Advertisement

ಸುಳ್ಯದಲ್ಲಿ ಡೆಂಗ್ಯೂ ಜ್ವರ ಆತಂಕ; ಆರೋಗ್ಯ ಇಲಾಖೆ ನಿರಾಕರಣೆ

11:11 PM Apr 19, 2020 | Sriram |

ಸುಳ್ಯ: ಈ ಬಾರಿ ಕೋವಿಡ್ 19 ಭೀತಿಯ ಜತೆಗೆ ಮಳೆಗಾಲದ ಆರಂಭದಲ್ಲಿ ಕಾಡುವ ಡೆಂಗ್ಯೂ ಸಾಂಕ್ರಾಮಿಕ ರೋಗದ ಭೀತಿ ಆವರಿಸಿದ್ದು, ಕೆಲವರಲ್ಲಿ ಕಾಣಿಸಿಕೊಂಡ ಜ್ವರಬಾಧೆ ಈ ಆತಂಕಕ್ಕೆ ಕಾರಣವೆನಿಸಿದೆ. ಆದರೆ ಇದು ಡೆಂಗ್ಯೂ ಜ್ವರ ಅನ್ನುವುದನ್ನು ಆರೋಗ್ಯ ಇಲಾಖೆ ನಿರಾಕರಿಸಿದೆ.

Advertisement

ತಾಲೂಕಿನಲ್ಲಿ ವಾರದ ಹಿಂದೆ ಹತ್ತಕ್ಕೂ ಅಧಿಕ ಜ್ವರ ಪ್ರಕರಣಗಳು ಪತ್ತೆಯಾಗಿವೆ ಎಂಬ ವರದಿ ಇದ್ದರೂ ಇದು ಡೆಂಗ್ಯೂ ಎಂದು ಖಚಿತವಾಗಿಲ್ಲ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಡೆಂಗ್ಯೂ ಜ್ವರ ಎಂದು ಪರಿಗಣಿಸಬೇಕಾದರೆ ಜಿಲ್ಲಾ ಆಸ್ಪತ್ರೆಯಲ್ಲಿನ ಲ್ಯಾಬ್‌ ವರದಿ ಬಂದ ಬಳಿಕವೇ ಅದು ಪಾಸಿಟಿವ್‌, ನೆಗೆಟಿವ್‌ ಅನ್ನುವುದು ಸ್ಪಷ್ಟವಾಗುತ್ತದೆ. ಖಾಸಗಿ ಆಸ್ಪತ್ರೆಗಳಲ್ಲಿ ಕಿಟ್‌ ರಿಪೋರ್ಟ್‌ ಆಧರಿಸಿ ಡೆಂಗ್ಯೂ ಎನ್ನಲು ಸಾಧ್ಯವಿಲ್ಲ.

ಈ ತನಕ ಡೆಂಗ್ಯೂ ಪ್ರಕರಣ ಪತ್ತೆಯಾಗಿಲ್ಲ. ಜ್ವರ ಬಾಧಿತರ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಡೆಂಗ್ಯೂ ಜ್ವರಕ್ಕೆ ಎಲಿಸಾ ರಕ್ತ ಪರೀಕ್ಷೆ ಸೌಲಭ್ಯ ತಾಲೂಕು ಆಸ್ಪತ್ರೆಗಳಲ್ಲಿಲ್ಲ, ಜಿಲ್ಲಾ ಆಸ್ಪತ್ರೆಗೆ ರಕ್ತದ ಮಾದರಿ ಕಳುಹಿಸಿ, ವರದಿ ಪಡೆಯಬೇಕು. ತಾಲೂಕು ಆಸ್ಪತ್ರೆಗಳಲ್ಲೂ ಸೌಲಭ್ಯ ಕಲ್ಪಿಸಿದರೆ ರೋಗ ಉಲ್ಬಣಿಸದಂತೆ ತಡೆಯಬಹುದು ಎನ್ನುವುದು ಜನರ ಅಭಿಮತ.

ಕಾಸರಗೋಡು: 20 ಮಂದಿಗೆ ಡೆಂಗ್ಯೂ
ಕಾಸರಗೋಡು: ಕಳ್ಳಾರ್‌, ಪನತ್ತಡಿ ಗ್ರಾ. ಪಂ. ವ್ಯಾಪ್ತಿಯಲ್ಲಿ ಡೆಂಗ್ಯೂ ಜ್ವರ ವ್ಯಾಪಿಸುತ್ತಿದ್ದು, 20 ಮಂದಿಯನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಡೆಂಗ್ಯೂ ಜ್ವರದ ಹಿನ್ನೆಲೆಯಲ್ಲಿ ಪ್ರತಿರೋಧ ಕ್ರಮಗಳನ್ನು ತೀವ್ರಗೊಳಿಸಲಾಗಿದೆ ಎಂದು ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ

Advertisement

ಬೆಳ್ತಂಗಡಿಯಲ್ಲೂ ಡೆಂಗ್ಯೂ ಬಾಧೆ
ಬೆಳ್ತಂಗಡಿ: ತಾ| ನೆರಿಯದಲ್ಲಿ 2 ಮತ್ತು ಕಡಿರುದ್ಯಾವರ ದಲ್ಲಿ 2 ಡೆಂಗ್ಯೂ ಪ್ರಕರಣಗಳು ಬೆಳಕಿಗೆ ಬಂದಿವೆ. 4 ಪ್ರಕರಣಗಳಲ್ಲಿ ಇಬ್ಬರು ಡೆಂಗ್ಯೂ ಬಾಧಿತರು ಗುಣ ಮುಖರಾಗಿ ಮನೆಗೆ ತೆರಳಿದ್ದು, ಮತ್ತೆ ಇಬ್ಬರು ರೋಗಿ ಗಳು ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಾ| ಆರೋಗ್ಯಾಧಿಕಾರಿ ತಿಳಿಸಿದ್ದಾರೆ.

ಡೆಂಗ್ಯೂ ಜ್ವರ ಪತ್ತೆಯಾಗಿಲ್ಲ
ತಾಲೂಕಿನಲ್ಲಿ ಡೆಂಗ್ಯೂ ಪ್ರಕರಣ ಪತ್ತೆಯಾಗಿಲ್ಲ. ಲ್ಯಾಬ್‌ ಅಥವಾ ಜಿಲ್ಲಾ ಆಸ್ಪತ್ರೆಗಳಲ್ಲಿ ರಕ್ತ ಪರೀಕ್ಷೆ ಬಳಿಕ ಡೆಂಗ್ಯೂ ಬಗ್ಗೆ ಖಚಿತ ವರದಿ ಬರುತ್ತದೆ. ಅಂತಹ ಯಾವುದೇ ವರದಿ ಬಂದಿಲ್ಲ. ಕೆಲ ದಿನಗಳ ಹಿಂದೆ ಜ್ವರ ಬಾಧಿತರಿಗೆ ಡೆಂಗ್ಯೂ ಖಚಿತಪಟ್ಟಿಲ್ಲ. ಅವರು ಈಗ ಆರೋಗ್ಯವಾಗಿದ್ದಾರೆ.
 - ಡಾ| ಸುಬ್ರಹ್ಮಣ್ಯ ಎಂ.ಆರ್‌., ತಾಲೂಕು ಆರೋಗ್ಯಾಧಿಕಾರಿ, ಸುಳ್ಯ

Advertisement

Udayavani is now on Telegram. Click here to join our channel and stay updated with the latest news.

Next