Advertisement

ಭೂದಾಹಿಗಳಿಗೆ ಕಾನೂನು ಬಿಸಿ: 37 ಎಕ್ರೆ ಕಂದಾಯ ಇಲಾಖೆ ವಶ

08:14 PM Nov 18, 2021 | Team Udayavani |

ಬೆಳ್ತಂಗಡಿ: ಅತಿಕ್ರಮಣಗೊಂಡಿದ್ದ ಕಂದಾಯ ಇಲಾಖೆಗೆ ಸೇರಿದ ಭೂಮಿ ಸ್ವಾಧೀನಪಡಿಸಿಕೊಳ್ಳಬೇಕು ಎಂಬ ಕೂಗು ಕೇಳಿಬರುತ್ತಿರುವ ಮಧ್ಯೆಯೇ ಬೆಳ್ತಂಗಡಿ ಕಂದಾಯ ಇಲಾಖೆಯು ಈಗಾಗಲೇ ಒಟ್ಟು 37.2 ಎಕ್ರೆ ಜಮೀನು ವಶಪಡಿಸಿಕೊಂಡು ಭೂದಾಹಕರಿಗೆ ಬಿಸಿಮುಟ್ಟಿಸಿದೆ.

Advertisement

ಕೋಟ್ಯಂತರ ರೂಪಾಯಿ ಬೆಳೆಬಾಳುವ ಕಂದಾಯ ಇಲಾಖೆಯ ಭೂಮಿಯನ್ನು ಅತಿಕ್ರಮಸಿರುವುದು ಕಂದಾಯ ಇಲಾಖೆಗೆ ಕಗ್ಗಂಟಾಗಿ ಪರಿಣಮಿಸಿತ್ತು. ಬೆಳ್ತಂಗಡಿ ತಹಶೀಲ್ದಾರ್‌ ಮಹೇಶ್‌ ಜೆ. ಅವರು ಕಾರ್ಯಾಚರಣೆ ನಡೆಸಿ ಭೂಮಿಯನ್ನ ಸರಕಾರದ ಸುಪರ್ದಿಗೆ ಪಡೆದಿದ್ದಾರೆ.

ದೀರ್ಘ‌ ಸಮಯದಿಂದ ಅತಿಕ್ರಮಣ:

ಶಾಲಾ ಆಟದ ಮೈದಾನ, ವಿವಿಧ ಅಭಿವೃದ್ಧಿ ಕಾಮಗಾರಿಗೆ ಮೀಸಲಿರಿಸಿದ ಭೂಮಿ ಕಳೆದ 10 ವರ್ಷಗಳಿಂದ ಅತಿಕ್ರಮಣಗೊಂಡಿರುವ ಕುರಿತು ಕಂದಾಯ ಇಲಾಖೆಗೆ ದೂರುಗಳು ಬಂದಾಗ ಅತಿಕ್ರಣಕಾರರಿಗೆ ನೋಟಿಸ್‌ ನೀಡಿದರೂ ಕ್ಯಾರೇ ಮಾಡದ ಹಿನ್ನೆಲೆಯಲ್ಲಿ ಈಗ ಸ್ವಾಧೀನ ಮಾಡುವ ಕಾರ್ಯಮಾಡಲಾಗಿದೆ.

ಎಲ್ಲೆಲ್ಲಿ ಕಾರ್ಯಚರಣೆ?:

Advertisement

ಬೆಳ್ತಂಗಡಿ ತಾಲೂಕಿನ ತಣ್ಣೀರುಪಂತ ಗ್ರಾಮದ ಸರ್ವೇ ನಂ. 113/1ರಲ್ಲಿ 10 ಎಕ್ರೆ, ಪುತ್ತಿಲ ಗ್ರಾಮದ ಸರ್ವೇ ನಂ. 47/1ರಲ್ಲಿ 3.5 ಎಕ್ರೆ, ಕಳಂಜ ಗ್ರಾಮದ ಸರ್ವೇ ನಂ. 29/2ರಲ್ಲಿ 1.1 ಎಕ್ರೆ ಹಾಗೂ ಸರ್ವೇ ನಂ. 30ರಲ್ಲಿ 4.75 ಎಕ್ರೆ, ಮಚ್ಚಿನ ಗ್ರಾಮದ ಸರ್ವೇ ನಂ. 188/2ರಲ್ಲಿ 2.77 ಎಕ್ರೆ ಹಾಗೂ ಸರ್ವೇ ನಂ. 199/1ರಲ್ಲಿ 2 ಎಕ್ರೆ, ಸವಣಾಲು ಗ್ರಾಮದ ಸರ್ವೇ ನಂ. 31 ಹಾಗೂ 81ರಲ್ಲಿ ಒಟ್ಟು 5 ಎಕ್ರೆ, ಕರಿಮಣೇಲು ಗ್ರಾಮದ ಸರ್ವೇ ನಂ. 114/2ರಲ್ಲಿ 2.30 ಎಕ್ರೆ ಭೂಮಿ ಅತಿಕ್ರಮಣ ತೆರವುಗೊಳಿಸಲಾಗಿದೆ.

-ಚೈತ್ರೇಶ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next