Advertisement
1978ರಲ್ಲಿ ಆರಂಭವಾದ ಶಾಲೆಯ ಉಳಿವಿಗೆ ಮೊದಲಿನಿಂದಲೂ ಹೋರಾ ಡುತ್ತಿದ್ದ ಗ್ರಾಮಸ್ಥರು ಈ ಭಾರಿ ಮನೆ ಮನೆಗೆ ಭೇಟಿ ನೀಡಿ ಮಕ್ಕಳನ್ನು ಶಾಲೆಗೆ ಸೇರಿಸುವಂತೆ ಪ್ರೇರೆಪಿಸುವ ಕೆಲಸ ಮಾಡುತ್ತಿದ್ದಾರೆ. ಅಲ್ಲದೆ 11 ವಿದ್ಯಾರ್ಥಿಗಳು ಶಾಲೆಗೆ ಸೇರಲು ತಯಾರಿದ್ದು ಈ ಬಗ್ಗೆ ಕ್ಷೇತ್ರ ಶಿಕ್ಷಣಾಧಿಗಳಿಗೆ ಮನವಿ ಸಲ್ಲಿಸಿದ್ದರು. ಪತ್ರಿಕೆ ಈ ಬಗ್ಗೆ ಸಚಿತ್ರ ವರದಿ ಪ್ರಕಟಿಸಿದ ಬೆನ್ನಲ್ಲೇ ಕಾರ್ಕಳ ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ್ ಅವರು ಸ್ಥಳಕ್ಕೆ ಭೇàಟಿ ನೀಡಿ ಪರಶೀಲಿಸಿದ್ದು 10 ವಿದ್ಯಾರ್ಥಿಗಳು ಶಾಲೆ ಸೇರಲು ಮುಂದೆ ಬಂದಲ್ಲಿ ಶಾಲೆಯನ್ನು ತೆರೆಯುವ ಭರವಸೆ ನೀಡಿದ್ದರು.
ಶಾಲೆ ಮುಚ್ಚಲು ಇಲ್ಲಿ ಇದ್ದ ಶಿಕ್ಷಕಿಯೇ ಕಾರಣವೆಂಬ ಆರೋಪಗಳ ಬಗ್ಗೆ ತನಿಖೆ ಮಾಡಿದ್ದು ಇದು ಸತ್ಯಕ್ಕೆ ದೂರವಾದ ಸಂಗತಿ. ಮಕ್ಕಳ ಸಂಖ್ಯೆ 10ಕ್ಕಿಂತ ಕಡಿಮೆ ಯಾದಾಗ ಶಾಲೆ ಮುಂದುವರಿಸಲು ಕಷ್ಟ. ಈ ಕಾರಣದಿಂದಲೇ ಶಾಲೆ ಮುಚ್ಚಿರುವುದಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ತಿಳಿಸಿದ್ದಾರೆ.
Related Articles
ತೀರ ಗ್ರಾಮೀಣ ಪ್ರದೇಶವಾದ ಮೇಗದ್ದೆಗೆ ಸರಕಾರಿ ಶಾಲೆಯ ಅಗತ್ಯವಿದೆ. ಈ ಭಾಗದಲ್ಲಿ ರಸ್ತೆ ಹಾಗೂ ಬಸ್ಸಿನ ಸೌಕರ್ಯವಿಲ್ಲ. ಹೀಗಿರುವಾಗ ಶಾಲೆ ಮುಚ್ಚಿರುವುದು ಬಡವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ಮನೆಮನೆಗೆ ತೆರಳಿ ಮನವಿ ಮಾಡಿದ ಪರಿಣಾಮ 11 ವಿದ್ಯಾರ್ಥಿಗಳು ಶಾಲೆಗೆ ಸೇರಲು ತಯಾರಿಗಿದ್ದಾರೆ. ಕೂಡಲೇ ಶಿಕ್ಷಣ ಇಲಾಖೆ ಶಾಲೆಯನ್ನು ತೆರೆಯಬೇಕು. ಇಲ್ಲದಿದ್ದಲ್ಲಿ ಗ್ರಾಮಸ್ಥರು ಪ್ರತಿಭಟನೆಗೆ ಸಿದ್ಧರಾಗಿದ್ದಾರೆ.
-ರಮೇಶ್ ಮೇಗದ್ದೆ, ಸ್ಥಳೀಯರು
Advertisement
ಗ್ರಾಮಸ್ಥರು ಸಹಕರಿಸಿಈಗಾಗಲೇ ಎರಡು ಬಾರಿ ಸ್ಥಳಕ್ಕೆ ಭೇàಟಿ ನೀಡಿದ್ದೇನೆ. ತೀರ ಗ್ರಾಮೀಣ ಹಾಗೂ ವಲಯ ವನ್ಯಜೀವಿ ವಿಭಾಗವಾದ್ದರಿಂದ ಇಲ್ಲಿ ಶಿಕ್ಷಕಿಯರು ಕರ್ತವ್ಯ ನಿರ್ವಹಿಸುವುದು ಕಷ್ಟ. ಈ ಕಾರಣದಿಂದ ಇಲ್ಲಿ ಶಿಕ್ಷಕರ ನೇಮಕ್ಕಾಗಿ ಇಲಾಖೆ ವ್ಯವಸ್ಥೆ ಮಾಡುತ್ತಿದ್ದು 4ದಿನದ ಒಳಗೆ ಸಮಸ್ಯೆ ಇತ್ಯರ್ಥವಾಗಲಿದೆ. ಈಗಾಗಲೆ ಗ್ರಾಮಸ್ಥರು ವಿದ್ಯಾರ್ಥಿಗಳನ್ನು ಶಾಲೆಗೆ ಸೇರಿಸಲು ತಯಾರಿದ್ದಾರೆ. ಮುಚ್ಚಿದ ಶಾಲೆಯನ್ನು ಪುನಃ ತೆರೆಯಲು ಕೆಲವು ಪ್ರಕ್ರಿಯೆಗಳು ಇರುವ ಕಾರಣ ವಿಳಂಬವಾಗುತ್ತಿದ್ದು ಗ್ರಾಮಸ್ಥರು ಸಹಕರಿಸಬೇಕು.
-ಶಶಿಧರ್, ಕ್ಷೇತ್ರ ಶಿಕ್ಷಣಾಧಿಕಾರಿ, ಕಾರ್ಕಳ