Advertisement

ಸಾರಿಗೆ ಇಲಾಖೆಯ 30 ಸೇವೆ ಆನ್‌ಲೈನ್‌; ದಕ್ಷಿಣ ಕನ್ನಡ, ಉಡುಪಿಯಲ್ಲಿ ಆರಂಭ

01:56 AM Dec 13, 2021 | Team Udayavani |

ಮಂಗಳೂರು/ ಉಡುಪಿ: ಆನ್‌ಲೈನ್‌ನಲ್ಲೇ ಸಾರಿಗೆ ಇಲಾಖೆಯ 30 ಸೇವೆಗಳನ್ನು ಪಡೆಯಲು ಸರಕಾರ ಅವಕಾಶ ಕಲ್ಪಿಸಿದ್ದು, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಆರ್‌ಟಿಒ ಕಚೇರಿಗಳಲ್ಲಿ ಈ ಸೌಲಭ್ಯ ಆರಂಭಗೊಂಡಿದೆ.
www.parivahan.gov.inನಲ್ಲಿ ಅರ್ಜಿ ಸಲ್ಲಿಸಿ ದಾಖಲೆಗಳನ್ನು ಅಪ್‌ಲೋಡ್‌ ಮಾಡಿ ಸೇವೆ ಪಡೆಯಬಹುದು. ಮಂಗಳೂರು, ಬಂಟ್ವಾಳ ಮತ್ತು ಪುತ್ತೂರು, ಉಡುಪಿ ಆರ್‌ಟಿಒ ಕಚೇರಿಗಳಲ್ಲಿ ಈ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ.

Advertisement

ಯಾವ ಸೇವೆಗಳು
ಕಲಿಕಾ ಚಾಲನ ಅನುಜ್ಞಾಪತ್ರ (ಎಲ್‌ಎಲ್‌ಆರ್‌) ಮತ್ತು ಹೊಸ ವರ್ಗಗಳ ಸೇರ್ಪಡೆ, ಕಲಿಕಾ ಚಾಲನ ಅನುಜ್ಞಾ ಪತ್ರದಲ್ಲಿ ಹೆಸರು ಬದಲಾವಣೆ, ಕಲಿಕಾ ಚಾಲನ ಅನುಜ್ಞಾ ಪತ್ರದಲ್ಲಿ ವಿಳಾಸ ಬದಲಾವಣೆ, ನಕಲು ಕಲಿಕಾ ಚಾಲನ ಅನುಜ್ಞಾ ಪತ್ರ, ನಿರ್ವಾಹಕ ಚಾಲನ ಅನುಜ್ಞಾ ಪತ್ರ ಸಹಿತ “ಸಾರಥಿ’ ವಿಭಾಗದ 11 ಸೇವೆಗಳು ಹಾಗೂ ಮಾರಾಟಗಾರರ ಹಂತದಲ್ಲಿ ಹೊಸ ವಾಹನಗಳ ನೋಂದಣಿ, ವಾಹನ ಮಾಲಕತ್ವ ವರ್ಗಾವಣೆ, ನಕಲು ನೋಂದಣಿ ಪ್ರಮಾಣಪತ್ರ, ಮೋಟಾರು ಕ್ಯಾಬ್‌ ಪರ್ಮಿಟ್‌ ನೀಡುವಿಕೆ/ ನವೀಕರಣ, ಸರಕು ಸಾಗಣೆ ವಾಹನ ರಹದಾರಿ ನೀಡುವಿಕೆ/ನವೀಕರಣ, ಆಟೋರಿಕ್ಷಾ ಕ್ಯಾಬ್‌ ಪರ್ಮಿಟ್‌ ನವೀಕರಣ ಇತ್ಯಾದಿ 19 ಸೇವೆಗಳನ್ನು ಆನ್‌ಲೈನ್‌ನಲ್ಲಿ ಒದಗಿಸಲಾಗುತ್ತಿದೆ.

30 ಸೇವೆಗಳು ಆನ್‌ಲೈನ್‌ನಲ್ಲಿಯೇ ದೊರೆಯುತ್ತಿವೆ. ಆನ್‌ಲೈನ್‌ಗೆ ಸಂಬಂಧಿಸಿ ತಾಂತ್ರಿಕ ಸಮಸ್ಯೆ ಉಂಟಾದರೆ ಮಾತ್ರ ಕಚೇರಿಗೆ ತೆರಳಬೇಕಾಗುತ್ತದೆ. ಉಳಿದಂತೆ ಈ 30 ಸೇವೆಗಳಿಗಾಗಿ ಯಾವುದೇ ಹಂತದಲ್ಲಿ ಕಚೇರಿಗೆ ತೆರಳುವ ಅಗತ್ಯವಿಲ್ಲ. ದ.ಕ. ಜಿಲ್ಲೆಯಲ್ಲಿ ಈಗಾಗಲೇ ಈ ಸೇವೆಗಳನ್ನು ಆರಂಭಿಸಲಾಗಿದ್ದು, ಕೆಲವರಿಗೆ ತಾಂತ್ರಿಕವಾಗಿ ಕೆಲವು ಸಂಶಯ ಉಂಟಾಗಿ ಗೊಂದಲವಾಗಿದೆ. ಮುಂದಿನ ದಿನಗಳಲ್ಲಿ ಇದು ಸರಿಯಾಗಲಿದೆ.
– ಆರ್‌. ಎಂ. ವರ್ಣೇಕರ್‌,
ಪ್ರಾದೇಶಿಕ ಸಾರಿಗೆ ಅಧಿಕಾರಿ, ಮಂಗಳೂರು

ಹೈ ಕೋರ್ಟ್‌ ಸೂಚನೆ ಮೇರೆಗೆ ಉಡುಪಿ ಜಿಲ್ಲೆಯಲ್ಲಿಯೂ ಆನ್‌ಲೈನ್‌ ಸೇವೆ ಆರಂಭವಾಗಿದೆ. ಆದರೆ ಕೆಲವು ತಾಂತ್ರಿಕ ತೊಂದರೆಗಳು ಇರುವುದರಿಂದ ಶತ ಪ್ರತಿಶತ ಆರಂಭಗೊಂಡಿಲ್ಲ.
-ಗಂಗಾಧರ್‌,ಪ್ರಾದೇಶಿಕ ಸಾರಿಗೆ ಅಧಿಕಾರಿ, ಉಡುಪಿ

 

Advertisement
Advertisement

Udayavani is now on Telegram. Click here to join our channel and stay updated with the latest news.

Next