Advertisement
ಚಿಂತಾಮಣಿ ನಗರದ 20ನೇ ವಾರ್ಡ್‌ನಲ್ಲಿ ಐದು ವರ್ಷದ ಬಾಲಕಿ ನಿವೇದಿತಾ ಡೆಂಗ್ಯು ಯಿಂದಮೃತಪಟ್ಟಿದ್ದಾಳೆ ಎಂದು ಹೇಳಲಾಗುತ್ತಿದೆ.ಸೋಮವಾರ ಇಂದಿರಾಗಾಂಧಿ ಆಸ್ಪತ್ರೆಯಿಂದಅಧಿಕೃತ ವರದಿ ಹೊರಬೀಳಲಿದ್ದು, ಸತ್ಯಾಂಶತಿಳಿಯಲಿದೆ ಎಂದು ಆರೋಗ್ಯ ಇಲಾಖೆಯ ಮೂಲಗಳಿಂದ ತಿಳಿದುಬಂದಿದೆ.
Related Articles
Advertisement
ವಾರ್ಡ್‌ವಾರು ಸಭೆಗೆ ತೀರ್ಮಾನ: ಜಿಲ್ಲೆಯಲ್ಲಿ ಡೆಂಗ್ಯುಜ್ವರ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳು ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಮತ್ತು ಚುನಾಯಿತ ಪ್ರತಿನಿಧಿಗಳ ಸಹಕಾರ ಪಡೆದು ಪ್ರತಿಯೊಂದು ವಾರ್ಡ್‌ಗಳಲ್ಲಿ ಡೆಂಗ್ಯು ಜ್ವರದ ಕುರಿತು ಜಾಗೃತಿ ಮೂಡಿಸುವಸಭೆಗಳನ್ನು ನಡೆಸಲು ತೀರ್ಮಾನಿಸಲಾಗಿದೆ.
ಜಿಲ್ಲೆಯಲ್ಲಿ ಸೊಳ್ಳೆಗಳನ್ನು ನಿಯಂತ್ರಿಸಲು ಆರೋಗ್ಯಇಲಾಖೆಯೊಂದಿಗೆ ನಾಗರಿಕರು ಸಹ ಸಹಕಾರನೀಡಬೇಕೆಂದು ಆರೋಗ್ಯ ಅಧಿಕಾರಿಗಳು ಮನವಿ ಮಾಡಿದ್ದಾರೆ. ಚಿಂತಾಮಣಿ ತಾಲೂಕಿನಲ್ಲಿ ಭಾನುವಾರ ಕೊರೊನಾ ಸೋಂಕಿನ ಪ್ರಕರಣ ಸಹ ಹೆಚ್ಚಾಗಿದೆ. ಐದು ಮಂದಿಗೆ ಕೊರೊನಾ ಸೋಂಕುಕಾಣಿಸಿಕೊಂಡಿದೆ. ಇದರಿಂದ ಜನರಲ್ಲಿ ಆತಂಕ ಹೆಚ್ಚಾಗಿದ್ದು, ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ
ಚಿಂತಾಮಣಿ ತಾಲೂಕಿನಲ್ಲಿ ಡೆಂಗ್ಯು ಜ್ವರ ಕಾಣಿಸಿಕೊಂಡಿರುವಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ. ಜ್ವರದಿಂದ ಮೃತಪಟ್ಟಿರುವ ಬಾಲಕಿಯ ಬಗ್ಗೆ ಈಗಾಗಲೇ ಇಂದಿರಾಗಾಂಧಿಆಸ್ಪತ್ರೆಯಿಂದ ವರದಿಯನ್ನು ಕೇಳಿದ್ದೇವೆ.ಸೋಮವಾರ ವರದಿ ಬರುವ ಸಾಧ್ಯತೆಇದ್ದು, ನಂತರ ಸತ್ಯಾಂಶ ತಿಳಿಯಲಿದೆ. ಗ್ರಾಮೀಣ, ನಗರ ಪ್ರದೇಶಗಳಲ್ಲಿ ಜನರಲ್ಲಿ ಜಾಗೃತಿ ಮೂಡಿಸಲು ವಾರ್ಡ್‌ವಾರು ಡೆಂಗ್ಯು ಸಹಿತ ಸಾಂಕ್ರಾಮಿಕರೋಗಗಳ ಕುರಿತು ಸಭೆ ನಡೆಸಲು ತೀರ್ಮಾನಿಸಲಾಗಿದೆ. –ಡಾ.ಮಹೇಶ್‌ಕುಮಾರ್, ಜಿಲ್ಲಾ ಆರೋಗ್ಯಾಧಿಕಾರಿ, ಚಿಕ್ಕಬಳ್ಳಾಪುರ.