Advertisement

Dengue fever: ಡೆಂಘೀಗೆ ಬಾಲಕರು ಬಲಿ?

09:24 PM Jul 20, 2024 | Team Udayavani |

ಸಾಗರ/ಹಾಸನ: ಶಂಕಿತ ಡೆಂಘೀಯಿಂದ ಇಲ್ಲಿನ ಜನ್ನತ್‌ ನಗರದ ಆರು ವರ್ಷದ ಬಾಲಕ ಶನಿವಾರ ಬಲಿಯಾಗಿದ್ದಾನೆ.

Advertisement

ಕಳೆದ ಐದು ದಿನಗಳಿಂದ ಮಹ್ಮದ್‌ ನಯಾನ್‌ ತೀವ್ರ ಜ್ವರದಿಂದ ಬಳಲುತ್ತಿದ್ದ. ಪೋಷಕರು ಖಾಸಗಿ ವೈದ್ಯರ ಬಳಿ ಚಿಕಿತ್ಸೆ ಕೊಡಿಸಿದ್ದರು. ಶುಕ್ರವಾರ ತೀವ್ರ ಜ್ವರ ಮತ್ತು ವಾಂತಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಜ್ವರ, ವಾಂತಿ ಜೊತೆಗೆ ರಕ್ತದೊತ್ತಡ ಒಮ್ಮೆಲೆ ಕಡಿಮೆಯಾಗಿದ್ದರಿಂದ ಬಾಲಕನನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಶಂಕಿತ ಡೆಂಘೀ ಜ್ವರಕ್ಕೆ ಮತ್ತೂಬ್ಬ ಬಾಲಕನ್ನೊಬ್ಬ ಮೃತಪಟ್ಟಿರುವ ಘಟನೆ ಹೊಳೆನರಸೀಪುರ ತಾಲೂಕಿನ ದೊಡ್ಡಳ್ಳಿ ಗ್ರಾಮದಲ್ಲಿ ನಡೆದಿದೆ.

ನಂದಿನಿ-ಸೋಮಶೇಖರ್‌ ದಂಪತಿ ಪುತ್ರ ಚಿರಂತ್‌ಗೌಡ (6) ಮೃತ ಬಾಲಕ. ಒಟ್ಟಾರೆ ಇದುವರೆಗೆ ಜಿಲ್ಲೆಯಲ್ಲಿ ಡೆಂಘೀಗೆ 9 ಮಕ್ಕಳು ಸೇರಿ 11 ಮಂದಿ ಮೃತಪಟ್ಟಿದ್ದಾರೆ ಎನ್ನಲಾಗುತ್ತಿದೆ. ಆದರೆ, ಆರೋಗ್ಯ ಇಲಾಖೆಯ ಅಧಿಕೃತ ಮಾಹಿತಿ ಪ್ರಕಾರ ನಾಲ್ಕು ಮಂದಿ ಮೃತಪಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next