Advertisement
ಸೋಫಿಯಾ ಮೃತದೇಹದ ಸಮೀಪ ಪತ್ರವೊಂದು ಲಭ್ಯವಾಗಿದ್ದು, “ನಾನು ಡಿಪ್ರಶನ್‌ಗೆ (ಮಾನಸಿಕ ಖಿನ್ನತೆ) ಒಳಗಾಗಿ ಯಾತನೆ ಅನುಭವಿಸುತ್ತಿದ್ದೆ’ ಎಂದು ಬರೆಯಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಪೋಷಕರಿಂದ ದೂರವಿದ್ದ ಸೋಫಿಯಾ, ಅವರ ಪ್ರೀತಿಯಿಂದ ವಂಚಿತರಾದ ಕಾರಣ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದರು. ಇದೇ ನೋವಿನಲ್ಲಿ ಮಿತಿ ಮೀರಿ ಮಾತ್ರೆಗಳನ್ನು ಸೇವಿಸಿ ಆಯ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
Related Articles
Advertisement
ಅನಾರೋಗ್ಯದ ನಿಮಿತ್ತ ತೆಗೆದುಕೊಳ್ಳುವ ಮಾತ್ರೆಗಳನ್ನು ಅತಿ ಹೆಚ್ಚು ಸೇವಿಸಿರುವುದರಿಂದ ಸೋಫಿಯಾ ಮೃತಪಟ್ಟಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕ ಆಕೆಯ ಸಾವು ಹೇಗೆ ಸಂಭವಿಸಿದೆ ಎಂಬ ಬಗ್ಗೆ ಖಚಿತ ಮಾಹಿತಿ ತಿಳಿಯಲಿದೆ. ಎಂದು ಅಧಿಕಾರಿ ಹೇಳಿದರು.
ಒಂಟಿತನ, ಮಾನಸಿಕ ಖಿನ್ನತೆ: ಸೋಫಿಯಾ ಸಾವಿನ ಕುರಿತು ಎಲ್ಲ ಆಯಾಮಗಳಲ್ಲೂ ತನಿಖೆ ಮುಂದುವರಿಸಿ ಮಾಹಿತಿ ಸಂಗ್ರಹಿಸಲಾಗಿದೆ. ಆಕೆಯ ಪೋಷಕರು ದುಬೈನಲ್ಲಿ ವಾಸವಿದ್ದು, ಸೋಫಿಯಾ ವಿದ್ಯಾಭ್ಯಾಸ ಹಾಗೂ ಖರ್ಚಿಗೆ ಹಣ ಕಳುಹಿಸಿಕೊಡುತ್ತಿದ್ದರು. ಪೋಷಕರು ಹಣ ಮಾತ್ರ ಕಳುಹಿಸುತ್ತಾರೆ. ಆದರೆ ನೋಡಲು ಬರುವುದಿಲ್ಲ ಎಂದು ಯುವತಿ ಮಾನಸಿಕವಾಗಿ ನೊಂದಿದ್ದಳು ಎಂಬ ಮಾಹಿತಿಯಿದೆ.
ಈ ಕುರಿತು ಆಕೆಯ ಸ್ನೇಹಿತೆಯನ್ನು ಕೇಳಿದರೂ, ಸೋಫಿಯಾ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು ಎಂದಷ್ಟೇ ಹೇಳಿದ್ದಾರೆ. ಆಕೆಯ ಮೃತದೇಹದ ಪಕ್ಕದಲ್ಲಿ ದೊರೆತ ಚೀಟಿಯೊಂದರಲ್ಲಿ, “ಸಾರಿ… ನಿನ್ನ ಜತೆ ಬರಲು ಸಾಧ್ಯವಾಗಿಲ್ಲ’ ಎಂಬ ಸಂದೇಶ ಕೂಡ ಇದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.