Advertisement

ದೇವಧರ್‌ ಟ್ರೋಫಿ ಕ್ರಿಕೆಟ್‌ ; ಇಂಡಿಯಾ ಬ್ಲೂ  ತಂಡಕ್ಕೆ ರೋಹಿತ್‌ ನಾಯಕ

03:50 AM Mar 22, 2017 | |

ಹೊಸದಿಲ್ಲಿ: ಗಾಯಾಳಾಗಿ ಭಾರತ ತಂಡದಿಂದ ಬೇರ್ಪಟ್ಟಿರುವ ರೋಹಿತ್‌ ಶರ್ಮ ಅವರ ಫಾರ್ಮ್ ಪ್ರದರ್ಶನಕ್ಕೆ ಮತ್ತೂಂದು ವೇದಿಕೆ ಸಿದ್ಧಗೊಂಡಿದೆ. ದೇವಧರ್‌ ಟ್ರೋಫಿ ಪಂದ್ಯಾವಳಿಗಾಗಿ ಮಂಗಳವಾರ ಪ್ರಕಟಿಸಲಾದ ತಂಡದಲ್ಲಿ ಅವರನ್ನು “ಇಂಡಿಯಾ ಬ್ಲೂ’ ತಂಡದ ನಾಯಕನನ್ನಾಗಿ ನೇಮಿಸಲಾಗಿದೆ.

Advertisement

ರೋಹಿತ್‌ ಶರ್ಮ ನಾಯಕತ್ವದ “ಇಂಡಿಯಾ ಬ್ಲೂ’ ತಂಡ ವಿಜಯ್‌ ಹಜಾರೆ ಟ್ರೋಫಿ ಚಾಂಪಿಯನ್‌ ತಮಿಳುನಾಡು ಮತ್ತು “ಇಂಡಿಯಾ ರೆಡ್‌’ ತಂಡವನ್ನು ಎದುರಿಸಲಿದೆ. “ಇಂಡಿಯಾ ರೆಡ್‌’ ತಂಡವನ್ನು ವಿಕೆಟ್‌ ಕೀಪರ್‌ ಬ್ಯಾಟ್ಸ್‌
ಮನ್‌ ಪಾರ್ಥಿವ್‌ ಪಟೇಲ್‌ ಮುನ್ನಡೆಸಲಿದ್ದಾರೆ. ಪಾರ್ಥಿವ್‌ ಸಾರಥ್ಯದಲ್ಲೇ ಈ ವರ್ಷ ಗುಜರಾತ್‌ ರಣಜಿ ಚಾಂಪಿಯನ್‌ ಆಗಿ ಮೂಡಿಬಂದಿತ್ತು.

ಕಳೆದ ಅಕ್ಟೋಬರ್‌ನಲ್ಲಿ ನಡೆದ ನ್ಯೂಜಿಲ್ಯಾಂಡ್‌ ಎದುರಿನ ತವರಿನ ಸರಣಿ ವೇಳೆ ರೋಹಿತ್‌ ಶರ್ಮ ಗಾಯಾಳಾಗಿ ಭಾರತ ತಂಡದಿಂದ ದೂರಾಗಿದ್ದರು. ಸೋಮವಾರವಷ್ಟೇ ಮುಗಿದ ವಿಜಯ್‌ ಹಜಾರೆ ಟ್ರೋಫಿ ಪಂದ್ಯಾವಳಿಯಲ್ಲಿ ಮುಂಬಯಿ ಪರ 2 ಪಂದ್ಯಗಳನ್ನಾಡುವ ಮೂಲಕ ಸ್ಪರ್ಧಾತ್ಮಕ ಕ್ರಿಕೆಟಿಗೆ ವಾಪಸಾಗಿದ್ದರು. ಆದರೆ ಇದರಲ್ಲಿ ಗಳಿಸಿದ್ದು ಕೇವಲ 16 ಮತ್ತು 4 ರನ್‌ ಮಾತ್ರ.
ರೋಹಿತ್‌ ಶರ್ಮ ಪಾಲಿಗೆ ದೇವಧರ್‌ ಟ್ರೋಫಿ ಟೂರ್ನಮೆಂಟ್‌ ಮುಂಬರುವ ಐಪಿಎಲ್‌ಗೆ ಉತ್ತಮ ವೇದಿಕೆಯಾಗಬೇಕಿದೆ.

ಕರ್ನಾಟಕದ ಮನೀಷ್‌ ಪಾಂಡೆ, ಮಾಯಾಂಕ್‌ ಅಗರ್ವಾಲ್‌, ಪ್ರಸಿದ್ಧ್ ಕೃಷ್ಣ, ಟೀಮ್‌ ಇಂಡಿಯಾದಿಂದ ದೂರಾಗಿರುವ ಶಿಖರ್‌ ಧವನ್‌ ಮೊದಲಾದವರು ಈ ತಂಡಗಳಲ್ಲಿ ಸ್ಥಾನ ಪಡೆದಿದ್ದಾರೆ.

ಇಂಡಿಯಾ ಬ್ಲೂ ತಂಡ: ರೋಹಿತ್‌ ಶರ್ಮ (ನಾಯಕ), ಮನ್‌ದೀಪ್‌ ಸಿಂಗ್‌, ಶ್ರೇಯಸ್‌ ಅಯ್ಯರ್‌, ಅಂಬಾಟಿ ರಾಯುಡು, ಮನೋಜ್‌ ತಿವಾರಿ, ರಿಷಬ್‌ ಪಂತ್‌, ದೀಪಕ್‌ ಹೂಡಾ, ಹರ್ಭಜನ್‌ ಸಿಂಗ್‌, ಕೃಣಾಲ್‌ ಪಾಂಡ್ಯ, ಶಾಬಾಜ್‌ ನದೀಂ, ಸಿದ್ಧಾರ್ಥ ಕೌಲ್‌, ಶಾದೂìಲ್‌ ಠಾಕೂರ್‌, ಪ್ರಸಿದ್ಧ್ ಕೃಷ್ಣ, ಪಂಕಜ್‌ ರಾವ್‌.

Advertisement

ಇಂಡಿಯಾ ರೆಡ್‌ ತಂಡ: ಪಾರ್ಥಿವ್‌ ಪಟೇಲ್‌ (ನಾಯಕ), ಶಿಖರ್‌ ಧವನ್‌, ಮನೀಷ್‌ ಪಾಂಡೆ, ಮಾಯಾಂಕ್‌ ಅಗರ್ವಾಲ್‌, ಕೇದಾರ್‌ ಜಾಧವ್‌, ಇಶಾಂಕ್‌ ಜಗ್ಗಿ, ಗುರುಕೀರತ್‌ ಮಾನ್‌, ಅಕ್ಷರ್‌ ಪಟೇಲ್‌, ಅಕ್ಷಯ್‌ ಕರ್ಣೆವಾರ್‌, ಅಶೋಕ್‌ ದಿಂಡ, ಕುಲವಂತ್‌ ಖೆಜೊಲಿಯ, ಧವಳ್‌ ಕುಲಕರ್ಣಿ, ಗೋವಿಂದ ಪೋದ್ದರ್‌.

Advertisement

Udayavani is now on Telegram. Click here to join our channel and stay updated with the latest news.

Next