Advertisement

2018ಕ್ಕೆ BPL ಕಾರ್ಡ್ ಇದ್ದವರ ಖಾತೆಗೂ ಹಣ ಜಮೆ ಆಗುತ್ತಂತೆ! HDD

04:56 PM Feb 10, 2017 | Sharanya Alva |

ಬೆಂಗಳೂರು: 2018ರ ಚುನಾವಣೆ ಏನಾಗಬಹುದು ಎಂದು ನನಗೆ ಗೊತ್ತಿದೆ. ಯಾಕೆಂದರೆ ಪ್ರಧಾನಿ ನರೇಂದ್ರ ಮೋದಿಯನ್ನು ಹಗುರವಾಗಿ ಪರಿಗಣಿಸಬೇಡಿ. 2018ರ ಚುನಾವಣೆ ವೇಳೆ ಬಿಪಿಎಲ್ ಕಾರ್ಡ್ ಇರುವ ಖಾತೆದಾರರಿಗೆ ಹಣ ಹಾಕುವ ಸಾಧ್ಯತೆ ಇದೆ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಭವಿಷ್ಯ ನುಡಿದಿದ್ದಾರೆ.

Advertisement

ಶುಕ್ರವಾರ ನಗರದ ಅರಮನೆ ಮೈದಾನದಲ್ಲಿ ನಡೆದ ರಾಜ್ಯಮಟ್ಟದ ಚುನಾವಣಾ ಪೂರ್ವಭಾವಿ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಬಿಪಿಎಲ್ ಕಾರ್ಡ್ ಹೊಂದಿರುವ ಖಾತೆಗಳಿಗೆ ಕನಿಷ್ಠ 20ರಿಂದ 25 ಸಾವಿರ ರೂಪಾಯಿ ಹಣ ಜಮಾ ಮಾಡಬಹುದು. ಈ ಬಗ್ಗೆ ಎಚ್ಚರಿಕೆ ಇರಲಿ ಎಂದು ಪಕ್ಷದ ಕಾರ್ಯಕರ್ತರಿಗೆ ಕಿವಿಮಾತನ್ನು ಹೇಳಿದ್ದಾರೆ.

ಪಕ್ಷದ ಕಾರ್ಯಕರ್ತರು ಯಾವುದೇ ಹಣದ ಆಮಿಷಕ್ಕೆ ಒಳಗಾಗದೇ ಇದನ್ನೆಲ್ಲಾ ಮೆಟ್ಟಿ ನಿಲ್ಲಬೇಕು ಎಂದು ದೇವೇಗೌಡರು ಹೇಳಿದರು. ಕಾರ್ಯಕರ್ತರನ್ನು ಸೇರಿಸುವ ಮುಖಂಡರಿಗೆ ಪಕ್ಷದ ಟಿಕೆಟ್ ನೀಡಲಾಗುವುದು ಎಂದು ಈ ಸಂದರ್ಭದಲ್ಲಿ ಘೋಷಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next