ಎಚ್.ಡಿ.ಕೋಟೆ: ಹೊರ ರಾಜ್ಯದಿಂದ ಒಂದಿಷ್ಟು ಕುಟುಂಬಗಳು ಜೀವನೋಪಾಯಕ್ಕೆ ಗುಳಿ ಬಂದಿದ್ದು,ಇವರೊಟ್ಟಿಗೆ ಇರುವ 18-20 ಮಕ್ಕಳು ಶಾಲೆಯ ಮುಖವನ್ನೇ ನೋಡದೆ ತಿರುಗುತ್ತಿದ್ದಾರೆ. ಶಿಕ್ಷಣ, ಅಟಪಾಠ ಪರಿವೇ ಇವರಿಗೆ ತಿಳಿದಿಲ್ಲ. 6 ವರ್ಷದಿಂದ 10 ವರ್ಷದವರೆಗಿನ ಸುಮಾರು 18-20 ಮಕ್ಕಳ ಬಗ್ಗೆ ಪೋಷಕರಿಗೇ ಕಾಳಜಿ ಇಲ್ಲ. ಹೊಟ್ಟೆ ತುಂಬಿದರೆ ಸಾಕು ಎಂಬ ಚಿಂತೆಯೇ ಇರುವಾಗ ಶಿಕ್ಷಣದ ಬಗ್ಗೆ ಯೋಚಿಸಲು ಪುರಸೊತ್ತು ಇಲ್ಲ.
ಕೋಟೆ ಪಟ್ಟಣದ ಜೆಎಸ್‌ಎಸ್ ಮಂಗಳ ಮಂಟಪದ ಎದುರಿನಲ್ಲಿರುವ ಖಾಲಿ ನಿವೇಶದಲ್ಲಿ ಮಕ್ಕಳು ಗುಂಪು ಕಟ್ಟಿ ಕೊಂಡು ತಿರುಗಾಡುತ್ತಿರುವ ದೃಶ್ಯಗಳು ಕಂಡು ಬರುತ್ತವೆ. ಆಂಧ್ರ ಪ್ರದೇಶದಿಂದ ಎಂಟತ್ತುಕುಟುಂಬಗಳು ಕಳೆದ ಐದಾರು ವರ್ಷಗಳ ಹಿಂದೆಬದುಕಿನ ಬಂಡಿಗಾಗಿ ಇಲ್ಲಿಗೆ ಗುಳೆ ಬಂದು ತಾತ್ಕಾಲಿಕ ಟೆಂಟ್‌ಗಳನ್ನು ಹಾಕಿಕೊಂಡು ವಾಸಿಸುತ್ತಿದ್ದಾರೆ.
ಕೂದಲು ಖರೀದಿ ವೃತ್ತಿ: ಬೆಳಗಾದರೆ, ಇವರು ತಮ್ಮ ಗಂಟು ಮೂಟೆಗಳೊಂದಿಗೆ ಕೂದಲು ಮತ್ತಿತರ ವಸ್ತುಗಳ ಖರೀದಿ-ಮಾರಾಟಕ್ಕೆ ಊರು ಊರುತಿರುಗುತ್ತಾರೆ. ಕತ್ತಲಾದ ಬಳಿಕವೇ ವಾಪಸ್ ಬರುತ್ತಾರೆ.ಅಲ್ಲಿಯವರೆಗೆ ಇವರ ಮಕ್ಕಳು ತಿರುಗಾಡುತ್ತಾ, ಕಾಲ ಕಳೆಯುತ್ತಿದ್ದಾರೆ. ಶಾಲೆ, ಓದು ಎಂದರೆ ಏನುಎಂಬುದೇ ತಿಳಿದಿಲ್ಲ. ಪೋಷಕರು ಕೊಟ್ಟಿದ್ದನ್ನು ತಿನ್ನುತ್ತಾತಮ್ಮ ಪಾಡಿಗೆ ತಾವು ಇರುತ್ತಾರೆ. ಈ ಪೈಕಿ ಕೆಲವರುಪೌಷ್ಟಿಕ, ರಕ್ತಹೀನತೆ ಕೊರತೆಯಿಂದ ಬಳಸಲುತ್ತಿದ್ದಾರೆ.
ಶಿಕ್ಷಣ ಪ್ರತಿ ಮಗುವಿನ ಹಕ್ಕು, 14ವರ್ಷದೊಳಗಿನ ಮಕ್ಕಳಿಗೆ ಉಚಿತವಾಗಿ ಶಿಕ್ಷಣ ನೀಡುತ್ತೇವೆ ಎಂದು ಸರ್ಕಾರಗಳು ಹೇಳಿಕೊಳ್ಳುತ್ತವೆ. ಆದರೆ, ತಾಲೂಕು ಕೇಂದ್ರ ಸ್ಥಾನದಲ್ಲಿ ಕಳೆದ ಸುಮಾರು 4-5ವರ್ಷಗಳ ಹಿಂದಿನಿಂದಲೂ ಬೀಡುಬಿಟ್ಟು ಹಲವು ಪೋಷಕರಿಗೆ ತಮ್ಮ ಮಕ್ಕಳು ಎಲ್ಲರಂತೆ ಶಾಲೆಗೆ ಹೋಗಬೇಕು ಎಂಬ ಬಯಕೆಯೇ ಇಲ್ಲವಾಗಿದೆ.
ಸುಮಾರು 16ರಿಂದ 20ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದರೂ ಶಿಕ್ಷಣ ಇಲಾಖೆಯಾಗಲಿ, ತಾಲೂಕುಮಹಿಳಾ ಮತ್ತು ಮಕ್ಕಳ ಇಲಾಖೆಯಾಗಲಿ ಇತ್ತ ಗಮನಹರಿಸಿಲ್ಲ. ವರ್ಷದಲ್ಲಿ ಒಂದೆರಡು ಬಾರಿ ಸ್ವಗ್ರಾಮಕ್ಕೆ ತೆರಳುವ ವಲಸಿಗ ಕುಟುಂಬದ ಮಕ್ಕಳ ಶಿಕ್ಷಣ ಅಷ್ಟೇ ಅಲ್ಲದೆ ಸರ್ಕಾರಿಸವಲತ್ತುಗಳಿಂದಲೂ ವಂಚಿತವಾಗಿವೆ. ಪೋಷ ಕರು ಹಳ್ಳಿಹಳ್ಳಿಗಳಿಗೆ ಮುಂಜಾನೆಯೇ ಹೊರ ಟರೆ ಮರಳಿ ಆವರುವಾಪಸ್ ಆಗುವುವದು ಸಂಜೆ ಮಾತ್ರ. ಅಲ್ಲಿಯ ತನಕ ಇಲ್ಲಿಮಕ್ಕಳಿಗೆ ಶಿಕ್ಷಣವೂ ಇಲ್ಲ, ರಕ್ಷಣೆಯೂ ಇಲ್ಲದೆ ಹಾವು,ಚೇಳುಗಳಿರುವ ಬಯಲಿನಲ್ಲಿ ಮರಗಳ ನೆರಳಿನಲ್ಲಿ ಆಟವಾಡಿಕೊಂಡು ದಿನ ಕಳೆಯುತ್ತಿವೆ. ಇಂತಿಷ್ಟು ಮಕ್ಕಳಿದ್ದು ಪೋಷಕರು ಜೀವ ನೋಪಾಯಕ್ಕಾಗಿ ವಲಸೆ ಬಂದ ಮಕ್ಕಳ ಕಲಿಕೆಗೆ ಪೂರಕವಾಗಿ ಸ್ಥಳೀಯ ಶಿಕ್ಷಣ ಸಂಸ್ಥೆ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಟೆಂಟ್ ಶಾಲೆಗಳನ್ನುಆರಂಭಿಸಿ ಕಲಿಕೆಗೆ ಸಹಕಾರಿಯಾಗಬೇಕು ಎಂಬ ನಿಯಮ ಇದೆ. ಆದರೆ, ಇದು ಪಾಲನೆಯಾಗುತ್ತಿಲ್ಲ
ಪಟ್ಟಣದ ಜೆಎಸ್‌ಎಸ್ ಮಂಗಳಮಂಟಪದ ಎದುರಿನಲ್ಲಿರುವ ಖಾಲಿನಿವೇಶದಲ್ಲಿ ಮಕ್ಕಳು ಬೀಡು ಬಿಟ್ಟಿರುವ ಕುರಿತು ಸ್ಥಳ ಪರಿಶೀಲನೆ ನಡೆಸಿ ಮಕ್ಕಳ ಭಾಷೆ ಮಾಹಿತಿ ಪಡೆದುಕೊಂಡು ಅವರನ್ನು ಶಾಲೆಗೆದಾಖಲಿಸಿಕೊಂಡು ಶೈಕ್ಷಣಿಕ ಅಭಿವೃದ್ಧಿಗೆ ಪೂರಕವಾಗಿ ಕ್ರಮ ಕೈಗೊಳ್ಳಲಾಗುವುದು.
– ಚಂದ್ರಕಾಂತ್, ತಾಲೂಕು ಕ್ಷೇತ್ರಶಿಕ್ಷಣಾಕಾರಿ
ಕೋಟೆ ಪಟ್ಟಣದಲ್ಲಿ ವಲಸಿಗರು ವಾಸ್ತವ್ಯ ಹೂಡಿರುವ ಸ್ಥಳಕ್ಕೆ ಶೀಘ್ರದಲ್ಲೇ ಭೇಟಿನೀಡಿ ಮಕ್ಕಳ ಸಂಖ್ಯೆ ದಾಖಲಿಸಿಕೊಂಡು ಅವರಿಗೆಅಗತ್ಯ ಪೌಷ್ಟಿಕ ಆಹಾರ ವಿತರಣೆಗೆ ಕ್ರಮವಹಿಸಲಾಗುವುದು.
– ಆಶಾ, ಮಹಿಳಾ ಹಾಗೂ ಮಕ್ಕಳ ಅಭಿವೃದ್ಧಿ ಅಧಿಕಾರಿ
– ಎಚ್.ಬಿ.ಬಸವರಾಜು