Advertisement
ಪಟ್ಟಾಜೆಯ ಮಧು (48) ಮತ್ತು ಬಾಲಕೃಷ್ಣ (51) ಅವರಿಗೆ ಡೆಂಗ್ಯೂ ಜ್ವರ ಖಚಿತ ಪಡಿಸ ಲಾಗಿದ್ದು, ಮಂಗಳೂರಿನ ಆಸ್ಪತ್ರೆಗೆ ದಾಖ ಲಾಗಿದ್ದಾರೆ. ಈ ಪೈಕಿ ಮಧು ಮರಳಿದ್ದಾರೆ, ಬಾಲಕೃಷ್ಣ ಆಸ್ಪತ್ರೆಯಲ್ಲಿದ್ದಾರೆ. ಇದೇ ಪರಿಸರದ ಮಹಾಲಿಂಗ (48), ನಾರಾಯಣ ಮಣಿಯಾಣಿ (48), ಪ್ರದೀಪ (18), ಚಂದ್ರಾವತಿ (33) ಅವರಿಗೆ ಜ್ವರ ಬಾಧಿಸಿದೆ. ಇವರು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ವಿಷಯ ತಿಳಿದು ಆರೋಗ್ಯ ಅಧಿಕಾರಿಗಳು ಮೇ 20ರಂದು ರಾತ್ರಿ ಪಟ್ಟಾಜೆಗೆ ತಲುಪಿದ್ದು, ಸೊಳ್ಳೆಗಳ ನಾಶಕ್ಕೆ ಫಾಗಿಂಗ್ ನಡೆಸಿದ್ದಾರೆ.
ಕಡಬ: ಕಡಬ ವ್ಯಾಪ್ತಿಯ ಕೋಡಿಂಬಾಳದ ಮಜ್ಜಾರು, ಮಡ್ಯಡ್ಕ ಪ್ರದೇಶಗಳಲ್ಲಿ ಒಂದು ತಿಂಗಳಿನಿಂದ 45ರಿಂದ 50 ಜನರು ಜ್ವರ ಪೀಡಿತರಾಗಿ ಆಸ್ಪತ್ರೆ ಸೇರಿದ್ದು, ಡೆಂಗ್ಯೂ ಜ್ವರದ ಶಂಕೆ ವ್ಯಕ್ತವಾಗಿದೆ. ಎಲ್ಲರೂ ಚಿಕಿತ್ಸೆಗೆ ಸ್ಪಂದಿಸಿ ಗುಣಮುಖರಾಗಿದ್ದು, ಎಂಟು ರೋಗಿಗಳ ರಕ್ತದ ಮಾದರಿಯನ್ನು ಜಿಲ್ಲಾ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಆದರೆ ಅದರಲ್ಲಿ ಡೆಂಗ್ಯೂ ದೃಢಪಟ್ಟಿಲ್ಲ. ಜನರು ಆತಂಕಪಡಬೇಕಿಲ್ಲ ಎಂದು ಕಡಬ ಸರಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಡಾ| ಸುಚಿತ್ರಾ ರಾವ್ ತಿಳಿಸಿದ್ದಾರೆ. ಜ್ವರಪೀಡಿತ ಪ್ರದೇಶಗಳಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಸಂಘ-ಸಂಸ್ಥೆಗಳ ನೆರವು ಪಡೆಯಲಾಗುತ್ತಿದೆ. ಡೆಂಗ್ಯೂ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಸಂಪೂರ್ಣ ಸನ್ನದ್ಧವಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ| ರಾಮಕೃಷ್ಣ ರಾವ್ ಹೇಳಿದ್ದಾರೆ.
Related Articles
ದ.ಕ. ಜಿಲ್ಲೆಯಲ್ಲಿ ಜನವರಿ ತಿಂಗಳಿ ನಿಂದ ಇದುವರೆಗೆ ಮಂಗಳೂರು ತಾಲೂಕು- 18, ಬಂಟ್ವಾಳ ತಾಲೂಕು-5, ಪುತ್ತೂರು ತಾಲೂಕು- 5, ಬೆಳ್ತಂಗಡಿ ತಾಲೂಕು-6 ಮತ್ತು ಸುಳ್ಯ ತಾಲೂಕು-6 ಹೀಗೆ ಒಟ್ಟು 40 ಡೆಂಗ್ಯೂ ಪ್ರಕರಣಗಳು ಜಿಲ್ಲಾ ಪ್ರಯೋ ಗಾ ಲಯದಲ್ಲಿ ದೃಢಪಟ್ಟಿವೆ ಎಂದು ಆರೋಗ್ಯ ಇಲಾಖಾ ಮೂಲಗಳು ಮಾಹಿತಿ ನೀಡಿವೆ.
Advertisement