Advertisement
ಕಾಮಗಾರಿಗೆ 2.37 ಲಕ್ಷ ರೂ.2018 – 19ನೇ ಸಾಲಿನ ಬಜೆಟ್‌ನಲ್ಲಿ 2.37 ಲಕ್ಷ ರೂ. ಮೀಸಲಿರಿಸಿ ಬೆಳ್ತಂಗಡಿ ಪ.ಪಂ. ವ್ಯಾಪ್ತಿಯ ಜೂನಿಯರ್ ಕಾಲೇಜು-ಸುಧೆಮುಗೇರು ರಸ್ತೆ, ಹುಣ್ಸೆಕಟ್ಟೆ ರಸ್ತೆ ಹಾಗೂ ಮೂರು ಮಾರ್ಗದ ಬಳಿ ಮೋರಿ ರಚನೆ ಕಾಮಗಾರಿ ನಡೆದಿತ್ತು. ಆದರೆ ಸುಧೆಮುಗೇರು ಕ್ರಾಸ್ ಹುಡ್ಕೊ ತಿರುವು ಬಳಿ ರಚಿಸಿದ ಮೋರಿ ಕಾಮಗಾರಿಯಿಂದ ಸಮೀಪದ ಮನೆಯಂಗಳಕ್ಕೆ ಚರಂಡಿ ನೀರು ನುಗ್ಗುತ್ತಿದೆ. ಮೂರು ಮಾರ್ಗ ಸಮೀಪದ ಕಾಮಗಾರಿ ಅವೈಜ್ಞಾನಿಕವಾಗಿದೆ. ಮಳೆಗಾಲದಲ್ಲಿ ಇದರಲ್ಲೇ ಮಳೆ ನೀರೂ ಹರಿದು ಹೋಗುತ್ತದೆ. ಸಿಸಿ ಡ್ರೈನೇಜ್ ನೀರನ್ನು ರಾಜಕಾಲುವೆಗೆ ಬಿಡುವ ವ್ಯವಸ್ಥೆ ಮಾಡಿದಲ್ಲಿ ಸಮಸ್ಯೆ ಬಗೆಹರಿಯಲಿದೆ. ಇದಕ್ಕೆ ಪರಿಹಾರ ನೀಡುವ ಮುನ್ನವೇ ಮೂರು ಮಾರ್ಗದ ಬಳಿ 3.50 ಲಕ್ಷ ರೂ. ವೆಚ್ಚದಲ್ಲಿ ಡಾಮರೀಕರಣ ಮಾಡಲಾಗಿದ್ದು ಸಮಸ್ಯೆ ಬಿಗಡಾಯಿಸುವ ಲಕ್ಷಣವಿದೆ.
ಚರಂಡಿ ಅವ್ಯವಸ್ಥೆ ಬಗ್ಗೆ ಉದಯವಾಣಿ ವರದಿ ಮಾಡಿದ್ದು, ಆಡಳಿತ ಹೂಳು ತೆಗೆದರೂ ಸಮಸ್ಯೆ ಮತ್ತೆ ಸೃಷ್ಟಿಯಾಗಿದೆ. ಕಳೆದ ವರ್ಷ ನ.ಪಂ. ವ್ಯಾಪ್ತಿಯ 11 ವಾರ್ಡ್‌ಗಳ ಚರಂಡಿ ಹೂಳೆತ್ತುವ ಕಾಮಗಾರಿಗೆ 4.90 ಲಕ್ಷ ರೂ. ಹಾಗೂ ರಾ.ಹೆ. ಚರಂಡಿ ದುರಸ್ತಿಗೆ 2.40 ಲಕ್ಷ ರೂ. ಮೀಸಲಿಡಲಾಗಿತ್ತು. ಆದರೆ ಹೆದ್ದಾರಿ ಸಮೀಪದ ಚರಂಡಿ ಹೂಳಿನಿಂದಾಗಿ ಮಾಯವಾಗಿದೆ. ಆದರೆ ಈ ಕಾಮಗಾರಿ ನಡೆಯದೇ ಬಿಲ್ ಪಾಸ್ ಆಗುತ್ತಿವೆಯೇ ಎಂದು ಸಾರ್ವಜನಿಕರು, ನ.ಪಂ. ಹಿರಿಯ ಸದಸ್ಯರು ಅಸಮಾಧಾನ ಹೊರಹಾಕಿದ್ದಾರೆ. ಜೂನ್ ಮೊದಲ ವಾರದಿಂದ ಕೆಲಸ
ಕಳೆದ ವರ್ಷ ಮೀಸಲಿಟ್ಟ ಅನು ದಾನದಲ್ಲಿ ಚರಂಡಿ ದುರಸ್ತಿ ಪಡಿಸ ಲಾಗಿದೆ. ಈ ವರ್ಷ ವಾರ್ಡ್ ಗೆ 10 ಸಾವಿರದಂತೆ 11 ವಾರ್ಡ್‌ಗೆ 2.50 ಲಕ್ಷ ರೂ. ಮೀಸಲಿರಿಸಿ ಜೂನ್ ಮೊದಲ ವಾರದಿಂದ ಚರಂಡಿ ಸ್ವಚ್ಛತೆ ನಡೆಸಲಾಗುತ್ತದೆ.
-ಮಹಾವೀರ ಆರಿಗ, ಪ.ಪಂ. ಇಂಜಿನಿಯರ್.
Related Articles
ಮಿನಿ ವಿಧಾನ ಸೌಧ ಮುಂಭಾಗ ಚರಂಡಿ ಸಮಸ್ಯೆ ಕುರಿತು ನನ್ನ ಗಮನಕ್ಕೆ ಬಂದಿದೆ. ಅಗತ್ಯ ಕ್ರಮಕ್ಕೆ ನಿರ್ಧರಿಸಲಾಗಿದೆ. ಮೇ 26ರಂದು ಪೂರ್ವಭಾವಿ ಸಭೆ ಕರೆಯಲಾಗಿದೆ.
-ಗಣಪತಿ ಶಾಸ್ತ್ರಿ, ತಹಶೀಲ್ದಾರ್.
Advertisement