Advertisement

ರೈತರ ಆತ್ಮಹತ್ಯೆ ಪ್ರಕರಣದ ಬಗ್ಗೆ ಸ್ಪಷ್ಟನೆ ನೀಡಿದ ಕೃಷಿ ಇಲಾಖೆ

12:00 PM Sep 03, 2022 | Team Udayavani |

ಬೆಂಗಳೂರು: ರೈತರ ಆತ್ಮಹತ್ಯೆ ಪ್ರಕರಣದಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ ಎಂಬ ಎನ್ ಸಿಆರ್ ಬಿ ವರದಿ ರಾಜ್ಯದಲ್ಲಿ ವಿವಾದ ಎಬ್ಬಿಸಿರುವ ಬೆನ್ನಲ್ಲೇ ಸ್ಪಷ್ಟನೆ ನೀಡಿರುವ ಕೃಷಿ ಇಲಾಖೆ 2018 ರಿಂದ 2021ರ ಅವಧಿಯಲ್ಲಿ ಆತ್ಮಹತ್ಯೆ ಪ್ರಕರಣ ಇಳಿಮುಖವಾಗಿತ್ತು ಎಂದು ಹೇಳಿದೆ.

Advertisement

ರಾಜ್ಯದಲ್ಲಿ 2014 ರಿಂದ 2017 ರ ಅವಧಿಯಲ್ಲಿ ರೈತರ ಆತ್ಮಹತ್ಯೆ ಪ್ರಕರಣ ಏರುಗತಿಯಲ್ಲಿತ್ತು. ಆದರೆ ಎನ್ ಸಿಆರ್ ಬಿ ವರದಿಯಲ್ಲಿ ಕರ್ನಾಟಕದಲ್ಲಿ 2020- 21ರಲ್ಲಿ ನಡೆದ ದೇಶದ ಒಟ್ಟು ರೈತರ ಆತ್ಮಹತ್ಯೆ ಪ್ರಕರಣದಲ್ಲಿ ಕರ್ನಾಟಕದ ಪಾಲು ಶೇ.19.9 ರಷ್ಟಿದೆ. ಕರ್ನಾಟಕ 2 ನೇ ಸ್ಥಾನದಲ್ಲಿದೆ ಎಂದು ಉಲ್ಲೇಖಿಸಿತ್ತು.

ಈ ಅವಧಿಯಲ್ಲಿ ದೇಶದಲ್ಲಿ 10,881 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ಶೇ.19.9 ಅಂದರೆ 2,165 ರೈತರು ಕರ್ನಾಟಕದಲ್ಲಿ ಮೃತಪಟ್ಟಿರಬೇಕು. ಆದರೆ ಈ ಲೆಕ್ಕಚಾರ ಸುಳ್ಳು. ಏಕೆಂದರೆ ರಾಜ್ಯದಲ್ಲಿ 202-21 ರ ಅವಧಿಯಲ್ಲಿ 719 ರೈತರು ಮಾತ್ರ ಸಾವಿಗೆ ಶರಣಾಗಿದ್ದಾರೆ. 2022-23 ನೇ ಸಾಲಿನಲ್ಲಿ ಈವರೆಗೆ 60 ರೈತರು ಮೃತಪಟ್ಟಿದ್ದಾರೆ ಎಂದು ಕೃಷಿ ಇಲಾಖೆ ಸ್ಪಷ್ಟನೆ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next