Advertisement

ನಗರದಲ್ಲಿ ಡೆಂಗ್ಯೂ ಇಳಿಮುಖ; ಇನ್ನೂ ಇರಲಿ ಎಚ್ಚರ

11:43 PM Jul 31, 2019 | mahesh |

ಮಹಾನಗರ: ನಗರದಲ್ಲಿ ವ್ಯಾಪಕವಾಗಿ ಹರಡಿ ಜನರನ್ನು ಆತಂಕಕ್ಕೀಡು ಮಾಡಿರುವ ಡೆಂಗ್ಯೂ ಇಳಿಮುಖವಾಗುತ್ತಿದ್ದು, ಹಂತ ಹಂತವಾಗಿ ನಿಯಂತ್ರಣಕ್ಕೆ ಬರುತ್ತಿದೆ. ಜಿಲ್ಲಾಡಳಿತ, ಆರೋಗ್ಯ ಇಲಾಖೆ, ಮಹಾನಗರ ಪಾಲಿಕೆಯು ವಿವಿಧ ಸಂಘ – ಸಂಸ್ಥೆಗಳ ನೇತೃತ್ವದಲ್ಲಿ ಸಾರ್ವಜನಿಕರಲ್ಲಿ ಅರಿವು ಮೂಡಿ ಸುವ ಕಾರ್ಯವನ್ನು ನಡೆಸಿದೆ.

Advertisement

ಇನ್ನೊಂದೆಡೆ ‘ಉದಯವಾಣಿ-ಸುದಿನ’ ಕೂಡ ನಗರದಲ್ಲಿ ಡೆಂಗ್ಯೂ ವ್ಯಾಪಕವಾಗುತ್ತಿದ್ದಂತೆ ಜನರಲ್ಲಿ ಜಾಗೃತಿ ಮೂಡಿಸಲು 8 ದಿನಗಳಿಂದ ಅಭಿಯಾನವನ್ನು ಕೈಗೊಂಡಿದೆ. ಇದಕ್ಕೆ ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಡೆಂಗ್ಯೂ ನಿಯಂತ್ರಣಕ್ಕೆ ಜಿಲ್ಲಾಡಳಿತ, ಮಹಾನಗರ ಪಾಲಿಕೆ, ಆರೋಗ್ಯ ಇಲಾಖೆ, ಜಿಲ್ಲಾ ಪಂಚಾಯತ್‌ ತ್ವರಿತವಾಗಿ ಅನೇಕ ಪರಿಣಾಮಕಾರಿ ಕ್ರಮಗಳನ್ನು ಕೈಗೊಂಡಿದೆ. ಡೆಂಗ್ಯೂ ಕಂಡುಬಂದಿರುವ ಪ್ರದೇಶಗಳು ಹಾಗೂ ಸಂಭಾವ್ಯ ಪ್ರದೇಶಗಳನ್ನು ಗ್ರಿಡ್‌ಗಳಾಗಿ ವಿಂಗಡಿಸಿ ಪ್ರತಿಯೊಂದು ಗ್ರಿಡ್‌ಗೂ ತಂಡಗಳನ್ನು ರೂಪಿಸಿ ಮನೆ ಮನೆ ಸಮೀಕ್ಷೆ ಕಾರ್ಯವನ್ನು ಮಾಡಿದೆ ಹಾಗೂ ಮಾಡುತ್ತಲಿದೆ. ಸೊಳ್ಳೆ ಉತ್ಪತ್ತಿ ತಾಣಗಳನ್ನು ಗುರುತಿಸಿ ನಾಶಪಡಿಸುವ ಜತೆಗೆ ಲೋಪವೆಸಗಿರುವವರಿಗೆ ದಂಡ ವಿಧಿಸುವ ಕಾರ್ಯವೂ ಮುಂದುವರಿದಿದೆ.ದಂಡ ವಿಧಿಸುವುದು ಸಮಸ್ಯೆಗೆ ಪರಿಹಾರವಲ್ಲ. ವ್ಯಾಪಕ ಜನಜಾಗೃತಿ ಆದಾಗ ಪರಿಣಾಮಕಾರಿ ಪರಿಹಾರ ಕಂಡುಕೊಳ್ಳಲು ಸಾಧ್ಯ. ಜಿಲ್ಲಾಡಳಿತ ಕೈಗೊಂಡಿರುವ ಡೆಂಗ್ಯೂ ಡ್ರೈವ್‌ ಈ ನಿಟ್ಟಿನಲ್ಲಿ ಪೂರಕ. ಇದನ್ನು ಪ್ರತಿ ರವಿವಾರ ಜಿಲ್ಲೆಯಾದ್ಯಂತ ನಡೆಸುವುದಾಗಿ ಜಿಲ್ಲಾಡಳಿತ ಈಗಾಗಲೇ ಘೋಷಿಸಿದೆ. ಶಾಲೆ, ಕಾಲೇಜುಗಳ ಆವರಣದಲ್ಲಿ ಸ್ವಚ್ಛತೆಯ ಲೋಪದಿಂದಾಗಿ ಸಾಂಕ್ರಾಮಿಕ ರೋಗಗಳ ತಾಣವಾಗುತ್ತಿರುವ ಬಗ್ಗೆಯೂ ಉದಯವಾಣಿ ಅಭಿಯಾನ ದಲ್ಲಿ ಗಮನ ಸೆಳೆಯಲಾಗಿತ್ತು. ಇದೀಗ ಜಿಲ್ಲಾಡಳಿತ ಎಲ್ಲ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರ ಸಭೆ ನಡೆಸಿ ಆವರಣಗಳನ್ನು ಸ್ವಚ್ಛವಾಗಿಡುವಂತೆ ಸೂಚಿಸಿದೆ ಮತ್ತು ಲೋಪಗಳು ಕಂಡು ಬಂದರೆ ಕಠಿನ ಕ್ರಮಗಳನ್ನು ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ.

ಸುದಿನ ಜಾಗೃತಿ
ಡೆಂಗ್ಯೂ ಎಚ್ಚರದ ಬಗ್ಗೆ ಮಾಹಿತಿ, ಎಚ್ಚರಿಕೆ, ಸಾರ್ವಜನಿಕ ಸಹಭಾಗಿತ್ವದ ಆವಶ್ಯಕತೆಯ ಬಗ್ಗೆ ಜುಲೈ 23ರಿಂದ ಸುದಿನ ವರದಿಗಳನ್ನು ಪ್ರಕಟಿಸಿ ಜನಜಾಗೃತಿ ಮೂಡಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸಿದೆ. ಸಾರ್ವಜನಿಕರ ಅಭಿಪ್ರಾಯಗಳು, ದೂರುಗಳಿಗೆ ವೇದಿಕೆಯನ್ನು ಒದಗಿಸಿದೆ. ನಗರದಲ್ಲಿ ಸೊಳ್ಳೆ ಉತ್ಪತ್ತಿ ತಾಣಗಳು, ಖಾಲಿ ನಿವೇಶನಗಳು, ಜನವಾಸವಿಲ್ಲದ ಮನೆಗಳು ಸಾಂಕ್ರಾಮಿಕ ರೋಗಗಳು ಹರಡುವ ಬಗ್ಗೆ ತಂದಿರುವ ಆತಂಕಗಳ ಬಗ್ಗೆ ಸಾರ್ವಜನಿಕರ ದೂರುಗಳನ್ನು ಚಿತ್ರ ಸಮೇತ ಪ್ರಕಟಿಸಿ ಅಧಿಕಾರಿಗಳ ಗಮನಕ್ಕೆ ತರುವ ಪ್ರಯತ್ನ ಮಾಡಿದೆ. ಇವುಗಳ ಪೈಕಿ ಹಲವು ಪ್ರದೇಶಗಳಿಗೆ ಅಧಿಕಾರಿಗಳ ತಂಡ ಸ್ಥಳಭೇಟಿ ಮಾಡಿ ಸೊಳ್ಳೆ ಲಾರ್ವಾ ನಾಶಕ್ಕೆ ಕ್ರಮ ಕೈಗೊಂಡಿದೆೆ. ಇದಕ್ಕೆ ಓದುಗರಿಂದ, ಅಧಿಕಾರಿ ವರ್ಗದಿಂದ ಶ್ಲಾಘನೆ ವ್ಯಕ್ತವಾಗಿದೆ. ಆ ಮೂಲಕ, ಡೆಂಗ್ಯೂ ಕುರಿತ ಈ ಅಭಿಯಾನವು ಮುಕ್ತಾಯಗೊಳ್ಳಲಿದೆ.

ಡೆಂಗ್ಯೂ, ಮಲೇರಿಯಾ ರೋಗ ಹರಡುವುದರಲ್ಲಿ ಹವಾಮಾನ ವೈಪರೀತ್ಯದ ಪಾಲೂ ಇದೆ. ಬಿಟ್ಟು ಬಿಟ್ಟು ಮಳೆ ಹಾಗೂ ಬಿಸಿಲು ವಾತಾವರಣ ಸೊಳ್ಳೆಗಳ ಉತ್ಪತ್ತಿಗೆ ಪೂರಕವಾಗುತ್ತದೆ. ಕೆಲವು ದಿನಗಳಿಂದ ನಿರಂತರ ಮಳೆಯ ಅನಂತರ ಇದೀಗ ಬಿಸಿಲು ಕಾಣಿಸಿಕೊಂಡಿದು. ನಡುವೆ ಬಿಟ್ಟು ಮಳೆಯಾಗುತ್ತಿದೆ. ಈ ವಾತಾವರಣ ಸೊಳ್ಳೆಗಳ ಉತ್ಪತ್ತಿಗೆ ಪೂರಕವಾಗಿದ್ದು ನಿಯಂತ್ರಣಕ್ಕೆ ಪ್ರತಿಕೂಲವಾಗಿದೆ. ಇದೇ ಸ್ಥಿತಿ ಮುಂದುವರಿದರೆ ಡೆಂಗ್ಯೂ, ಮಲೇರಿಯಾ ಮುಂತಾದ ಸಾಂಕ್ರಾಮಿಕ ರೋಗಗಳು ಮತ್ತೆ ಹೆಚ್ಚುವ ಸಾಧ್ಯತೆಗಳಿವೆ. ಆದುದರಿಂದ ಸಾರ್ವಜನಿಕರು ಮತ್ತು ಇಲಾಖೆಗಳು ಎಚ್ಚರ ವಹಿಸುವುದು ಅಗತ್ಯ. ನೀರು ನಿಂತಿದ್ದರೆ ಅವುಗಳನ್ನು ತೆರವುಗೊಳಿಸಬೇಕು. ನೀರಿನ ಟ್ಯಾಂಕ್‌ಗಳನ್ನು ಭದ್ರವಾಗಿ ಮುಚ್ಚಿಡಬೇಕು.

ಮಳೆ-ಬಿಸಿಲು; ಎಚ್ಚರಿಕೆ ಇನ್ನೂ ಅಗತ್ಯ

ಡೆಂಗ್ಯೂ, ಮಲೇರಿಯಾ ರೋಗ ಹರಡುವುದರಲ್ಲಿ ಹವಾಮಾನ ವೈಪರೀತ್ಯದ ಪಾಲೂ ಇದೆ. ಬಿಟ್ಟು ಬಿಟ್ಟು ಮಳೆ ಹಾಗೂ ಬಿಸಿಲು ವಾತಾವರಣ ಸೊಳ್ಳೆಗಳ ಉತ್ಪತ್ತಿಗೆ ಪೂರಕವಾಗುತ್ತದೆ. ಕೆಲವು ದಿನಗಳಿಂದ ನಿರಂತರ ಮಳೆಯ ಅನಂತರ ಇದೀಗ ಬಿಸಿಲು ಕಾಣಿಸಿಕೊಂಡಿದು. ನಡುವೆ ಬಿಟ್ಟು ಮಳೆಯಾಗುತ್ತಿದೆ. ಈ ವಾತಾವರಣ ಸೊಳ್ಳೆಗಳ ಉತ್ಪತ್ತಿಗೆ ಪೂರಕವಾಗಿದ್ದು ನಿಯಂತ್ರಣಕ್ಕೆ ಪ್ರತಿಕೂಲವಾಗಿದೆ. ಇದೇ ಸ್ಥಿತಿ ಮುಂದುವರಿದರೆ ಡೆಂಗ್ಯೂ, ಮಲೇರಿಯಾ ಮುಂತಾದ ಸಾಂಕ್ರಾಮಿಕ ರೋಗಗಳು ಮತ್ತೆ ಹೆಚ್ಚುವ ಸಾಧ್ಯತೆಗಳಿವೆ. ಆದುದರಿಂದ ಸಾರ್ವಜನಿಕರು ಮತ್ತು ಇಲಾಖೆಗಳು ಎಚ್ಚರ ವಹಿಸುವುದು ಅಗತ್ಯ. ನೀರು ನಿಂತಿದ್ದರೆ ಅವುಗಳನ್ನು ತೆರವುಗೊಳಿಸಬೇಕು. ನೀರಿನ ಟ್ಯಾಂಕ್‌ಗಳನ್ನು ಭದ್ರವಾಗಿ ಮುಚ್ಚಿಡಬೇಕು.

ಜಾಗೃತಿ ಕಾರ್ಯ ಮುಂದುವರಿಕೆ

ನಗರ ವ್ಯಾಪ್ತಿಯಲ್ಲಿ ಡೆಂಗ್ಯೂ ಪ್ರಸ್ತುತ ನಿಯಂತ್ರಣದಲ್ಲಿದೆ. ಆದರೂ ಪಾಲಿಕೆ ವತಿಯಿಂದ ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಅರಿವು ಮೂಡಿಸುವ ನೆಲೆಯಲ್ಲಿ ಜಾಗೃತಿ ಕ್ರಮಗಳು ಮುಂದುವರಿಯಲಿವೆ. ಜನರು ಕೂಡ ಈ ನಿಟ್ಟಿನಲ್ಲಿ ಎಚ್ಚರಿಕೆ ವಹಿಸಬೇಕು. ಉದಯವಾಣಿ ಅಭಿಯಾನದಲ್ಲಿ ಸಾರ್ವಜನಿಕರಿಂದ ಬಂದಿರುವ ದೂರುಗಳನ್ನು ಪರಿಶೀಲಿಸಿ ಪರಿಹಾರ ಕ್ರಮಗಳನ್ನು ಪಾಲಿಕೆಯ ಸಿಬಂದಿ ಮಾಡುತ್ತಿದ್ದಾರೆ. ಸುದಿನದ ಈ ಮಾದರಿಯ ಅಭಿಯಾನವು ಶ್ಲಾಘನೀಯ.
– ಮಹಮ್ಮದ್‌ ನಝೀರ್‌, ಆಯುಕ್ತರು- ಮನಪಾ
Advertisement

Udayavani is now on Telegram. Click here to join our channel and stay updated with the latest news.

Next