Advertisement
ಬಾಲಾಕೋಟ್ ದಾಳಿ ಬಳಿಕ ತುರ್ತು ಖರೀದಿ ಒಪ್ಪಂದ ಅನ್ವಯ ಸೇನೆ ಇಸ್ರೇಲ್‌ನಿಂದ ಕ್ಷಿಪಣಿಗಳನ್ನು ಖರೀದಿಸಿದೆ. ಒಟ್ಟು 210 ಕ್ಷಿಪಣಿಗಳು ಮತ್ತು 12 ಲಾಂಚರ್‌ಗಳು ಇದ್ದು, 280 ಕೋಟಿ ರೂ. ಮೌಲ್ಯದ ಒಪ್ಪಂದ ಇದಾಗಿದೆ. ಈಗಾಗಲೇ ಇದು ಸೇನೆ ಕೈ ಸೇರಿದ್ದು ನಿಯಂತ್ರಣ ರೇಖೆಯಲ್ಲಿ ನಿಯೋಜಿಸಲ್ಪಟ್ಟಿದೆ. ಉಡಾವಣೆ ಬಳಿಕ ನಿರ್ದೇಶಿತ ಗುರಿಗೆ ಹೋಗಿ ಕ್ಷಿಪಣಿ ಅಪ್ಪಳಿಸುತ್ತದೆ. ಇದಕ್ಕೆ ಪುಟ್ಟ ಕಂಪ್ಯೂಟರೀಕೃತ ವ್ಯವಸ್ಥೆಯಾಗಿದ್ದು, ಜಗತ್ತಿನಲ್ಲೇ ಅತಿ ನಿಖರವಾಗಿ ಗುರಿ ಛೇದಿಸಬಲ್ಲ ಎಟಿಜಿಎಂಗಳೆಂಬ ಹೆಗ್ಗಳಿಕೆ ಇವುಗಳಿವೆ.
ಈ ಕ್ಷಿಪಣಿಗಳು ಟ್ಯಾಂಕ್ ನಿರೋಧಕ ಕ್ಷಿಪಣಿಗಳು. ಯುದ್ಧ ಟ್ಯಾಂಕ್‌ಗಳನ್ನು ಉಡಾಯಿಸಬಲ್ಲವು. ಬಹುಮುಖ್ಯವಾಗಿ ಬಂಕರ್‌ಗಳ ಧ್ವಂಸಕ್ಕೂ ಉಪಯೋಗಿಸಲಾಗುತ್ತದೆ. ಇವುಗಳು ಗೈಡೆಡ್ ಕ್ಷಿಪಣಿಗಳಾಗಿದ್ದು, ಉಡಾವಣೆ ಬಳಿಕ ಗುರಿಗೆ ಅಪ್ಪಳಿಸುವವರೆಗೆ ನಿಯಂತ್ರಿಸಬಹುದು. ಗುರಿಯನ್ನೂ ಬದಲು ಮಾಡಿಕೊಳ್ಳಬಹುದು. ಸೇನೆಯ ಸೈನಿಕರು ಇಬ್ಬರು ಕೂತು ಇದನ್ನು ಉಡಾಯಿಸಬಹುದು. ಅಥವಾ ಪ್ರತ್ಯೇಕ ವ್ಯವಸ್ಥೆಯಲ್ಲಿ ಉಡಾಯಿಸಬಹುದು. ಸಣ್ಣದಿದ್ದರೂ ಅತಿ ಪ್ರಬಲವಾಗಿರುತ್ತವೆ. ಹೆಚ್ಚಿನ ಹಾನಿಯುಂಟು ಮಾಡುತ್ತವೆ. ಒಟ್ಟು ನಾಲ್ಕು ಕಿ.ಮೀ. ವ್ಯಾಪ್ತಿಯಲ್ಲಿ ಇವುಗಳನ್ನು ಬಳಸಬಹುದು. ಇವುಗಳನ್ನು ಉಗ್ರರ ಅಡಗುದಾಣ ಅಥವಾ ಕದನ ವಿರಾಮ ಉಲ್ಲಂಘನೆಗೆ ಪಾಕ್ ಮಿಲಿಟರಿ ಬಳಸುವ ಗುಪ್ತ ನೆಲೆಗಳನ್ನು ಧ್ವಂಸಗೊಳಿಸಲು, ಬಂಕರ್‌ಗಳನ್ನು ಉಡಾಯಿಸಲು ಸೇನೆ ಇವುಗಳನ್ನು ಬಳಸುವ ಉದ್ದೇಶ ಹೊಂದಿದೆ.