Advertisement

ಸಬ್‌ಮರೀನ್‌ ರಕ್ಷಣೆ ವ್ಯವಸ್ಥೆ ನೌಕಾಪಡೆಗೆ ನಿಯೋಜನೆ

06:00 AM Oct 14, 2018 | Team Udayavani |

ನವದೆಹಲಿ: ಸಬ್‌ಮರೀನ್‌ಗಳನ್ನು ಸಮುದ್ರದ ಆಳದಲ್ಲಿ ರಕ್ಷಿಸುವ ಜಲಾಂತರ್ಗಾಮಿ ರಕ್ಷಣಾ ವ್ಯವಸ್ಥೆಯನ್ನು ನೌಕಾಪಡೆಗೆ ನಿಯೋಜಿಸಲಾಗಿದೆ. ಇದರಿಂದಾಗಿ ಇಂತಹ ವ್ಯವಸ್ಥೆಯನ್ನು ಹೊಂದಿರುವ ವಿಶ್ವದ ಕೆಲವೇ ದೇಶಗಳ ಪೈಕಿ ಭಾರತ ಒಂದಾಗಿದೆ. ಸದ್ಯ ಅಮೆರಿಕ, ಚೀನಾ, ರಷ್ಯಾ ಮತ್ತು ಇತರ ಕೆಲವು ದೇಶಗಳಲ್ಲಿ ಈ ಡಿಎಸ್‌ಆರ್‌ವಿ ಇದೆ. ಸದ್ಯ ಈ ವ್ಯವಸ್ಥೆಯನ್ನು ಮುಂಬೈ ನೌಕಾನೆಲೆಯಲ್ಲಿ ನಿಯೋಜಿಸ ಲಾಗಿದ್ದು, ಇನ್ನೊಂದು ಡಿಎಸ್‌ಆರ್‌ವಿಯನ್ನು ವಿಶಾಖಪಟ್ಟಣದಲ್ಲಿ 2019ರಲ್ಲಿ ನಿಯೋಜಿಸಲಾಗುತ್ತದೆ. ಇದನ್ನು ಹಿಂದೂಸ್ತಾನ್‌ ಶಿಪ್‌ಯಾರ್ಡ್‌ ನಿರ್ಮಿಸಿದೆ.

Advertisement

ಸಬ್‌ಮರೀನ್‌ಗಳು ಸಮುದ್ರದ ಆಳದಲ್ಲಿ ಹಾಳಾದರೆ ಅಥವಾ ಸಮಸ್ಯೆಗೆ ಸಿಲುಕಿದರೆ ಅವುಗಳನ್ನು ರಕ್ಷಿಸುವಲ್ಲಿ ಇದು ಮಹತ್ವದ ಪಾತ್ರ ವಹಿಸಲಿವೆ. ಈ ವ್ಯವಸ್ಥೆಯನ್ನು ಬೇಕೆಂದಲ್ಲಿ ವಿಮಾನದಲ್ಲಿ ಹೊತ್ತೂಯ್ಯಬಹುದು. ಇದು ನೌಕಾಪಡೆಗೆ ಮಹತ್ವದ ಬಲವರ್ಧಕವಾಗಿದೆ. ಹಿಂದೂ ಮಹಾಸಾಗರದಲ್ಲಿ ಚೀನಾ ತನ್ನ ಸಾಮರ್ಥ್ಯ ಹಾಗೂ ಕಣ್ಗಾವಲು ಹೆಚ್ಚಿಸಿರುವ ಹಿನ್ನೆಲೆಯಲ್ಲಿ ಈ ಸಲಕರಣೆ ಮಹತ್ವ ಪಡೆದಿದೆ.
 

Advertisement

Udayavani is now on Telegram. Click here to join our channel and stay updated with the latest news.

Next