Advertisement
ಪರಿಸರದ ಕಾಳಜಿಯುಳ್ಳ, ಮಲೆನಾಡಿನ ಹೆಸರಾಂತ ಕಥೆಗಾರರಾಗಿ ಕನ್ನಡ ಸಾಹಿತ್ಯ ಲೋಕದಲ್ಲಿ ವಿವಿಧ ಪ್ರಕಾರಗಳ ಸಾಹಿತ್ಯದ ಮೂಲಕ ನಾಡಿನ ಜನಮಾನಸದಲ್ಲಿ ನೆಲೆಸಿರುವ ನಾ ಡಿ’ಸೋಜ ಅವರು ಬರೆದಿರುವ “ಇಗರ್ಜಿ ಸುತ್ತಲಿನ ಹತ್ತು ಮನೆಗಳು’ ಕಾದಂಬರಿ ಕ್ರೈಸ್ತ ಸಮುದಾಯದ ಹಿನ್ನೆಲೆ, ಮಲೆನಾಡಿನಲ್ಲಿ ಅದು ಬೇರೂರಿದ ಬಗೆ ಮತ್ತು ಅದರ ಸ್ಥಿತ್ಯಂತರದ ಬೆಳಕನ್ನು ಚೆಲ್ಲಿದೆ.
ಎಳೆಯಾಗಿ ಚಿತ್ರಿಸಿದ್ದಾರೆ. ಈ ಕಾದಂಬರಿ ಮಾನವನ ಸಾಮಾಜಿಕ, ಧಾರ್ಮಿಕ ಮೌಲ್ಯಗಳನ್ನು ಎತ್ತಿಹಿಡಿಯುವುದಲ್ಲದೆ ಅವು ಗಳ ಸಂಘರ್ಷವನ್ನು ವಿವರಿಸುತ್ತದೆ. ಎಲ್ಲವನ್ನು ತ್ಯಜಿಸಿ ಧರ್ಮಗುರುವಾಗಿ ಧಾರ್ಮಿಕ, ಸಾಮಾಜಿಕ ಕಾರ್ಯಗಳನ್ನು ನಿರ್ವಹಿಸಿದ ನೆನಪಿನ ಮೆಲುಕು ಓದುಗರ ಕೂತೂಹಲವನ್ನು ಕೆರಳಿಸಿ ಆದಿಯಿಂದ ಅಂತ್ಯದ ವರೆಗೆ ಓದುಗರ ಲಕ್ಷ್ಯವನ್ನು ಸಂಪೂರ್ಣವಾಗಿ ಹಿಡಿದಿಡುತ್ತದೆ. ತಾನು ಕಟ್ಟಿದ ಚರ್ಚಿಗೆ ಐವತ್ತರ ಸಂಭ್ರಮ ವನ್ನು ತಿಳಿದು ಮತ್ತು ಆ ಸಮಾರಂಭಕ್ಕೆ ಆಹ್ವಾನ ವಿತ್ತಾಗ ಅವರಲ್ಲಿ ಉಂಟಾಗುವ ಸಂತೋಷ ಮತ್ತು ಅವರು ನೆನಪನ್ನು ಮೆಲುಕು ಹಾಕುವ ಪರಿ ಕಾದಂಬರಿಯನ್ನು ಸರಾಗವಾಗಿ ಓದು ವಂತೆ ಪ್ರೇರೇಪಿಸುತ್ತದೆ. ಒಪ್ಪಿಕೊಂಡಿರುವ ಕೆಲಸ ಯಾವುದಾದರೇನು? ಅದರ ನಿರ್ವ ಹಿಸುವ ಹೊಣೆಗಾರಿಕೆ ಮತ್ತು ಮಲೆನಾಡಿನಲ್ಲಿ ಕ್ರೈಸ್ತ ಧರ್ಮ ಗಟ್ಟಿಯಾಗಿ ನೆಲೆಯೂರಲು ಅವರು ಪಟ್ಟ ಪರಿಶ್ರಮ ಹಾಗೂ ಅದನ್ನು ವ್ಯಾಪ್ತಿಯ ಬಗ್ಗೆ ಮೊದಲ ಭಾಗ ತಿಳಿಸಿದರೆ ಕೊನೆಯ ಭಾಗ ಮಾನವ ಸಂಬಂಧಗಳಲ್ಲಿ ಬಿರುಕುಂಟಾಗಿ ಅವನತಿಯಾಗುವಾಗ ಫಾದರ್ ಅವರು ಹತಾಶರಾಗುವುದು ಓದು ಗನಲ್ಲಿ ದುಃಖ ಉಮ್ಮಳಿಸುವಂತೆ ಮಾಡುತ್ತದೆ.
Related Articles
Advertisement
ಸಿಮೋನ ಬೋನಾ ಇನಿಸಾ ರಂಗಿ, ಮೋರಿ, ಪೆದ್ರು, ವಿನ್ಸೆಂಟ್, ಫಾದರ್ ಗೊನ್ಸಾಲ್ವಿಸ್, ಫಾದರ್ ಸಿಕ್ವೇರ, ಫಾದರ್ ಡಿ’ಸೋಜ ಪಾತ್ರ ಗಳಿಗೆ ಲೇಖಕರು ಜೀವತುಂಬಿ ನೈಜತೆಯ ಭಾವವನ್ನು ಮೂಡಿಸಿದ್ದಾರೆ.
ನಂಬಿಕೆಗಳ ನಡುವೆ ನಡೆಯುವ ಮಾನಸಿಕ ಸಂಘರ್ಷವನ್ನು ಲೇಖಕರು ಮನೋಜ್ಞವಾಗಿ ಚಿತ್ರಿಸಿದ್ದಾರೆ. ಸಮಾಜದಲ್ಲಿ ನೊಂದವರ ಒಳಿತಿಗಾಗಿ ಮತ್ತು ಪರರಿಗಾಗಿಯೇ ಜೀವನ ವೆಂದು ನಂಬಿ ಬದುಕಿನ ಕೊನೆಯ ಕ್ಷಣದವರೆಗೆ ಸಾರ್ಥಕ ಜೀವನ ನಡೆಸಿದ ಫಾ| ಗೊನ್ಸಾಲ್ವಿಸರ ಪಾತ್ರವನ್ನು ಓದುಗ ಮರೆಯಲು ಅಸಾಧ್ಯ.
ಪ್ರವೀಣ್ ಪೂಜಾರಿ, ಮೂಡುಬಿದಿರೆ