Advertisement
ಕಳೆದೊಂದು ವಾರದಲ್ಲಿ ದ.ಕ ಜಿಲ್ಲೆಯ 222 ಮಂದಿ ಡೆಂಗ್ಯೂ ಜ್ವರ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದು, ಕೆಲವರು ಈಗಾಗಲೇ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.
ಸೊಳ್ಳೆ ಉತ್ಪತ್ತಿಗೆ ಕಾರಣ ಆಗುವ ನಿರ್ಮಾಣ ಹಂತದ ಕಟ್ಟಡ, ಇತರ ಕಟ್ಟಡ, ಮನೆ ಮತ್ತಿತರ ಸ್ಥಳ ಪರಿಶೀಲನೆ ಮುಂದುವರಿದಿದ್ದು, ಕೊಡಿಯಾಲ್‌ಬೈಲ್, ಮಣ್ಣಗುಡ್ಡೆ ಪ್ರದೇಶದಲ್ಲಿ ಕಟ್ಟಡ ಮಾಲಕರು, ಗುತ್ತಿಗೆದಾರರಿಗೆ ಗುರುವಾರ 50 ಸಾವಿರ ರೂ. ದಂಡ ವಿಧಿಸಲಾಗಿದೆ. ಡೆಂಗ್ಯೂ, ಮಲೇರಿಯಾ ವಾಹಕ ಸೊಳ್ಳೆಗಳ ಉತ್ಪತ್ತಿಗೆ ಪೂರಕವಾಗುವಂತೆ ನೀರು ನಿಲ್ಲುವ ಜಾಗಗಳನ್ನು ಸೃಷ್ಟಿಸುವ ಕಟ್ಟಡಗಳು, ನಿರ್ಮಾಣ ಹಂತದ ಕಟ್ಟಡಗಳು, ಅಂಗಡಿ ಮುಂಗಟ್ಟುಗಳಿಗೆ ಉಡುಪಿಯಲ್ಲೂ ದಂಡ ವಿಧಿಸಲು ಅಧಿಕಾರಿಗಳು ಸಿವಿಕ್ ಬೈಲಾ ಜಾರಿಗೊಳಿಸಲು ಯೋಚಿಸಿದ್ದಾರೆ.
Related Articles
ಬೆಳ್ತಂಗಡಿ ತಾಲೂಕಿನಲ್ಲೂ ಜ್ವರ ಪ್ರಕರಣಗಳು ಹೆಚ್ಚುತ್ತಿದ್ದು, 23 ಶಂಕಿತ ಎನ್‌ಎಸ್ 1 ಪ್ರಕರಣಗಳು ದಾಖಲಾಗಿ ವೆ. ಸಂಕೀರ್ಣ ಪ್ರಕರಣಗಳನ್ನು ಜಿಲ್ಲಾ ಸ್ಪತ್ರೆಗೆ ಕಳುಹಿಸಿದ್ದು, ಅಗತ್ಯ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದು ತಾಲೂಕು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.
Advertisement
ಉಡುಪಿ: 84 ಪ್ರಕರಣ ಉಡುಪಿ: ಜಿಲ್ಲೆಯಲ್ಲಿ ಜು.25ರ ವರೆಗೆ ಒಟ್ಟು ಶಂಕಿತ 84 ಡೆಂಗ್ಯೂ ಪ್ರಕರಣಗಳು ದಾಖಲಾಗಿವೆ. ಮಲ್ಪೆಯಲ್ಲಿ ಜು.25ರ ವರೆಗೆ 13 ಮಲೇರಿಯಾ ಪ್ರಕರಣಗಳು ದಾಖಲಾಗಿವೆ ಎಂಬುದಾಗಿ ವೈದ್ಯಾಧಿ ಕಾರಿಗಳು ಮಾಹಿತಿ ನೀಡಿದ್ದಾರೆ. ಬಜಪೆ-ಮಳವೂರು: 4 ಶಂಕಿತ ಪ್ರಕರಣ
ಬಜಪೆ ಮತ್ತು ಮಳವೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ತಲಾ ಎರಡು ಶಂಕಿತ ಡೆಂಗ್ಯೂ ಪ್ರಕರಣ ಪತ್ತೆಯಾಗಿವೆ. ಬಜಪೆ ಗ್ರಾ.ಪಂ.ನ ತಾರಿಕಂಬಳ, ಪದ್ಮಾವತಿ ಗಾರ್ಡ್‌ನ್ ಪ್ರದೇಶದಲ್ಲಿ ತಲಾ ಒಂದು, ಮಳವೂರು ಗ್ರಾ.ಪಂ.ನ ಜರಿನಗರ ಪ್ರದೇಶದಲ್ಲಿ 2ಪ್ರಕರಣಗಳು ಪತ್ತೆಯಾಗಿವೆ. ಮಳವೂರು ಗ್ರಾ. ಪಂ. ವ್ಯಾಪ್ತಿಯ ಜರಿನಗರದ ಒಂದೇ ಮನೆಯಲ್ಲಿ ಎರಡು ಶಂಕಿತ ಡೆಂಗ್ಯೂ ಪ್ರಕರಣ ಪತ್ತೆಯಾದ ಕಾರಣ ಬೊಂದೇಲ್ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಆ ಪ್ರದೇಶದ 16 ಮನೆಗಳಿಗೆ ಫಾಗಿಂಗ್ ಮಾಡಲಾಗಿದೆ. ಈಗಾಗಲೇ ಪ್ರತಿದಿನ ಸರ್ವೆ ಕಾರ್ಯ ನಡೆಯುತ್ತಿದೆ.