗೆ, ಎಲ್ಲ ಸಮುದಾಯವರಿಗೆ ಆದ್ಯತೆ ಸಿಗುವಂತೆ ನೋಡಿಕೊಳ್ಳಬೇಕು. ಯಾವುದೇ ಗೊಂದಲಕ್ಕೆ ಅವಕಾಶವಿಲ್ಲದ ಹಾಗೆ ಉತ್ಸವ ನಡೆಯಲು ವ್ಯವಸ್ಥೆ ಮಾಡಬೇಕು ಎಂದು ಸೂಚಿಸಿದರು.

ಉತ್ಸವದ ಉದ್ಘಾಟನೆಗೆ ಆಗಮಿಸಲು ಮುಖ್ಯಮಂತ್ರಿ ಸಿದ್ಧರಾಮಯ್ಯನವರೊಂದಿಗೆ ಈಗಾಗಲೇ ಮಾತನಾಡಲಾಗಿದೆ. ಮತ್ತೂಂದು ಬಾರಿ ಈ ಬಗ್ಗೆ ಮಾತನಾಡಲಾಗುವುದು. ನೊಬೆಲ್‌ ಶಾಂತಿ ಪ್ರಶಸ್ತಿ ಪುರಷ್ಕೃತ ಕೈಲಾಸ್‌ ಸತ್ಯಾರ್ಥಿ ಅವರನ್ನು ಉತ್ಸವಕ್ಕೆ ಆಹ್ವಾನಿಸಲಾಗುವುದು ಎಂದು ಅವರು ಇದೆ ವೇಳೆ ತಿಳಿಸಿದರು. 

ಜಿಲ್ಲಾಧಿಕಾರಿ ಡಾ| ಎಚ್‌.ಆರ್‌. ಮಹಾದೇವ ಉತ್ಸವದ ಸಿದ್ಧತೆಯ ಬಗ್ಗೆ ವಿವರಿಸಿದರು. ನಗರಸಭೆ ಅಧ್ಯಕ್ಷೆ
ಶಾಲಿನಿರಾಜು ಚಿಂತಾಮಣಿ, ಕಂಠೀರವ ಸ್ಟುಡಿಯೋ ಅಧ್ಯಕ್ಷೆ ಮೀನಾಕ್ಷಿ ಸಂಗ್ರಾಮ, ಜಿಪಂ ಸದಸ್ಯೆ ಗೀತಾ ಚಿದ್ರಿ, ಸಹಾಯಕ ಆಯುಕ್ತ ಶಿವಕುಮಾರ ಶೀಲವಂತ, ಬಸವಕಲ್ಯಾಣ ಅಭಿವೃದ್ಧಿ ಮಂಡಳಿಯ ನಿರ್ದೇಶಕ ಶಿವರಾಜ ನರಶೆಟ್ಟಿ, ಹಿರಿಯ ಪತ್ರಕರ್ತ ಶಿವಶರಣಪ್ಪ ವಾಲಿ, ಮುಖಂಡರಾದ ಆನಂದ ದೇವಪ್ಪ, ಮಾರುತಿ ಬೌದ್ದೆ, ಸುರೇಶ ಚನ್ನಶೆಟ್ಟಿ, ಎಂ.ಎಸ್‌. ಮನೋಹರ, ವಿಜಯಕುಮಾರ ಸೋನಾರೆ, ವಿರುಪಾಕ್ಷ ಗಾದಗಿ ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next