Advertisement

ರೈಲ್ವೆ ಇಲಾಖೆ ಪರಿಸರ ಸ್ನೇಹಿಯಾಗಿಸಲು ಒತ್ತು

01:47 PM Oct 24, 2021 | Team Udayavani |

ಚಿತ್ರದುರ್ಗ: ಪರಿಸರ ಸ್ನೇಹಿಯಾಗಿರುವರೈಲ್ವೆ ಮಾರ್ಗಗಳ ವಿದ್ಯುದೀಕರಣನಡೆಯುತ್ತಿದೆ. 2023ರ ವೇಳೆಗೆಭಾರತೀಯ ರೈಲ್ವೆಯನ್ನು ಹಸಿರುರೈಲ್ವೆಯನ್ನಾಗಿ ಪರಿವರ್ತಿಸಲಾಗುವುದು ಎಂದು ದಕ್ಷಿಣ ವರ್ತುಲದರೈಲ್ವೆ ಸುರಕ್ಷಾ ಆಯುಕ್ತ ಅಭಯಕುಮಾರ್‌ ರೈ ತಿಳಿಸಿದರು.

Advertisement

ಶನಿವಾರ ನೈಋತ್ಯ ರೈಲ್ವೆ ಮೈಸೂರುವಿಭಾಗದ ಚಿತ್ರದುರ್ಗ-ಚಿಕ್ಕಜಾಜೂರುಬ್ರಾಡ್‌ಗೆàಜ್‌ ಭಾಗದ ವಿದ್ಯುದೀಕರಣಕಾಮಗಾರಿ ತಪಾಸಣೆ ನಡೆಸಿ ಅವರು ಮಾತನಾಡಿದರು.
2014 ರಿಂದ ಪರಿಸರಮಾಲಿನ್ಯವನ್ನು ಕಡಿತಗೊಳಿಸಿ ಪರಿಸರಸ್ನೇಹಿ ರೈಲ್ವೆ ರೂಪಿಸಲಾಗುತ್ತಿದೆ. ಈನಿಟ್ಟಿನಲ್ಲಿ ಶೇ. 100 ರಷ್ಟು ವಿದ್ಯುದೀಕರಣಸಾ ಧಿಸಲು ಸಮತೋಲಿತ ಬ್ರಾಡ್‌ಗೆàಜ್‌ಮಾರ್ಗಗಳನ್ನು ವಿದ್ಯುದೀಕರಿಸುವಯೋಜನೆ ಹಾಕಿಕೊಳ್ಳಲಾಗಿದೆ ಎಂದರು.

ಚಿಕ್ಕಜಾಜೂರು ಹಾಗೂ ಬಳ್ಳಾರಿಯ184 ಕಿಮೀ ರೈಲ್ವೆ ಮಾರ್ಗದವಿದ್ಯುದ್ದೀಕರಣ ಕಾಮಗಾರಿಗೆ ರೈಲ್ವೆಇಲಾಖೆ 2017-18ರಲ್ಲಿ ಮಂಜೂರಾತಿನೀಡಿತ್ತು. ಬಳ್ಳಾರಿ, ರಾಯದುರ್ಗ,ಚಳ್ಳಕೆರೆ, ಚಿತ್ರದುರ್ಗವರೆಗಿನ ಮಾರ್ಗದವಿದ್ಯುದೀಕರಣ ಪೂರ್ಣಗೊಂಡಿದೆ.ಚಿತ್ರದುರ್ಗ-ಚಿಕ್ಕಜಾಜೂರು ನಡುವಿನಮಾರ್ಗ ಈಗ ಪೂರ್ಣಗೊಂಡಿದೆ.

ಬಳ್ಳಾರಿ ಹಾಗೂ ಚಿತ್ರದುರ್ಗಮಾರ್ಗದಲ್ಲಿ ಇನ್ನು ಮುಂದೆ ಡೀಸೆಲ್‌ಬದಲು ವಿದ್ಯುತ್‌ ಬಳಕೆಯಿಂದರೈಲು ಸಂಚರಿಸಲಿದೆ ಎಂದು ಮಾಹಿತಿನೀಡಿದರು. ಈ ವೇಳೆ ರೈಲ್ವೆ ಇಲಾಖೆಅ ಧಿಕಾರಿಗಳಾದ ಮನೋಜ್‌ಮಹಾಜನ್‌, ರಾಹುಲ್‌ ಅಗರವಾಲ್‌,ದಿನೇಶ್‌ ಜೈನ್‌ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next