Advertisement

ಮಕ್ಕಳಿಗೆ ಲಸಿಕೆ ನೀಡಲು ಶಿಕ್ಷಣ ಇಲಾಖೆ ಸಿದ್ಧತೆ

10:25 PM Dec 28, 2021 | Team Udayavani |

ಬೆಂಗಳೂರು: ರಾಜ್ಯದ ಪ್ರೌಢಶಾಲೆ ಹಾಗೂ ಪಿಯು ಕಾಲೇಜುಗಳಲ್ಲಿ ಜ. 3ರಿಂದ 15 ವರ್ಷ ತುಂಬಿದ ಮಕ್ಕಳಿಗೆ ಕೊರೊನಾ ಲಸಿಕೆ ನೀಡಲಾಗುತ್ತಿದೆ.

Advertisement

ಆರೋಗ್ಯ ಇಲಾಖೆ ಸಿಬಂದಿಗೆ ಇಲಾಖೆ ಅಧಿಕಾರಿಗಳು ಸಹಕಾರ ನೀಡುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಸೂಚನೆ ನೀಡಿದೆ.

ರಾಜ್ಯಾದ್ಯಂತ 2007ರ ಜ. 1ಕ್ಕಿಂತ ಮೊದಲು ಜನಿಸಿರುವ ಮಕ್ಕಳಿಗೆ ಪ್ರೌಢಶಾಲೆ ಹಾಗೂ ಪಿಯು ಕಾಲೇಜುಗಳಲ್ಲಿಯೇ ಆರೋಗ್ಯ ಇಲಾಖೆ ಕ್ಯಾಂಪ್‌ ನಡೆಸಿ ಕೊವಾಕ್ಸಿನ್‌ ಲಸಿಕೆ ನೀಡಲಿದೆ. 28 ದಿನಗಳ ಅನಂತರ ಎರಡನೇ ಡೋಸ್‌ ನೀಡಲಾಗುತ್ತದೆ.

ಶಿಕ್ಷಣ ಇಲಾಖೆ ಜಿಲ್ಲಾ ಉಪ ನಿರ್ದೇಶಕರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ನಿರ್ವಹಣೆ ಮಾಡುವಂತೆ ನಿರ್ದೇಶನ ನೀಡಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಡಾ| ಆರ್‌. ವಿಶಾಲ್‌ ತಿಳಿಸಿದರು.

10ನೇ ತರಗತಿ ವ್ಯಾಸಂಗ ಮಾಡಿ ಶಾಲೆಯಿಂದ ಹೊರಗುಳಿದಿರುವ ಮಕ್ಕಳಿಗೆ ಆಯಾ ಗ್ರಾಮ ಪಂಚಾಯತ್‌ ಅಥವಾ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಲಸಿಕಾ ಕೇಂದ್ರಗಳನ್ನು ತೆರೆದು ಲಸಿಕೆ ನೀಡು ವಂತೆ ತಿಳಿಸಲಾಗಿದೆ. ಈ ಸಂಬಂಧ ಪಂಚಾಯತ್‌ ಅಭಿವೃದ್ಧಿ ಅಧಿಕಾರಿಗಳು ಹಾಗೂ ಪಂಚಾಯತ್‌ ಅಧ್ಯ ಕ್ಷರು, ಸದಸ್ಯರು ಕ್ರಮ ಕೈಗೊಳ್ಳುವಂತೆ ತಿಳಿಸಲಾಗಿದೆ ಎಂದರು.

Advertisement

ಇದನ್ನೂ ಓದಿ:ಅಮೆಜಾನ್‌, ಫ್ಲಿಪ್‌ಕಾರ್ಟ್‌ ನಿರ್ಬಂಧಕ್ಕೆ ಒತ್ತಾಯ

ಕೊವ್ಯಾಕ್ಸಿನ್‌: 4 ಗಂಟೆಯೊಳಗೆ ಉಪಯೋಗಿಸಬೇಕು
ಬೆಂಗಳೂರು: ರಾಜ್ಯದಲ್ಲಿ ವಿತರಿಸ ಲಾಗುತ್ತಿರುವ ಕೊವ್ಯಾಕ್ಸಿನ್‌ ಲಸಿಕೆಯನ್ನು ವಯಲ್‌ ತೆರೆದ 4 ಗಂಟೆಯೊಳಗೆ ಉಪಯೋಗಿಸಬೇಕು.
ಕೋವಿಡ್‌ -19 ಲಸಿಕೆ ವಯಲ್‌ ಮೇಲೆ ವಿವಿಎಂ ಇಲ್ಲದ ಹಿನ್ನೆಲೆಯಲ್ಲಿ “ತೆರೆದ ಲಸಿಕೆ ವಯಲ್‌ ನೀತಿ’ ಅನ್ವಯವಾಗುವುದಿಲ್ಲ ಎಂದು ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕರು ತಿಳಿಸಿದ್ದಾರೆ.

ರಾಜ್ಯದಲ್ಲಿ 8.50 ಕೋಟಿ
ಲಸಿಕೆ ವಿತರಣೆ
ಬೆಂಗಳೂರು: ರಾಜ್ಯದಲ್ಲಿ ಮಂಗಳ ವಾರದ ವರೆಗೆ 8.50 ಕೋಟಿ ಲಸಿಕೆ ವಿತರಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ. ಒಟ್ಟು 8.50 ಲಸಿಕೆ ವಿತರಣೆ ಪೈಕಿ 4.74 ಕೋಟಿ ಮಂದಿ ಮೊದಲ ಹಾಗೂ 3.76 ಕೋಟಿ ಮಂದಿ ಎರಡನೇ ಡೋಸ್‌ ಲಸಿಕೆ ಪಡೆದುಕೊಂಡಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

ಮಕ್ಕಳಿಗೆ ಕೊವ್ಯಾಕ್ಸಿನ್‌ ಪೂರೈಕೆಗೆ ಮನವಿ: ಡಾ| ಕೆ. ಸುಧಾಕರ್‌
ಬೆಂಗಳೂರು: ಕೇಂದ್ರದ ಸೂಚನೆಯಂತೆ ರಾಜ್ಯದಲ್ಲಿ ಜ. 3ರಿಂದ 15-18 ವರ್ಷದೊಳಗಿನ ಮಕ್ಕಳಿಗೆ ಕೊವ್ಯಾಕ್ಸಿನ್‌ ನೀಡಲಾಗುತ್ತದೆ. ಬೇಡಿಕೆಗೆ ತಕ್ಕಷ್ಟು ಲಸಿಕೆ ಲಭ್ಯವಿರದ ಹಿನ್ನಲೆಯಲ್ಲಿ ಕೊವ್ಯಾಕ್ಸಿನ್‌ ಲಸಿಕೆ ಪೂರೈಸುವಂತೆ ಕೇಂದ್ರಕ್ಕೆ ಬೇಡಿಕೆ ಇಡಲಾಗುತ್ತದೆ ಎಂದು ಆರೋಗ್ಯ ಸಚಿವ ಡಾ| ಕೆ. ಸುಧಾರ್‌ ತಿಳಿಸಿದರು.
ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಜ್ಯದಲ್ಲಿ 43 ಲಕ್ಷ ಅರ್ಹ ವಿದ್ಯಾರ್ಥಿ ಫ‌ಲಾನುಭವಿಗಳು ಇದ್ದಾರೆ. ಅಗತ್ಯವಿರುವ ಕೊವ್ಯಾಕ್ಸಿನ್‌ ಕೇಂದ್ರದಿಂದ ಸರಾಗವಾಗಿ ಪೂರೈಕೆಯಾಗುವ ವಿಶ್ವಾಸವಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next