Advertisement

ಡೆನಿಸ್‌ ಮುಕ್ವೆಗೆ, ನಾದಿಯಾಗೆ 2018ರ ನೊಬೆಲ್‌ ಶಾಂತಿ ಪ್ರಶಸ್ತಿ

03:51 PM Oct 05, 2018 | udayavani editorial |

ಸ್ಟಾಕ್‌ಹೋಮ್‌ : 2018ರ ನೊಬೆಲ್‌ ಶಾಂತಿ ಪುರಸ್ಕಾರವನ್ನು ಡೆನಿಸ್‌ ಮುಕ್ವೆಗೆ  ಮತ್ತು ನಾದಿಯಾ ಮುರಾದ್‌ ಅವರಿಗೆ ಜಂಟಿಯಾಗಿ ನೀಡಲಾಗಿದೆ.

Advertisement

ಯುದ್ಧ ಮತ್ತು ಸಶಸ್ತ್ರ ಸಂಘರ್ಷದಲ್ಲಿ ಲೈಂಗಿಕ ಹಿಂಸೆಯನ್ನು ಒಂದು ಅಸ್ತ್ರವಾಗಿ ಬಳಸುವುದರ ವಿರುದ್ಧ ಇವರಿಬ್ಬರೂ ತಮ್ಮ ಕಾರ್ಯ ಕ್ಷೇತ್ರಗಳಲ್ಲಿ ಅಸಾಮಾನ್ಯ ಸೇವೆ ಗೈದಿರುವುದನ್ನು ಅನುಲಕ್ಷಿಸಿ ಇವರಿಗೆ ಜಂಟಿಯಾಗಿ ನೊಬೆಲ್‌ ಶಾಂತಿ ಪುರಸ್ಕಾರ ನೀಡಲಾಗಿದೆ ಎಂದು ನೊಬೆಲ್‌ ಸಮಿತಿ ಹೇಳಿದೆ. 

ಕಾಂಗ್ಲೋ ಗೈನೆಕಾಲಜಿಸ್ಟ್‌ ಆಗಿರುವ ಮುಕ್ವೆಗೆ ಅವರು ಲೈಂಗಿಕ ಹಿಂಸೆಗೆ ಬಲಿಯಾಗಿ ಗುಹ್ಯ ರೋಗಗಳಿಗೆ ಗುರಿಯಾದ ಸಹಸ್ರಾರು ಮಹಿಳೆಯರಿಗೆ ಚಿಕಿತ್ಸೆ ನೀಡಿದವರಾಗಿದ್ದಾರೆ. 

ನಾದಿಯಾ ಮುರಾದ್‌ ಅವರು ಯುದ್ಧ ಮತ್ತು ಸಶಸ್ತ್ರ ಸಂಘರ್ಷದಲ್ಲಿ ಲೈಂಗಿಕ ಹಿಂಸೆಗೆ ಬಲಿಯಾದ ಮಹಿಳೆಯರಿಗೆ ಸೇವೆ ನೀಡಿದವರಾಗಿದ್ದಾರೆ. ಈಕೆ ಇರಾಕ್‌ನ ಯಾಜಿದಿ ಸಮುದಾಯಕ್ಕೆ ಸೇರಿದವರು. 

Advertisement

Udayavani is now on Telegram. Click here to join our channel and stay updated with the latest news.

Next