ಹೊಸದಿಲ್ಲಿ: ಹಿಮಾಚಲ ಪ್ರದೇಶದಲ್ಲಿ ಮಳೆ ಮತ್ತೂಮ್ಮೆ ಜನರ ನಿದ್ದೆಗೆಡಿಸಿದೆ. ಸೋಮ ವಾರ ಮುಂಜಾನೆ ಸುರಿದ ಧಾರಾಕಾರ ಮಳೆ ಯಿಂದ ದಿಢೀರ್ ಪ್ರವಾಹ, ಭೂಕುಸಿತಗಳು ಉಂಟಾಗಿದೆ.
ಕುಲ್ಲು ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬರು ಮೃತ ಪಟ್ಟು, ಮೂವರು ಗಾಯಗೊಂಡಿದ್ದಾರೆ. ಹಲ ವಾರು ಪ್ರದೇಶಗಳಲ್ಲಿ ಭೂಕುಸಿತ ಉಂಟಾಗಿವೆ. 720 ರಸ್ತೆಗಳಲ್ಲಿ ಸಂಚಾರ ಸ್ಥಗಿತ ಗೊಂಡಿದೆ.
ದಿಢೀರ್ ಪ್ರವಾಹದಿಂದಾಗಿ 400 ಕುರಿಗಳು, 8 ವಾಹನಗಳು ಕೊಚ್ಚಿಹೋಗಿವೆ. ಜು.21 ರವರೆಗೂ ಭಾರೀ ಮಳೆ ಮುಂದುವರಿ ಯ ಲಿದ್ದು, ರಾಜ್ಯಾದ್ಯಂತ ಎಲ್ಲೋ ಅಲರ್ಟ್ ಘೋಷಿಸಲಾಗಿದೆ.
ಇದೇ ವೇಳೆ ಮಹಾರಾಷ್ಟ್ರದ ಮುಂಬ ಯಿಯಲ್ಲಿ ಸೋಮವಾರ ಭಾರೀ ಮಳೆಯಾ ಗಿದ್ದು, ಜನ ಜೀವನ ಅಸ್ತವ್ಯಸ್ತವಾಗಿದೆ. ಮಧ್ಯ ಪ್ರದೇಶದಲ್ಲಿ ಧಾರಾಕಾರ ಮಳೆಯಿಂದಾಗಿ ಜಲಪಾತ ವೊಂದರಲ್ಲಿ ನೀರಿನ ಹರಿವು ಹೆಚ್ಚಳ ವಾದ ಕಾರಣ ಅನೇಕ ಪ್ರವಾಸಿಗರು ಸಿಲುಕಿಕೊಂಡಿ ದ್ದರು. ಈ ಪೈಕಿ ಬಾಲಕನೊಬ್ಬ ನೀರಿನಲ್ಲಿ ಕೊಚ್ಚಿಹೋಗಿದ್ದಾನೆ. ಪ್ರವಾಸಿಗರನ್ನು ಸ್ಥಳೀಯಾ ಡಳಿತ ರಕ್ಷಿಸಿದೆ. ಇದೇ ವೇಳೆ, ಆಂಧ್ರ ಪ್ರದೇಶದಲ್ಲಿ ಮುಂದಿನ 5 ದಿನಗಳ ಕಾಲ ವಿಪ ರೀತ ಮಳೆ ಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಹರಿಯಾ ಣದಲ್ಲಿ ಮಳೆ ಸಂಬಂಧಿ ಘಟನೆ ಗಳಿಂದ ಸೋಮವಾರ ನಾಲ್ವರು ಮೃತಪಟ್ಟಿದ್ದು, ಪ್ರಸಕ್ತ ಮುಂಗಾರು ವಿನಲ್ಲಿ ಒಟ್ಟಾರೆ ಸಾವಿನ ಸಂಖ್ಯೆ 34ಕ್ಕೇರಿದೆ.
ದಿಲ್ಲಿಯಲ್ಲಿ 26 ಮಂದಿಗೆ ಡೆಂಗ್ಯೂ: ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಮಳೆ ಮುಂದು ವರಿದಿದೆ. ಯಮುನಾ ನದಿಯ ನೀರಿನ ಮಟ್ಟ ಸೋಮವಾರ 205.92 ಮೀಟರ್‌ಗೆ ಇಳಿದಿದ್ದು, ಇನ್ನೂ ಅಪಾಯದ ಮಟ್ಟದಲ್ಲೇ ಹರಿ ಯುತ್ತಿದೆ. ಅಲ್ಲದೇ ಮಂಗಳವಾರ ಸಾಧಾ ರಣ ಮಳೆಯಾಗಲಿದೆ ಎಂದು ಹವಾ ಮಾನ ಇಲಾಖೆ ಹೇಳಿದೆ. ಈ ನಡುವೆಯೇ ದಿಲ್ಲಿಗೆ ಮತ್ತೂಂದು ಭೀತಿ ಆರಂಭವಾಗಿದ್ದು, ಜನರು ಪ್ರವಾಹದ ಸಂಕಷ್ಟದಲ್ಲಿರುವಂತೆಯೇ ಡೆಂಗ್ಯೂ ಪ್ರಕರಣಗಳ ಸಂಖ್ಯೆ ದಿಢೀರ್ ಹೆಚ್ಚಳ ವಾಗಿದೆ. ಸೋಮವಾರ 26 ಮಂದಿಗೆ ಡೆಂಗ್ಯೂ ದೃಢಪಟ್ಟಿರುವುದು ಆತಂಕಕ್ಕೆ ಕಾರಣವಾಗಿದೆ.