Advertisement

ಡೆಂಗ್ಯೂ: ನಿಯಂತ್ರಣಕ್ಕೆ ಬಂದರೂ ನಿರ್ಲಕ್ಷ್ಯ ಸಲ್ಲದು

08:46 PM Jul 28, 2019 | Sriram |

ಮಹಾನಗರ : ಡೆಂಗ್ಯೂ , ಮಲೇರಿಯಾ ರೋಗ ಹರಡುವುದರಲ್ಲಿ ಹವಾಮಾನ ವೈಪರೀತ್ಯದ ಪಾಲೂ ಇದೆ. ಬಿಟ್ಟು ಬಿಟ್ಟು ಮಳೆ ಹಾಗೂ ಬಿಸಿಲು ವಾತಾವರಣ ಸೊಳ್ಳೆಗಳ ಉತ್ಪತ್ತಿಗೆ ಪೂರಕ ವಾಗುತ್ತದೆ. ಸದ್ಯ ಡೆಂಗ್ಯೂ ನಿಯಂತ್ರಣಕ್ಕೆ ಬಂದರೂ ಜಾಗೃತಿ, ಮುನ್ನೆಚ್ಚರಿಕೆ ಕ್ರಮಗಳು ನಿರಂತರ ನಡೆಯುವ ಅಗತ್ಯವಿದೆ.
ಕಳೆದ ಕೆಲವು ದಿನಗಳಿಂದ ಮಂಗಳೂರಿನಲ್ಲಿ ತೀವ್ರ ರೀತಿಯಲ್ಲಿ ಹಬ್ಬುತ್ತಿದ್ದ ಡೆಂಗ್ಯೂ ತುಸು ಇಳಿಕೆಯಾಗಿದೆ. ನಗರದಲ್ಲಿ ಕೆಲವು ಪ್ರದೇಶಗಳಲ್ಲಿ ಡೆಂಗ್ಯೂ ಜ್ವರ ಹೆಚ್ಚಿನ ಪ್ರಮಾಣದಲ್ಲಿ ಕಂಡುಬಂದಿತ್ತು. ಇನ್ನೂ ಕೆಲವು ಪ್ರದೇಶಗಳನ್ನು ಸಂಭಾವ್ಯ ಡೆಂಗ್ಯೂ ಪ್ರದೇಶಗಳೆಂದು ಗುರುತಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ,ಮಹಾನಗರ ಪಾಲಿಕೆ, ಜಿಲ್ಲಾಡಳಿತ ಹೆಚ್ಚಿನ ನಿಗಾ ವಹಿಸಿ ನಿಯಂತ್ರಣ ಕ್ರಮಗಳನ್ನು ಕೈಗೊಂಡಿದೆ.

Advertisement

ಪ್ರದೇಶಗಳ ಗುರುತಿಸುವಿಕೆ
ಗುಜ್ಜರಕೆರೆ,ಮಹಾಕಾಳಿ ಪಡು#, ಮಹಾಕಾಳಿ ಪಡು# ಲೆವೆಲ್‌ ಕ್ರಾಸ್‌, ಜೆಪ್ಪು , ಮೋರ್ಗನ್‌ಗೆàಟ್‌, ಹೊಯಿಗೆ ಬಜಾರ್‌, ಎಮ್ಮೆಕೆರೆ, ಬೋಳಾರ, ಬೋಳಾರ ಲಿವೆಲ್‌ , ಪಾಂಡೇಶ್ವರ, ಕುದ್ರೋಳಿ, ಬಂದರು ಪ್ರದೇಶ, ಸ್ಟೇಟ್‌ ಬ್ಯಾಂಕ್‌ ಪ್ರದೇಶ,ಎಕ್ಕೂರು, ಮಣ್ಣಗುಡ್ಡೆ, ಪದವು, ಯೆಯ್ನಾಡಿ, ಕದ್ರಿ ಪರಿಸರ , ಕದ್ರಿ ಕಂಬÛ, ಮಲ್ಲಿಕಟ್ಟೆ, ದೇರೆಬೈಲು , ನಂತೂರು, ಬಿಕರ್ನಕಟ್ಟೆ, ಮರೋಳಿ, ಕರಂಗಲ್ಪಾಡಿ ಪ್ರದೇಶ, ಜಯನಗರ, ಬಿಜೈ ಮುಂತಾದೆಡೆ ಡೆಂಗ್ಯೂ ಹೆಚ್ಚು ವರದಿಯಾಗಿರುವ ಮತ್ತು ಡೆಂಗ್ಯೂ ಹರಡಬಹುದಾದ ಪ್ರದೇಶಗಳನ್ನು ಗುರುತಿಸಿ ನಿಯಂತ್ರಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿತ್ತು. ಈ ಪ್ರದೇಶಗಳನ್ನು ರೋಗದ ತೀವ್ರತೆಗನುಗುಣವಾಗಿ ಗ್ರಿಡ್‌ಗಳಾಗಿ ವಿಂಗಡಿಸಿ ಆದ್ಯತೆಯ ನೆಲೆಯಲ್ಲಿ ರೋಗನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲಾಗಿದೆ. ನೂರಕ್ಕೂ ಹೆಚ್ಚು ಗ್ರಿಡ್‌ ತಂಡಗಳನ್ನು ರಚಿಸಲಾಗಿದೆ. ಪ್ರತಿಯೊಂದು ಗ್ರಿಡ್‌ ತಂಡದಲ್ಲಿ 3ರಿಂದ 4 ಸದಸ್ಯರಿದ್ದಾರೆ. ಆರೋಗ್ಯ ಇಲಾಖೆ ಮಹಾನಗರ ಪಾಲಿಕೆಯ ಎಂಪಿಡಬ್ಲೂ ಸಿಬಂದಿ, ಖಾಸಗಿ ನರ್ಸಿಂಗ್‌ ಕಾಲೇಜುಗಳ ವಿದ್ಯಾರ್ಥಿಗಳು, ಎಸ್‌ಎಸ್‌ಎಸ್‌ ವಿದ್ಯಾರ್ಥಿ ಗಳನ್ನು ಇದರಲ್ಲಿ ಬಳಸಲಾಗಿದೆ. ಈ ತಂಡ ಮನೆ, ಪ್ರದೇಶಗಳಿಗೆ ಭೇಟಿ ನೀಡಿ ಸಮೀಕ್ಷೆ ನಡೆಸಿ, ಜಾಗೃತಿ ಮೂಡಿಸಿ, ಸೊಳ್ಳೆ ಉತ್ಪತ್ತಿ ತಾಣಗಳನ್ನು ನಾಶಪಡಿಸುವ ಕಾರ್ಯ ಮಾಡುತ್ತಿದೆ.
ಇದರ ಜತೆಗೆ ಸೊಳ್ಳೆ ಉತ್ಪತ್ತಿ ತಾಣ, ಲಾರ್ವಾಗಳು ಕಂಡುಬಂದರೆ ಸ್ಥಳದಲ್ಲೇ ದಂಡ ವಿಧಿಸುವ ಕಾರ್ಯವೂ ನಡೆಯುತ್ತಿದೆ.

ಜಾಗೃತಿ ಅಭಿಯಾನ
ಡೆಂಗ್ಯೂ, ಮಲೇರಿಯಾ ಮುಂತಾದ ಸಾಂಕ್ರಾಮಿಕ ರೋಗಗಳ ನಿಯಂತ್ರಣದಲ್ಲಿ ಇಲಾಖೆಗಳ ಜತೆಗೆ ಸಾರ್ವಜನಿಕ ಸಹಭಾಗಿತ್ವದ ಪಾತ್ರವೂ ಮಹತ್ತರವಾಗಿದೆ. ರೋಗಗಳು ಬರುವ ಮುನ್ನ ಜಾಗೃತಿ ನಡೆಸಬೇಕು. ಈ ಕಾರ್ಯಕ್ಕಾಗಿ ಎನ್‌ಜಿಒಗಳು, ಇದರ ಜತೆಗೆ ಶಿಕ್ಷಣ ಇಲಾಖೆ ಸಹಭಾಗಿತ್ವದೊಂದಿಗೆ ಶಾಲಾ ಕಾಲೇಜುಗಳಲ್ಲಿ ಜಾಗೃತಿ ನಡೆಸುವುದು ಹೆಚ್ಚು ಪರಿಣಾಮಕಾರಿಯಾಗುತ್ತದೆ.

ಡೆಂಗ್ಯೂ ಡ್ರೈವ್‌ ನಿರಂತರವಾಗಿರಲಿ
ಡೆಂಗ್ಯೂ, ಮಲೇರಿಯಾ ಸೇರಿದಂತೆ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ದ.ಕ. ಜಿಲ್ಲಾಡಳಿತ ಮಹಾನಗರ ಪಾಲಿಕೆ, ಜಿ.ಪಂ. ರವಿವಾರ ಡೆಂಗೂಡ್ರೈವ್‌ ಅಭಿಯಾನ ನಡೆಸಿದೆ. ಮನೆ, ವಸತಿ ಸಮುಚ್ಚÂಯಗಳು, ಕಚೇರಿಗಳು, ಸಾರ್ವಜನಿಕ ಪ್ರದೇಶಗಳಲ್ಲಿ ಸ್ವಚ್ಚತಾ ಕಾರ್ಯ ನಡೆದಿದೆ. ಸಾರ್ವಜನಿಕರು ತಮ್ಮ ಮನೆ, ಪರಿಸರದಲ್ಲಿ ಸ್ವಚ್ಚತೆ ಕಾರ್ಯ ನಡೆಸಿ ಸೊಳ್ಳೆಗಳ ಉತ್ಪತ್ತಿಗೆ ಅವಕಾಶವಾಗದಂತೆ ನೋಡಿಕೊಳ್ಳಲು ಪ್ರೇರಣೆ ನೀಡುವುದು ಇದರ ಉದ್ದೇಶ. ಕನಿಷ್ಠ ಒಂದು ತಿಂಗಳಿಗೆ ಒಮ್ಮೆಯಾದರೂ ಈ ಅಭಿಯಾನವನ್ನು ನಿರ್ದಿಷ್ಟ ದಿನಾಂಕವನ್ನು ನಿಗದಿಪಡಿಸಿ ಹಮ್ಮಿಕೊಳ್ಳುವುದು ಜಾಗೃತಿ ನಿಟ್ಟಿನಲ್ಲಿ ಹೆಚ್ಚು ಸಹಕಾರಿಯಾಗಬಲ್ಲದು.

ಮುಂಜಾಗ್ರತೆ, ಫಾಲೋಅಪ್‌ ಅಗತ್ಯ
ಡೆಂಗ್ಯೂ ನಿಯಂತ್ರಣವಾದರೂ ಮುಂದೆ ಹರಡದಂತೆ ಮುಂಜಾಗ್ರತೆ, ಫಾಲೋಅಪ್‌ ಮುಂದುವರಿಸುವುದು ಅಗತ್ಯ. ಗ್ರಿಡ್‌ ವ್ಯವಸ್ಥೆಯನ್ನು ಕನಿಷ್ಠ ಮಳೆಗಾಲ ಮುಕ್ತಾಯದವರೆಗಾದರೂ ಮುಂದುವರಿಸಬೇಕು . ಮಹಾನಗರ ಪಾಲಿಕೆಯ , ಆರೋಗ್ಯ ಇಲಾಖೆಯ ಹಾಗೂ ಎಂಪಿಡಬ್ಲೂ ಸಿಬಂದಿಗಳು ಡೆಂಗ್ಯೂ ಹೆಚ್ಚು ಕಂಡುಬಂದಿರುವ ಹಾಗೂ ಸಂಭಾವ್ಯ ಪ್ರದೇಶಗಳೆಂದು ಗುರುತಿಸಿರುವ ಪ್ರದೇಶಗಳಿಗೆ ನಿಯಮಿತವಾಗಿ ಭೇಟಿ ನೀಡಿ ಸಮೀಕ್ಷೆ ಕಾರ್ಯ ಮುಂದುವರಿಸುವುದು ಅವಶ್ಯ. ಜತೆಗೆ ಡೆಂಗ್ಯೂ ಹೆಚ್ಚು ಕಂಡುಬಂದಿರುವ ಪ್ರದೇಶಗಳಲ್ಲಿ ಫಾಗಿಂಗ್‌ ಹಾಗೂ ಸೆ#†à ಕಾರ್ಯವನ್ನು ನಿಯಮಿತವಾಗಿ ನಡೆಸಬೇಕು.

Advertisement

ಹೀಗೆ ಮಾಡಿ
ಈಡಿಸ್‌ ಈಜಿಪ್ಟೆ„ ಸೊಳ್ಳೆಗಳ ಮೂಲಕ ಡೆಂಗ್ಯೂ ಒಬ್ಬರಿಂದೊಬ್ಬರಿಗೆ ಹರಡುತ್ತದೆ. ಇವುಗಳು ಘನತ್ಯಾಜ್ಯ, ಏರ್‌ಕೂಲರ್‌, ಹೂಕುಂಡ ಇತ್ಯಾದಿ ನೀರು ನಿಂತ ಪ್ರದೇಶಗಳಲ್ಲಿ ಉತ್ಪತ್ತಿಯಾಗುತ್ತವೆ. ಆದ್ದರಿಂದ ಸ್ವತ್ಛತೆ ಅಗತ್ಯ. ಸೊಳ್ಳೆ ಉತ್ಪತ್ತಿಯಾಗದಂತೆ ನೀರು ಸಂಗ್ರಹಣೆ ಟ್ಯಾಂಕ್‌, ಡ್ರಂ, ಬ್ಯಾರೆಲ್‌ ಪಾತ್ರೆಗಳಿಗೆ ಭದ್ರವಾದ ಮುಚ್ಚಳ ಅಳವಡಿಸಬೇಕು. ಮನೆಯ ಸುತ್ತ ಇರುವ ಕಾಡುಗಿಡಗಳನ್ನು ಕಡಿದುಸ್ವಚ್ಚಗೊಳಿಸಬೇಕು. ಹಗಲಿನಲ್ಲಿಯೂ ಮನೆಯ ಒಳಗೆ ಧೂಪದ ಹೊಗೆ ಹಾಕುವುದು ಇತ್ಯಾದಿ ಕ್ರಮ ಅನುಸರಿಸಬೇಕು.

Advertisement

Udayavani is now on Telegram. Click here to join our channel and stay updated with the latest news.

Next