ಪುತ್ತೂರು: ಕೋವಿಡ್ ಮಹಾಮಾರಿ ನಡುವೆ ಸಾಂಕ್ರಾಮಿಕ ಡೆಂಗ್ಯೂ ಜ್ವರ ಬಾಧೆ ಕಾಣಿಸಿಕೊಂಡಿದ್ದು, ಪುತ್ತೂರು ಮತ್ತು ಕಡಬ ತಾಲೂಕಿನಲ್ಲಿ ಜೂನ್ ಮೊದಲ ವಾರದಲ್ಲಿ 53 ಪ್ರಕರಣಗಳು ಕಂಡು ಬಂದಿವೆ.
ಜೂ. 1ರಿಂದ 7ರ ತನಕ ಕಡಬ ಪ್ರಾ.ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ 1, ಕೊçಲ-2, ಪುತ್ತೂರು ತಾಲೂಕಿನ ಉಪ್ಪಿನಂಗಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ 8, ಕೊಳ್ತಿಗೆ-1, ಪಾಣಾಜೆ-31, ಸರ್ವೆ-3, ಶಿರಾಡಿ-1, ತಿಂಗಳಾಡಿ-3 ಪ್ರಕರಣಗಳು ಕಂಡು ಬಂದಿವೆ.
ಜನವರಿಯಿಂದ ಜೂನ್ 7ರ ತನಕ ಉಭಯ ತಾಲೂಕುಗಳಲ್ಲಿ ಒಟ್ಟು 258 ಡೆಂಗ್ಯೂ ಜ್ವರ ಪ್ರಕರಣಗಳು ದೃಢಪಟ್ಟಿವೆ. ಮೇ ತಿಂಗಳೊಂದರಲ್ಲಿ 130 ಪ್ರಕರಣ ಕಂಡು ಬಂದಿತ್ತು.
ಪಾಣಾಜೆ ಆರೋಗ್ಯ ಕೇಂದ್ರ ವ್ಯಾಪ್ತಿಯ ಬೆಟ್ಟಂಪಾಡಿ, ಬಲ್ನಾಡು ಭಾಗದಲ್ಲಿ ಕಂಡು ಬಂದಿದ್ದ ಡೆಂಗ್ಯೂ ಜ್ವರ ಪ್ರಕರಣ ನಿಯಂತ್ರಣಕ್ಕೆ ಬರುತ್ತಿದೆ. ಶಾಂತಿಗೋಡು ಪ್ರದೇಶದ ಕಲ್ಲುಕೋಟೆ, ಪಣಂಬು ಬಳಿ ಡೆಂಗ್ಯೂ ಜ್ವರ ಕಂಡು ಬಂದಿದ್ದು, ಅಲ್ಲಿಗೆ ಜಿ.ಪಂ. ಅಧ್ಯಕ್ಷರು ಹಾಗೂ ಆರೋಗ್ಯ ಇಲಾಖೆ ತಂಡ ಭೇಟಿ ನೀಡಿ ರೋಗ ನಿಯಂತ್ರಣಕ್ಕೆ ಬೇಕಾದ ಅಗತ್ಯ ಮಾಹಿತಿಗಳನ್ನು ಜನರಿಗೆ ನೀಡಲಾಗಿದೆ. ತಾಲೂಕಿನ ಎಲ್ಲೆಡೆ ಆಶಾ ಮತ್ತು ಆರೋಗ್ಯ ಕಾರ್ಯಕರ್ತರು ಮನೆ ಮನೆಗೆ ತೆರಳಿ ಜಾಗೃತಿ ಮೂಡಿಸುತ್ತಿದ್ದಾರೆ. ಅಗತ್ಯ ಔಷಧಗಳು ಕೂಡ ಲಭ್ಯವಿದ್ದು ಆತಂಕ ಪಡುವ ಅಗತ್ಯ ಇಲ್ಲ ಎಂದು ತಾಲೂಕು ನೊಡಲ್ ಅಧಿಕಾರಿ ಡಾ| ಬದ್ರುದ್ದಿನ್ “ಉದಯವಾಣಿ’ಗೆ ತಿಳಿಸಿದ್ದಾರೆ.
Related Articles
ನಂದಳಿಕೆಯಲ್ಲಿ 3 ಡೆಂಗ್ಯೂ ಪ್ರಕರಣ
ಬೆಳ್ಮಣ್: ನಂದಳಿಕೆ ಪರಿಸರದಲ್ಲಿ 3 ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿದ್ದು ಜನರಲ್ಲಿ ಆತಂಕ ಮನೆ ಮಾಡಿದೆ. ಮಳೆಗಾಲದಲ್ಲಿ ಡೆಂಗ್ಯೂ ಇನ್ನಷ್ಟು ವ್ಯಾಪಿಸುವ ಸಾಧ್ಯತೆ ಇದ್ದು ಜನ ಎಚ್ಚರಿಕೆ ವಹಿಸಬೇಕೆಂದು ನಂದಳಿಕೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.
ಬದಿಯಡ್ಕದಲ್ಲಿ ಡೆಂಗ್ಯೂ ವ್ಯಾಪಕ
ಕಾಸರಗೋಡು: ಕೋವಿಡ್ ಸೋಂಕಿನ ಆತಂಕದ ಮಧ್ಯೆ ಬದಿಯಡ್ಕ ಪಂಚಾಯತ್ ವ್ಯಾಪ್ತಿಯಲ್ಲಿ ಡೆಂಗ್ಯೂ
ಜ್ವರ ವ್ಯಾಪಕಗೊಳ್ಳುತ್ತಿದೆ. ಕುಡ³ಂಗುಳಿ, ಕುಂಟಿಕಾನ, ಬೇಳ, ಕಿಳಿಂಗಾರು ಮೊದಲಾದೆಡೆ ಡೆಂಗ್ಯೂ ವ್ಯಾಪಿಸು
ತ್ತಿದ್ದು, 15 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ದಾಖಲಾಗಿ ದ್ದಾರೆ. ಡೆಂಗ್ಯೂ ಲಕ್ಷಣವುಳ್ಳ ಇನ್ನೂ ಕೆಲವರು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.