Advertisement

ಠೇವಣಿದಾರರ ಹಿತಾಸಕ್ತಿ ಕಾಯಿದೆ ಮಂಡನೆ: ವಿಶೇಷ ನ್ಯಾಯಾಲಯ ಸ್ಥಾಪನೆಗೆ ನಿರ್ಧಾರ

01:05 PM Sep 16, 2022 | Team Udayavani |

ಬೆಂಗಳೂರು: ಹಣಕಾಸು ಸಂಸ್ಥೆಗಳಲ್ಲಿ ಠೇವಣಿದಾರರ ಹಿತಾಸಕ್ತಿ ಸಂರಕ್ಷಣೆ ಮಾಡುವ ಕಾಯಿದೆಯನ್ನು ರಾಜ್ಯ ಸರಕಾರ ಶುಕ್ರವಾರ ವಿಧಾನಸಭೆಯಲ್ಲಿ ಮಂಡಿಸಿದ್ದು, ಪ್ರಕರಣಗಳ ತ್ವರಿತ ವಿಲೇವಾರಿಗಾಗಿ ವಿಶೇಷ ನ್ಯಾಯಾಲಯ ಸ್ಥಾಪನೆ ಮಾಡಲು ನಿರ್ಧರಿಸಿದೆ.

Advertisement

ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಜೆ.ಸಿ.ಮಾಧುಸ್ವಾಮಿ ವಿಧೇಯಕ ಮಂಡನೆ ಮಾಡಿದರು. ಈ‌ ಹಿಂದೆ ಸುಗ್ರೀವಾಜ್ಞೆ ರೂಪದಲ್ಲಿ ಜಾರಿಯಲ್ಲಿದ್ದ ಈ ವಿಧೇಯಕಕ್ಕೆ ಇನ್ನು ಮುಂದೆ ಕಾಯಿದೆ ಸ್ವರೂಪ ಲಭಿಸಲಿದೆ.

ಹೇಗೆ ರಕ್ಷಣೆ?:  ಹಣಕಾಸು ಸಂಸ್ಥೆ ಅಥವಾ ವ್ಯಕ್ತಿ ಅಪರಾಧ ಎಸಗಿದಾಗ ಅಥವಾ ಠೇವಣಿದಾರರ ಹಿತಾಸಕ್ತಿಗೆ ಧಕ್ಕೆ ತಂದಾಗ ಈ ಹಿಂದೆ ಪ್ರಕರಣಗಳ ವಿಚಾರಣೆ ವಿಳಂಬವಾಗುತ್ತಿತ್ತು. ಒಂದು ಜಿಲ್ಲೆ, ಠಾಣೆ, ಕಮಿಷನರೇಟ್ ವ್ಯಾಪ್ತಿಯಲ್ಲಿ ದಾಖಲಾದ ಪ್ರಕರಣಗಳನ್ನು ಪ್ರತ್ಯೇಕ ವಿಚಾರಣೆ ನಡೆಸಲಾಗುತ್ತಿತ್ತು. ಆದರೆ ಈಗ ಎಲ್ಲ ಪ್ರಕರಣಗಳನ್ನು ಮೂದಲ ಪ್ರಕರಣದಲ್ಲಿ ವಿಲೀನಗೊಳಿಸುವುದಕ್ಕೆ ಈಗ ಅವಕಾಶ ನೀಡಲಾಗುತ್ತದೆ.

ಇದನ್ನೂ ಓದಿ:ಭಾರತ್ ಜೋಡೋ ಯಾತ್ರೆಗೆ ಗೂಂಡಾಗಿರಿ ಮೂಲಕ ದೇಣಿಗೆ ಸಂಗ್ರಹ: ವಿಡಿಯೋ ವೈರಲ್

ಇವುಗಳ ವಿಚಾರಣೆಗೆ ವಿಶೇಷ ನ್ಯಾಯಾಲಯ ಸ್ಥಾಪನೆ ಮಾಡಲಾಗುತ್ತದೆ.  ಅಪರಾಧವನ್ನು ಸಜೆಯ ಮತ್ತು‌ ಜಾಮೀನು ರಹಿತವೆಂದು ಪರಿಗಣಿಸುವುದಕ್ಕೂ ಕಾಯಿದೆಯಲ್ಲಿ ಅವಕಾಶ ನೀಡಲಾಗಿದೆ. ಚರ್ಚೆಯಲ್ಲಿ ಶಿವಾನಂದ್ ಪಾಟೀಲ್, ಪ್ರಿಯಾಂಕ ಖರ್ಗೆ ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next