Advertisement

ಕೊಳೆಗೇರಿಗಳಲ್ಲಿ ಡೆಂಘೀ, ಚಿಕೂನ್‌ ಗುನ್ಯಾ

05:41 AM Jun 14, 2020 | Lakshmi GovindaRaj |

ಬೆಂಗಳೂರು: ಕೋವಿಡ್‌ 19 ಭೀತಿ ನಡುವೆಯೇ ನಗರದ ಕೊಳೆಗೇರಿಗಳಲ್ಲಿ ಡೆಂಘೀ , ಚಿಕೂನ್‌ ಗುನ್ಯಾ ಪ್ರಕರಣಗಳು ಹೆಚ್ಚಾಗುತ್ತಿದ್ದು, ಆತಂಕ್ಕೆ ಕಾರಣವಾಗಿದೆ. ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಯಶವಂತಪುರ ವಾರ್ಡ್‌ನಲ್ಲಿರುವ  ಅಂಬೇಡ್ಕರ್‌ ನಗರದಲ್ಲಿ (ಹಳೆಯ ಸುಣ್ಣದ ಗೂಡು ಕೊಳೆಗೇರಿ)  35ರಿಂದ 40 ಜನ ಈ ರೀತಿ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ಆರೋಗ್ಯ ಇಲಾಖೆ ಮತ್ತು ಬಿಬಿಎಂಪಿಗೆ ಸವಾಲಾಗಿ ಪರಿಣಮಿಸಿದೆ.

Advertisement

ಹಳೆ ಸುಣ್ಣದ ಗೂಡು  ಕೊಳೆಗೇರಿಯಲ್ಲಿ ಅಂಬೇಡ್ಕರ್‌ ನಗರದ ಇಡೀ ಪ್ರದೇಶದಲ್ಲಿ ಹಲವರು ಡೆಂಘೀ , ಚಿಕೂನ್‌ಗುನ್ಯಾ ಹಾಗೂ ಚರ್ಮ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಆದರೆ, ಬಿಬಿಎಂಪಿಯ ಆರೋಗ್ಯಾಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ.  ಯಶವಂತಪುರದ ಅಂಬೇಡ್ಕರ್‌ ನಗರದಲ್ಲಿ ಮನೆಗಳು ಅತ್ಯಂತ ಕಡಿಮೆ ಅಂತರದಲ್ಲಿ ನಿರ್ಮಾಣಗೊಂಡಿವೆ.

ಚರಂಡಿ ಸ್ವತ್ಛತೆಗೆ ಗಮನ ನೀಡಿಲ್ಲ. ಸರಾಗವಾಗಿ ನೀರು ಹರಿದು  ಹೋಗುವ ವ್ಯವಸ್ಥೆ ಇಲ್ಲದೆ ಇರುವುದರಿಂದ ಸೊಳ್ಳೆ ಹಾವಳಿ ತೀವ್ರವಾಗಿದ್ದು, ಆತಂಕ ಮೂಡಿದೆ ಎಂದು ಸ್ಥಳೀಯರು ಹೇಳುತ್ತಾರೆ. “ಕಳೆದ ಒಂದು ತಿಂಗಳಿನಿಂದ ಕೈ ಕಾಲು ಊದಿಕೊಳ್ಳುವುದು, ವಾಕರಿಕೆ, ಜ್ವರ ಹಾಗೂ ವಾಂತಿ ಕಾಣಿಸಿಕೊಳ್ಳುತ್ತಿದೆ. ನಡೆದಾಡಲೂ ಸಾಧ್ಯವಾಗುತ್ತಿಲ್ಲ. ಈ ಭಾಗದಲ್ಲಿ ಹಲವರಿಗೆ ಇದೇ ರೀತಿ ಸಮಸ್ಯೆಯಾಗುತ್ತಿದೆ. ಈ ಬಗ್ಗೆ ಯಶವಂತಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗೆ ವಿಷಯ ತಿಳಿಸಿದರೂ ಸಹಕಾರ ನೀಡುತ್ತಿಲ್ಲ’ ಎಂದು ಸ್ಥಳೀಯ ನಿವಾಸಿ ವಸಂತಾ ದೂರುತ್ತಾರೆ.

ಮಕ್ಕಳಿಗೂ ಸೋಂಕು: ಈ ಭಾಗದಲ್ಲಿ ಮಕ್ಕಳು ಸೇರಿದಂತೆ ಹಲವರಿಗೆ ಚರ್ಮ ರೋಗ ಸೇರಿದಂತೆ ಸಾಂಕ್ರಾಮಿಕ ರೋಗ ಹಬ್ಬುತ್ತಿದೆ. ಕಣ್ಣಿನ ಕೆಳಭಾಗ ಕಪ್ಪಾಗುವುದು, ಕೈ- ಕಾಲು ಊದಿಕೊಳ್ಳುವುದು, ಚರ್ಮ ಅಲರ್ಜಿ ಕಾಣಿಸಿಕೊಳ್ಳುತ್ತಿದೆ. ತಿಂಗಳಿನಿಂದ ಈ ಭಾಗದಲ್ಲಿನ ಸಾರ್ವಜನಿಕರು ಈ ರೀತಿಯ ಸಮಸ್ಯೆ ಎದುರಿಸುತ್ತಿದ್ದರೂ ಸ್ಥಳೀಯ ಪಾಲಿಕೆ ಸದಸ್ಯರು ಹಾಗೂ ಆರೋಗ್ಯ ಅಧಿಕಾರಿಗಳು ಇತ್ತ ಗಮನ ಹರಿಸಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಾರೆ.

ಕೋವಿಡ್‌ 19 ವ್ಯಾಪಕವಾದ ಮೇಲೆ ಆಶಾ  ಮತ್ತು ಆರೋಗ್ಯ ಕಾರ್ಯಕರ್ತರು ಮನೆ ಮನೆ ಆರೋಗ್ಯ ತಪಾಸಣೆ ಮಾಡಿ ಜಾಗೃತಿ ಮೂಡಿಸಲು ಸಾಧ್ಯವಾಗುತ್ತಿಲ್ಲ, ಎಲ್ಲರೂ ಕೋವಿಡ್‌ 19 ನಿಯಂತ್ರಣಕ್ಕೆ ರೂಪಿಸಿರುವ  ಯೋಜನೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಹಿಂದೆ ಮಳೆಗಾಲ ಪ್ರಾರಂಭದ ಹಂತದಲ್ಲೇ ಮನೆ, ಮನೆ ಸಮೀಕ್ಷೆ ಮಾಡುವುದು ಹಾಗೂ ಕೊಳೆಗೇರಿಗಳಲ್ಲಿ ಆರೋಗ್ಯ ಶಿಬಿರ ಏರ್ಪಡಿಸಿ ಜಾಗೃತಿ ಮೂಡಿಸಲಾಗುತ್ತಿತ್ತು. ಆದರೆ, ಸದ್ಯ  ಆರೋಗ್ಯ ಶಿಬಿರಗಳು ನಿಂತಿವೆ ಎಂದು ಅಧಿಕಾರಿಗಳು ಹೇಳುತ್ತಾರೆ.

Advertisement

ಕೊಳೆಗೇರಿಗಳ ನಿರ್ಲಕ್ಷ್ಯ?: ನಗರದಲ್ಲಿ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿದ್ದು, ಪಾಲಿಕೆಯು ಕೊಳೆಗೇರಿಗಳನ್ನು ನಿರ್ಲಕ್ಷ್ಯ ಮಾಡುತ್ತಿರುವ ಆರೋಪ ಕೇಳಿಬಂದಿದೆ. ನಗರದಲ್ಲಿ ಸಾವಿರಕ್ಕೂ ಹೆಚ್ಚು ಕೊಳೆಗೇರಿಗಳಿವೆ. ರಾಜ್ಯ ಕೊಳೆಗೇರಿ  ಅಭಿವೃದಿಟಛಿ ಮಂಡಳಿಯು 432 ಕೊಳೆಗೇರಿ ಪ್ರದೇಶಗಳನ್ನು ಗುರುತಿಸಿದೆ. ನಗರದಲ್ಲಿನ ಕೊಳೆಗೇರಿಗಳಲ್ಲಿ ಕೋವಿಡ್‌ 19 ದೃಢಪಡುತ್ತಿರುವ ಕಡೆಗಳಲ್ಲಿ ಮಾತ್ರ ಬಿಬಿಎಂಪಿ ಸೋಂಕು ನಿವಾರಕ ದ್ರಾವಣ ಸಿಂಪಡಿಸುತ್ತಿದೆ. ಆದರೆ,  ಳೆಗೇರಿ  ಪ್ರದೇಶಗಳಲ್ಲಿ ಡೆಂಘೀ , ಚಿಕೂನ್‌ ಗುನ್ಯಾ ಸೇರಿದಂತೆ ಇತರೆ ಆರೋಗ್ಯ ಸಮಸ್ಯೆಗಳ ತಡೆಗೆ ನಿರ್ದಿಷ್ಟ ಯೋಜನೆ ರೂಪಿಸಿಕೊಂ ಡಿಲ್ಲ. ಸದ್ಯ ಕೊಳೆಗೇರಿಗಳಿಗೆ ಈ ಹಿಂದೆ ಅಳವಡಿಸಲಾಗಿದ್ದ ಮಾರ್ಗಸೂಚಿಯನ್ನೂ ಪಾಲಿಕೆ ಬದಲಾಯಿಸಿದೆ.

ಕೊಳೆಗೇರಿಯಲ್ಲಿ ನೀರಿನ ಸಮಸ್ಯೆ ಇರುವುದರಿಂದ ಈ ರೀತಿ ಸೋಂಕು ಕಾಣಿಸಿಕೊಳ್ಳುತ್ತಿದೆ. ನಿರ್ದಿಷ್ಟವಾಗಿ ಸೋಂಕಿಗೆ ಕಾರಣ ಏನು ಎನ್ನುವುದು ತಿಳಿಯುತ್ತಿಲ್ಲ. ಕೋವಿಡ್‌ 19 ಕಾರ್ಯಾಚರಣೆ. ರೈಲು ಪ್ರಯಾಣಿಕರನ್ನು ಕ್ವಾರಂಟೈನ್‌ಗೆ  ಒಳಪಡಿಸುವ ಜವಾಬ್ದಾರಿ ಇರುವುದರಿಂದ ಹಾಗೂ ಸೋಂಕು ಭೀತಿ ಇರುವ ಹಿನ್ನೆಲೆಯಲ್ಲಿ ಆರೋಗ್ಯ ಶಿಬಿರ ಏರ್ಪಡಿಸಲು ಸಾಧ್ಯವಾಗುತ್ತಿಲ್ಲ. ಕೂಡಲೇ ಕೆಲವರ ರಕ್ತ ಪರೀಕ್ಷೆ ನಡೆಸಿ ಪರಿಶೀಲಿಸಲಾಗುವುದು.
-ಸುಜಾತಾ, ಹಿರಿಯ ಆರೋಗ್ಯಾಧಿಕಾರಿ, ಯಶವಂತಪುರ

* ಹಿತೇಶ್‌ ವೈ

Advertisement

Udayavani is now on Telegram. Click here to join our channel and stay updated with the latest news.

Next