Advertisement

ಡೆಂಗ್ಯೂ ವ್ಯಾಪಕ : ರೋಗ ನಿಯಂತ್ರಣಕ್ಕೆ ಇರಲಿ ಮುಂಜಾಗ್ರತೆ

09:15 AM Jul 25, 2019 | Team Udayavani |

ಆತಂಕ ಬೇಡ, ಎಚ್ಚರ ಆವಶ್ಯಕ
ವೈದ್ಯರ ಪ್ರಕಾರ ಡೆಂಗ್ಯೂ ಬಗ್ಗೆ ಆತಂಕಪಡುವ ಅಗತ್ಯವಿಲ್ಲ. ಇದೊಂದು ಸಾಮಾನ್ಯ ಜ್ವರ. ಜಿಲ್ಲಾ ರೋಗವಾಹಕ ಅಶ್ರಿತ ರೋಗಗಳ ನಿಯಂತ್ರಣಾಧಿಕಾರಿ (ಡೆಂಗ್ಯೂ, ಮಲೇರಿಯಾ ನಿಯಂತ್ರಣಾಧಿಕಾರಿ) ಡಾ| ನವೀನ್‌ ಕುಲಾಲ್‌ ಅವರು ಹೇಳುವ ಪ್ರಕಾರ ಡೆಂಗ್ಯೂ ಜ್ವರ ಎಂದರೆ ಅತಿಯಾದ ಗಾಬರಿಪಡುವ ಆವಶ್ಯಕತೆ ಇಲ್ಲ ಎನ್ನುತ್ತಾರೆ.

Advertisement

ಸಕಾಲದಲ್ಲಿ ರಕ್ಷ ಪರೀಕ್ಷೆ ಹಾಗೂ ಔಷಧ ತೆಗೆದುಕೊಂಡರೆ ಡೆಂಗ್ಯೂ ಜ್ವರ ಗುಣವಾಗುತ್ತದೆ.

– ಜ್ವರ ಬಂದಾಗ ಎರಡು ದಿನ ಸಾಮಾನ್ಯ ಔಷಧದಲ್ಲಿ (ಪ್ಯಾರಾ ಸಿಟಮಲ್‌) ಜ್ವರ ಕಡಿಮೆ ಯಾಗದಿದ್ದರೆ ರಕ್ತತಪಾಸಣೆ ಮಾಡಿಸಬೇಕು.

– ಜ್ವರ ಬಂದ ದಿನವೇ ರಕ್ತ ಪರೀಕ್ಷೆ ಮಾಡುವುದರಿಂದ ಜ್ವರದ ಬಗ್ಗೆ ಸ್ಪಷ್ಟ ಮಾಹಿತಿ ದೊರೆಯವುದು ಸಾಧ್ಯವಾಗಲಾರದು.

– ಕಂಪ್ಲೀಟ್‌ ಬ್ಲಿಡ್‌ ಕೌಂಟ್‌ ಪರೀಕ್ಷೆಯಲ್ಲಿ ಸಾಮಾನ್ಯವಾಗಿ ವೈದ್ಯರಿಗೆ ರೋಗಿಗೆ ಬಂದಿರುವ ಸ್ವರೂಪ ಬಗ್ಗೆ ಮಾಹಿತಿ ಲಭ್ಯಲಾಗುತ್ತದೆ.

Advertisement

– ಎರಡು ದಿನ ಬಿಟ್ಟು ಮತ್ತೂಮ್ಮೆ ರಕ್ತ ಪರೀಕ್ಷೆ ಮಾಡಿಸಿಕೊಳ್ಳುವುದು ಒಳ್ಳೆಯದು.

– ಡೆಂಗ್ಯೂಗೆ ನಿರ್ದಿಷ್ಟ ಔಷಧವಿಲ್ಲದ ಕಾರಣ ಜ್ವರದ ಔಷಧವನ್ನೇ ನೀಡಲಾಗುತ್ತದೆ.

– ಸಾಕಷ್ಟು ನೀರು ಕುಡಿಯುವುದು, ಪೌಷ್ಟಿಕಾಂಶಯುಕ್ತ ಆಹಾರ ಸೇವನೆ, ಆರಾಮ ಮಾಡುವುದರಿಂದ ಜ್ವರ ಅತೀ ಶೀಘ್ರ ಗುಣವಾಗುತ್ತದೆ.

– ಡೆಂಗ್ಯೂ ಜ್ವರ ಬಾಧಿತರಲ್ಲಿ ಶೇ.10ರಷ್ಟು ತೀವ್ರವಾಗಿರುತ್ತವೆ. ಇದರಲ್ಲಿ ಶೇ.5ರಷ್ಟು ಪ್ರಕರಣಗಳು ಮಾರಣಾಂತಿಕವಾಗಿರುತ್ತದೆ.

ಡೆಂಗ್ಯೂ ಬರದಂತೆ ನೋಡಿಕೊಳ್ಳಿ
ರೋಗ ಬಾರದಂತೆ ನಿಯಂತ್ರಿಸುವುದು ಹೆಚ್ಚು ಉಪಯುಕ್ತ. ಡೆಂಗ್ಯೂ ಜ್ವರವು ಹಗಲು ಹೊತ್ತಿನಲ್ಲಿ ಕಚ್ಚುವ ಈಡಿಸ್‌ ಈಜಿಪ್ಟೆ ಸೊಳ್ಳೆ ಗಳ ಮೂಲಕ ಒಬ್ಬರಿಂದೊಬ್ಬರಿಗೆ ಹರಡುತ್ತದೆ. ಈ ಸೊಳ್ಳೆಗಳು ವಾಸದ ಪರಿಸರ
ದಲ್ಲಿರುವ ಘನತ್ಯಾಜ್ಯ ವಸ್ತುಗಳಲ್ಲಿ, ಮನೆಯ ಏರ್‌ಕ್ಯೂಲರ್‌, ಹೂಕುಂಡ ಇತ್ಯಾದಿ ಗಳಲ್ಲಿ ನಿಂತ ನೀರಿನಲ್ಲಿ ಉತ್ಪತಿಯಾಗುತ್ತವೆ. ಅದುದರಿಂದ ಆದ್ಯ ನೆಲೆಯಲ್ಲಿ ಸಮರ್ಪಕ ಘನತಾಜ್ಯ ವಿಲೇವಾರಿ, ನೀರು ಸಂಗ್ರಹಣಾ ಟ್ಯಾಂಕ್‌, ಡ್ರಂ, ಬ್ಯಾರೆಲ್‌ ಪಾತ್ರೆಗಳಿಗೆ ಮುಚ್ಚಳ ಅಳವಡಿಸಬೇಕು. ಮನೆಯ ಸುತ್ತ ಸ್ವತ್ಛಗೊಳಿಸಬೇಕು. ಹಗಲಿನಲ್ಲಿಯೂ ಮನೆಯ ಒಳಗೆ ಧೂಪದ ಹೊಗೆ ಹಾಕುವುದು ಉತ್ತಮ.
– ಡಾ| ರಾಮಕೃಷ್ಣ ರಾವ್‌, ಜಿಲ್ಲಾ ಆರೋಗ್ಯ, ಕುಟುಂಬ ಕಲ್ಯಾಣಾಧಿಕಾರಿ

ಸೊಳ್ಳೆ ಕಚ್ಚದಂತೆ ಎಚ್ಚರ ವಹಿಸಿ
ಡೆಂಗ್ಯೂ ಸೋಂಕು ಸೊಳ್ಳೆಗಳಿಂದ ಹರಡುತ್ತದೆ. ಅವುಗಳು ನಿಮ್ಮನ್ನು ಕಡಿಯದಂತೆ ನೀವೇ ರಕ್ಷಿಸಿಕೊಳ್ಳಬೇಕು. ಪರಿಸರವನ್ನು ಸ್ವತ್ಛವಾಗಿಡಬೇಕು. ನೀರು ನಿಲ್ಲಲು ಅವಕಾಶ ನೀಡಬಾರದು. ಸೊಳ್ಳೆ ಕಡಿತದಿಂದ ರಕ್ಷಿಸಿಕೊಳ್ಳಲು ವಾಸನೆ ಬೀರುವ ಯಾವುದೇ ಎಣ್ಣೆಯನ್ನು ಬೆಳಗ್ಗೆ ಮತ್ತೆ ಸಂಜೆ ದೇಹದ ತೆರೆದ ಭಾಗಗಳಿಗೆ ಅಥವಾ ಬಟ್ಟೆಗಳ ಮೇಲೆ ಲೇಪಿಸಿಕೊಳ್ಳಬೇಕು. ಬೇವಿನ ಎಣ್ಣೆ, ಸಿಟ್ರೋನೆಲ್ಲಾ ಎಣ್ಣೆ, ತೆಂಗಿನ ಎಣ್ಣೆ ಇತ್ಯಾದಿ ಬಳಸಬಹುದು.
-ಡಾ| ಶ್ರೀನಿವಾಸ ಕಕ್ಕಿಲ್ಲಾಯ

ರೋಗ ಲಕ್ಷಣಗಳು
ಇದ್ದಕ್ಕಿದ್ದಂತೆ ವಿಪರೀತ ಜ್ವರ, ಮೈ ಕೈ ನೋವು, ಕೀಲು ನೋವು, ತೀವ್ರತರವಾದ ತಲೆನೋವು, ಹೆಚ್ಚಾಗಿ ಹಣೆ ಮುಂಭಾಗ, ಕಣ್ಣಿನ ಹಿಂಭಾಗ ನೋವು, ಚರ್ಮದ ಮೇಲೆ ಅಲ್ಲಲ್ಲಿ ರಕ್ತಸ್ರಾವದ ಗುರುತು, ಮೈ ಮೇಲೆ ಕೆಂಪು ಗಂಧೆಗಳು (ರ್ಯಾಶ್‌), ಹಣೆ ತೀವ್ರ ಸ್ಥಿತಿಯಲ್ಲಿ ರೋಮ ಸಂದುಗಳಲ್ಲಿ ಬಾಯಿ, ವಸಡು, ಮೂಗಿನಲ್ಲಿ ರಕ್ತಸ್ರಾವದ ಲಕ್ಷಣ ಕಾಣಿಸಿಕೊಳ್ಳ ಬಹುದು. ವಾಕರಿಕೆ, ವಾಂತಿ ಕಾಣಿಸಿಕೊಳ್ಳಬಹುದು. ಆರಂಭ ದಲ್ಲಿ ಚಿಕಿತ್ಸೆ ಪಡೆಯುವುದರಿಂದ ಡೆಂಗ್ಯೂವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸ ಬಹುದು. ರಕ್ತಸ್ರಾವದ ಲಕ್ಷಣಗಳು ಕಂಡುಬಂದಾಗ ಅತೀ ತುರ್ತಾಗಿ ವಿಶೇಷ ಸೌಲಭ್ಯಗಳಿರುವ ಆಸ್ಪತ್ರೆಗೆ ರೋಗಿಯನ್ನು ದಾಖಲಿಸುವುದು ಅತೀ ಅಗತ್ಯ. ಇಲ್ಲವಾದರೆ ಮಾರಾಣಾಂತಿಕವಾಗಬಹುದು.

Advertisement

Udayavani is now on Telegram. Click here to join our channel and stay updated with the latest news.

Next