Advertisement

ಮುಂಡರಗಿ ಜನರಿಗೆ ಡೆಂಘೀ ರೋಗದ ಭೀತಿ: ಹೆಚ್ಚಿದ ಆತಂಕ

12:54 PM Nov 13, 2019 | Team Udayavani |

ಮುಂಡರಗಿ: ದಿನದಿಂದ ದಿನಕ್ಕೆ ಪಟ್ಟಣದಲ್ಲಿ ಡೆಂಘೀ ಜ್ವರದ ಬಾಧೆಯಿಂದ ಬಳಲುತ್ತಿರುವ ಸಂಖ್ಯೆ ಜಾಸ್ತಿಯಾಗುತ್ತಿದೆ. ಜ್ವರದ ಭೀತಿಯಿಂದ ಜನ ಆತಂಕಗೊಂಡಿದ್ದಾರೆ.

Advertisement

ಕಳೆದ ಎರಡು ಮೂರು ತಿಂಗಳಿಂದಲೂ ಡೆಂಘೀ ಜ್ವರವು ಪಟ್ಟಣದ ಜನತೆಗೆ ಬಾಧಿಸ ತೊಡಗಿದೆ. ತಾಲೂಕಿನ ಬಿದರಳ್ಳಿ ಗ್ರಾಮದಲ್ಲಿ ಓರ್ವ ಮಹಿಳೆ ಮತ್ತು ಪಟ್ಟಣದ ಬ್ಯಾಲವಾಡಗಿಯಲ್ಲಿ ಹೆಣ್ಣುಮಗುವೊಂದು ಡೆಂಘೀ ಜ್ವರದ ಬಾಧೆಯಿಂದ ಮೃತಪಟ್ಟಿರುವುದು ಖಚಿತವಾಗಿದೆ. ಜೊತೆಗೆ ಈಗಾಗಲೇ ತಾಲೂಕಿನ ಹಳ್ಳಿಗಳು ಮತ್ತು ಪಟ್ಟಣವು ಸೇರಿದಂತೆ ಡೆಂಘೀ ಜ್ವರದಿಂದ ಬಳಲಿದ್ದ 24 ರೋಗಿಗಳು ಗುಣಮುಖರಾಗಿದ್ದಾರೆ.

ಅಲ್ಲದೇ ಇನ್ನೂ ಅನೇಕ ರೋಗಿಗಳು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಂಡು ಗುಣಮುಖರಾಗಿದ್ದಾರೆ. ತಾಲೂಕಿನ ಹಳ್ಳಿಗಳಿಗಿಂತಲೂ ಪಟ್ಟಣದಲ್ಲಿಯೇ ಡೆಂಘೀ ಜ್ವರದಿಂದ ಬಳಲುವ ಸಂಖ್ಯೆ ಜಾಸ್ತಿಯಾಗಿದೆ. ಸಹಜವಾಗಿ ಜ್ವರ ಬಂದರೆ ಸಾಕು ಡೆಂಘೀ ಜ್ವರ ಇರಬಹುದು ಎಂದು ಜನ ಭಯ ಬೀಳುತ್ತಿದ್ದಾರೆ. ಪಟ್ಟಣದ ಸುತ್ತಲೂ ಹರಿಯುವ ಹಳ್ಳದ ನೀರು, ಚೆಕ್‌ ಡ್ಯಾಂನ ನೀರು ಹಾಗೂ ಗದಗ ರಸ್ತೆಯ ಸ್ಮಶಾನದ ಎದುರುಗಡೆ ಇರುವ ಕೊಳಚೆ ನೀರು, ತೋಟಗಾರಿಕೆ ಇಲಾಖೆ ಆವರಣದಲ್ಲಿ ನಿಂತಿರುವ ನೀರು ಇವುಗಳು ಸೊಳ್ಳೆಗಳ ತಾಣವಾಗಿದೆ.

ಪಟ್ಟಣದಲ್ಲಿ ತಿಂಗಳಿಗೆ ಎರಡು ಸಾರಿಯಂತೆ ಲಾರ್ವಾ ಸರ್ವೇ ಮಾಡಲಾಗಿದೆ. ಪುರಸಭೆ ವ್ಯಾಪ್ತಿಯ 5600 ಮನೆಗಳಿಗೆ ತೆರಳಿದ 145 ಜನ ಆರೋಗ್ಯ ಇಲಾಖೆ ಮತ್ತು ಆಶಾ ಕಾರ್ಯಕರ್ತರು 75 ತಂಡಗಳಲ್ಲಿ ತೆರಳಿ ಪ್ರತಿಮನೆಗೆ ಭೇಟಿ ನೀಡಿ ಲಾರ್ವಾ ಸರ್ವೇ ಮಾಡಿ ಜಾಗೃತಿ ಮೂಡಿಸಿದ್ದಾರೆ. ಮುಖ್ಯವಾಗಿ ಸೊಳ್ಳೆಗಳು ಜಾಸ್ತಿಯಾಗದಂತೆ ಮುಂಜಾಗ್ರತೆ ಕ್ರಮ ಕೈಗೊಳ್ಳಲು ಜನರಲ್ಲಿ ಜಾಗೃತಿ ಮೂಡಬೇಕು. ಬಸವರಾಜ ಕೆ., ತಾಲೂಕು ಸರಕಾರಿ ಆಸ್ಪತ್ರೆ ವೈದ್ಯಾಧಿಕಾರಿ

ಪುರಸಭೆ ವ್ಯಾಪ್ತಿಯಲ್ಲಿ ಪ್ರತಿದಿನವೂ ಪಾಂಗಿಂಗ್‌ ಮಾಡಿ, ಪೌಡರ್‌ನ್ನು ಹಾಕಲಾಗುತ್ತಿದೆ. ಬಹುಮುಖ್ಯವಾಗಿ ಜನರಲ್ಲಿ ಜಾಗೃತಿ ಆಗಬೇಕು. ಮನೆಯಲ್ಲಿ ನೀರು ತುಂಬಿಸಿದ ಪಾತ್ರೆಗಳ ಮೇಲೆ ಮುಚ್ಚಬೇಕು. ಇದರಿಂದ ಸೊಳ್ಳೆಗಳ ಉತ್ಪಾದನೆ ತಡೆಯಲು ಸಾಧ್ಯವಾಗಲಿದೆ.ಎಚ್‌.ಎಸ್‌. ನಾಯಕ, ಪುರಸಭೆ ಮುಖ್ಯಾಧಿಕಾರಿ

Advertisement

 

-ಹು.ಬಾ. ವಡ್ಡಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next