ಬೆಂಗಳೂರು: ಸರಕಾರಿ ಶಾಲಾ ಮಕ್ಕಳಿಗೆ 2021-22ನೇ ಸಾಲಿನಲ್ಲಿ ನೀಡ ಬೇಕಿದ್ದ ಎರಡನೇ ಜೊತೆಯ ಉಚಿತ ಸಮವಸ್ತ್ರಗಳನ್ನು ಪ್ರಸಕ್ತ ಸಾಲಿನಲ್ಲಿ ಸರಬರಾಜು ಮಾಡಲು ಶಿಕ್ಷಣ ಇಲಾಖೆಯು ಬಿಇಒಗಳಿಗೆ 40.80 ಲಕ್ಷ ರೂ. ಬಿಡುಗಡೆ ಮಾಡಿದೆ.
ಎರಡನೇ ಜೊತೆ ಸಮವಸ್ತ್ರವನ್ನು ಕೋವಿಡ್ ಹಿನ್ನೆಲೆಯಲ್ಲಿ ನೀಡಲಾಗಿರಲಿಲ್ಲ. ಹಾಗಾಗಿ ಆ ಸಮವಸ್ತ್ರಗಳನ್ನು ಸರಕಾರ ಈಗ ತಲುಪಿಸುತ್ತಿದೆ.
ಪ್ರಸ್ತುತ ಸರಬರಾಜು ಕಂಪೆನಿಯಿಂದ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ತಲುಪಿರುವ ಸಮವಸ್ತ್ರಗಳನ್ನು ಶಾಲೆಗಳಿಗೆ ತಲುಪಿಸಲು ಪ್ರತೀ ಬಿಇಒ ಕ್ಷೇತ್ರಕ್ಕೆ 20 ಸಾವಿರ ರೂ.ನಂತೆ ಒಟ್ಟು 204 ಕ್ಷೇತ್ರಗಳಿಗೆ ಒಟ್ಟು 40.80 ಲಕ್ಷ ರೂ. ಅನುದಾನ ಬಿಡುಗಡೆ ಮಾಡಿದೆ. ಆದಷ್ಟು ಬೇಗ ಶಾಲೆಗಳಿಗೆ ವಿತರಿಸಿ ವೆಚ್ಚದ ಮಾಹಿತಿಯನ್ನು ಇಲಾಖೆಗೆ ನೀಡಬೇಕೆಂದು ಆಯುಕ್ತರು ಸೂಚಿಸಿದ್ದಾರೆ.