ಕಲಬುರಗಿ: ಜಿಲ್ಲೆಯ ಸಮಗ್ರ ಪ್ರಗತಿ ನಿಟ್ಟಿನಲ್ಲಿ “ಕಲಬುರಗಿ ವಿಷನ್-2050′ ಸಾಕಾರಗೊಳಿಸಲು ಇಲಾಖಾವಾರು ಸಮಿತಿಯನ್ನು ಒಂದು ವಾರದೊಳಗೆ ರಚಿಸಿ ಸದಸ್ಯರನ್ನು ನೇಮಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ವಾಸಿರೆಡ್ಡಿ ವಿಜಯಾ ಜ್ಯೋತ್ಸ್ನಾ ಜಿಲ್ಲಾ ಮಟ್ಟದ ಅಧಿ ಕಾರಿಗಳಿಗೆ ನಿರ್ದೇಶನ ನೀಡಿದರು. ಜಿಲ್ಲಾಧಿ ಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ “ಕಲಬುರಗಿ ವಿಷನ್-2050′ ಕುರಿತಂತೆ ಅ ಧಿಕಾರಿಗಳೊಂದಿಗೆ ಮೊದಲ ಸುತ್ತಿನ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮುಂದಿನ 30 ವರ್ಷಗಳಲ್ಲಿ ಜಿಲ್ಲೆಯಲ್ಲಿ ಕೈಗಾರಿಕೆ, ಕೃಷಿ, ಆರೋಗ್ಯ, ಪ್ರವಾಸೋದ್ಯಮ, ಕ್ರೀಡೆ, ನಗರಭಿವೃದ್ಧಿ, ಗ್ರಾಮೀಣಭಿವೃದ್ಧಿ, ನೀರಾವರಿ, ಕಲೆ ಮತ್ತು ಸಾಹಿತ್ಯ ಹಾಗೂ ಶಿಕ್ಷಣ ಹೀಗೆ ಎಲ್ಲ ಕ್ಷೇತ್ರಗಳಲ್ಲಿ ಸವಾಂìಗೀಣ ಅಭಿವೃದ್ಧಿಗೆ ಎಲ್ಲ ಇಲಾಖೆಗಳು ಕಾರ್ಯ ಪ್ರವೃತ್ತರಾಗಬೇಕು. ಅದಕ್ಕಾಗಿಯೇ ಸಮಿತಿಗಳನ್ನು ರಚಿಸಿ, ಸಮಿತಿ ಮೂಲಕ “ವಿಜನ್-2050′ ಯೋಜನೆಯನ್ನು ಸಾಕಾರಗೊಳಿಸಬೇಕೆಂದು ತಿಳಿಸಿದರು. ಪ್ರತಿಯೊಂದು ಸಮಿತಿಯಲ್ಲಿ 10 ಜನರಿಂದ ಕೂಡಿರಬೇಕು. ಆಯಾ ಕ್ಷೇತ್ರದ ಅಭಿವೃದ್ಧಿಗೆ ಸಮಿತಿ ಸದಸ್ಯರಿಂದ ಅಗತ್ಯ ಸಲಹೆ ಪಡೆದುಕೊಳ್ಳಬೇಕು.
ಸಮಿತಿಯು ಹಂತ-ಹಂತವಾಗಿ ಸಭೆ ನಡೆಸಿ ಯೋಜನೆ ಬಗ್ಗೆ ಪರಿಪೂರ್ಣವಾದ ನಿರ್ದೇಶನ, ಯೋಜನೆ ಹಾಗೂ ಗುರಿಗಳನ್ನು ಸಿದ್ಧಪಡಿಸಿವುದು ಮುಖ್ಯವಾಗಿದೆ ಎಂದರು. ಸಾಮಾನ್ಯವಾಗಿ ಇಲಾಖೆಗೆ ಹಂಚಿಕೆಯಾಗುವ ಅನುದಾನವನ್ನೇ ಬಳಸಿಕೊಂಡು ಅಭಿವೃದ್ಧಿ ಸಾ ಧಿಸುವ ನಿಟ್ಟಿನಲ್ಲಿ ಕೆಲಸಗಳು ಆಗಬೇಕು. ಮೂಲಸೌಕರ್ಯ ಮತ್ತು ಮಾನವ ಸಂಪನ್ಮೂಲಗಳನ್ನು ಸಂಪೂರ್ಣವಾಗಿ ಬಳಸಿಕೊಳ್ಳಬೇಕು. ಪ್ರತಿಯೊಬ್ಬರೂ ಆಯಾ ಕ್ಷೇತ್ರದಲ್ಲಿ ಹೀಗೆ ಕೆಲಸ ಆಗಬೇಕು ಎಂದು ಕನಸು ಕಂಡಿರುತ್ತಾರೆ. ಹೀಗಾಗಿ ಎಲ್ಲರ ಅಭಿಪ್ರಾಯವನ್ನು ಮುಕ್ತವಾಗಿ ಹಂಚಿಕೊಳ್ಳಲು ಇ-ಮೇಲ್ ವಿಳಾಸ ಸೃಜಿಸಿ ಸಾರ್ವಜನಿಕವಾಗಿ ನೀಡಬೇಕು. ಈ ಮೂಲಕ ಎಲ್ಲರ ಅಭಿಪ್ರಾಯ ಪಡೆಯಬೇಕು ಎಂದರು.
ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ರಾಹುಲ್ ಪಾಂಡ್ವೆ ಮಾತನಾಡಿ, ವಿಷನ್-2050 ಪ್ರಕಾರ ಜಿಲ್ಲೆ ಅಭಿವೃದ್ಧಿ ಹೊಂದಬೇಕಾದರೆ ಬರುವ 10 ವರ್ಷಗಳ ಆದಾಯವನ್ನು ಹೆಚ್ಚಿಸುವುದು ಅತೀ ಅವಶ್ಯಕವಾಗಿದೆ. ಇದಕ್ಕಾಗಿ ಕೈಗಾರಿಕೆ, ನಗರ ಪ್ರದೇಶಾಭಿವೃದ್ಧಿ, ಮೂಲಸೌಕರ್ಯ ಅಭಿವೃದ್ಧಿ ಪಡಿಸು ವುದು ಮುಖ್ಯವಾಗಿದೆ ಎಂದರು. ಯೋಜನೆ ಸಾಕಾರಕ್ಕೂ ಮುನ್ನ ಮೊದಲಿಗೆ 5ರಿಂದ 10 ವರ್ಷಗಳಲ್ಲಿ ಯಾವ ರೀತಿಯಾಗಿ ಆದಾಯ ಬರಲಿದೆ ಎನ್ನುವುದರ ಕುರಿತು ತಿಳಿಯುವುದೂ ಅವಶ್ಯಕ. ನಮ್ಮ ಭಾಗದಲ್ಲಿ ಕೃಷಿ ಪ್ರಮುಖ ಆಗಿರುವುದರಿಂದ ಕೃಷಿಗೆ ಹೆಚ್ಚಿನ ಒತ್ತು ನೀಡಬೇಕು.
ಅಲ್ಲದೆ ಕೈಗಾರಿಕೆಗೂ ಮಹತ್ವ ನೀಡಬೇಕಿದೆ. ಮೊದಲಿಗೆ ವಿಷನ್ ಬಗ್ಗೆ ಅಧ್ಯಯನ ಮಾಡಿ ನಂತರ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಬಗ್ಗೆ ಚರ್ಚಿಸೋಣ ಎಂದು ಜಿಪಂ ಸಿಇಒ ಡಾ| ದಿಲೀಷ್ ಸಸಿ ತಿಳಿಸಿದರು. ಮಹಾನಗರ ಪಾಲಿಕೆ ಆಯುಕ್ತ ಸ್ನೇಹಲ ಸುಧಾಕರ ಲೋಖಂಡೆ, ಅಪರ ಜಿಲ್ಲಾ ಧಿಕಾರಿ ಡಾ| ಶಂಕರ ವಣಿಕ್ಯಾಳ ಹಾಗೂ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅ ಧಿಕಾರಿಗಳು ಭಾಗವಹಿಸಿದ್ದರು.