ಪಿರಿಯಾಪಟ್ಟಣ: ರೈತರು ಪ್ರಸ್ತುತ ಪರಿಸ್ಥಿತಿಯಲ್ಲಿ ತೋಟಗಾರಿಕಾ ಇಲಾಖೆಯಿಂದ ದೊರೆಯುವ ಸಹಾಯ ಧನ ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ ಸಬಲರಾಗಿ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಸಿ.ಮಣಿ ಡಿ.ಟಿ.ಸ್ವಾಮಿ ಕರೆ ನೀಡಿದರು. ತಾಲೂಕಿನ ಹಿಟೆ°ಹೆಬ್ಟಾಗಿಲು ಗ್ರಾಮದಲ್ಲಿ ಸಮಗ್ರ ತೋಟಗಾರಿಕೆ ಬೆಳೆಗಳ ಬಗ್ಗೆ ಹಮ್ಮಿಕೊಂಡಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ತೋಟಗಾರಿಕೆ ಸಹಾಯಕ ನಿರ್ದೇಶಕ ಸುದರ್ಶನ್ ಮಾತನಾಡಿ, ರೈತರು ಇಲಾಖಾ ವತಿಯಿಂದ ಬಾಳೆ, ಕಲ್ಲಂಗಡಿ, ಟೊಮಟೊ, ತೆಂಗು, ತರಕಾರಿ ಬೆಳೆಗಳಿಗೆ ಸಹಾಯ ಧನವಿದೆ. ರೈತರು ಸಮಗ್ರ ಮಾಹಿತಿ ಒದಗಿಸಿ ಕೊಟ್ಟು ಸರ್ಕಾರದ ಯೋಜನೆಯ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ನಿವೃತ್ತ ಕೃಷಿ ವಿಜಾnನಿ ಹೊಂಬಯ್ಯ ಮಾತನಾಡಿ, ರೈತರು ಬಾಳೆಯಲ್ಲಿ ಕಂಡು ಬರುವ ಕೀಟ ಮತ್ತು ರೋಗಗಳ ಹತೋಟಿಗೆ ರೈತರು ಅನುಸರಿಸಬೇಕಾದ ಕ್ರಮಗಳು ಹಾಗೂ ನಿರ್ವಹಣೆಯ ಕ್ರಮಗಳು ಮತ್ತು ನಾಟಿ ಮಾಡುವ ಬಗ್ಗೆ ವಿವರಣೆ ನೀಡಿದರು. ನಾಟಿ ಮಾಡಿದ ನಂತರ ಕೀಟ ಬಾಧೆ ಕಂಡುಬಂದ ಕೂಡಲೇ ತೆಗೆದು ಕೊಳ್ಳಬಹುದಾದ ಕ್ರಮ, ಸಿಂಪಡಿಕೆಯಿಂದ ಬಾಳೆ ಬೇಸಾಯದಲ್ಲಿ ಹೆಚ್ಚಿನ ಇಳುವರಿ ಹೊಂದಬಹುದು ಎಂದರು.
ಕಾರ್ಯಕ್ರಮದಲ್ಲಿ ತಾಪಂ ಸದಸ್ಯರಾದ ಪ್ರೀತಿ ವಸಂತ, ಗ್ರಾಪಂ ಸದಸ್ಯರಾದ ಮೀನಾಕ್ಷಮ್ಮ, ಅನಿಲ್‌ಕುಮಾರ್, ಕಾಂತರಾಜು, ವಕೀಲ ಕೆ.ಶಂಕರ್, ತೋಟಗಾರಿಕೆ ಸಹಾಯಕ ಅಧಿಕಾರಿ ಮಲ್ಲಿಕಾರ್ಜುನ್, ತೋಟಗಾರಿಕೆ ಸಹಾಯಕ ಶ್ರೀಧರ್, ಸಿಬ್ಬಂದಿಗಳಾದ ಚೈತ್ರ, ಮಲ್ಲೇಶ್, ಹರೀಶ್, ಪಿಡಿಒ ಶ್ರೀನಿವಾಸ್, ಗಣೇಶ್ ಆಯಿತನಹಳ್ಳಿ ಹಾಗೂ ರೈತ ಬಾಂಧವರು ಹಾಜರಿದ್ದರು.