Advertisement

ಆಳಂದ: 306 ಕ್ವಿಂಟಲ್‌ಅಕ್ರಮ ಪಡಿತರ ಅಕ್ಕಿ ಪತ್ತೆ

12:20 PM Apr 01, 2019 | Team Udayavani |
ಆಳಂದ: ಸ್ಥಳೀಯ ಆಹಾರ ಇಲಾಖೆ ಅಧಿಕಾರಿಗಳು ಹಠಾತ್‌ ದಾಳಿ ನಡೆಸಿ ಅಕ್ರಮವಾಗಿ ದಾಸ್ತಾನು ಮಾಡಿದ್ದ 7.70ಲಕ್ಷ ರೂ. ಮೌಲ್ಯದ 306 ಕ್ವಿಂಟಲ್‌ ಪಡಿತರ ಅಕ್ಕಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಪಟ್ಟಣದ ಎಚ್‌ಕೆಇ ಪದವಿ ಕಾಲೇಜು ಬಳಿಯ ಪಾರ್ಶ್ವನಾಥ ಬಡಾವಣೆಯಲ್ಲಿ ಅಕ್ರಮವಾಗಿ ಪಡಿತರ ಧಾನ್ಯ ಸಂಗ್ರಹಿಸುತ್ತಿರುವ ಕುರಿತು ಖಚಿತ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಅಧಿಕಾರಿಗಳು ದಾಳಿ ನಡೆಸಿದರು.
ಬಡಾವಣೆಯ ಅಂಬಣ್ಣಾ ಕೋಣೆ, ಇಸ್ಲಾಯಿಲ್‌ ಇಬ್ರಾಹಿಂ ಸಾಬ ಎನ್ನುವರಿಗೆ ಸೇರಿದ ಮನೆಯ ಕೋಣೆ ಬಾಡಿಗೆ ಪಡೆದು ಪಡಿತರ ಅಕ್ಕಿ ಸಂಗ್ರಹಿಸುತ್ತಿದ್ದರು.
ಈ ಕುರಿತು ಆಳಂದ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ತಹಶೀಲ್ದಾರ್‌ ಎಂ.ಎನ್‌. ಚೋರಗಸ್ತಿ, ಆಹಾರ ಶಿರಸ್ತೇದಾರ ಪ್ರವೀಣ ಹಾಗೂ ಸಿಬ್ಬಂದಿ ಈ ಸಂದರ್ಭದಲ್ಲಿದ್ದರು.
Advertisement

Udayavani is now on Telegram. Click here to join our channel and stay updated with the latest news.

Next