Advertisement
ಮಂಗಳವಾರ ಮಸ್ಟರಿಂಗ್ ಕೇಂದ್ರದಿಂದ ಇವಿಎಂ, ವಿವಿಪಾಟ್ ಹಾಗೂ ಇತರ ಸಾಮಗ್ರಿಗಳೊಂದಿಗೆ ಮತಗಟ್ಟೆಗೆ ಸಿಬಂದಿ ತೆರಳಿದ್ದರು. ಬುಧವಾರ ಮತದಾನ ಮುಗಿದ ಬಳಿಕ ಆಯಾ ಡಿಮಸ್ಟರಿಂಗ್ ಕೇಂದ್ರಗಳಿಗೆ ತಂದು ಹಿರಿಯ ಅಧಿಕಾರಿಗಳಿಗೆ ಹಸ್ತಾಂತರ ಮಾಡಿದರು.
ಉಡುಪಿ: ಮಂಗಳವಾರವಷ್ಟೇ ಮತಯಂತ್ರ ಹಿಡಿದು ಮತಗಟ್ಟೆಗೆ ಹೋಗಿದ್ದ ಅಧಿಕಾರಿ, ಸಿಬಂದಿ ವರ್ಗ ಬುಧವಾರ ಸಂಜೆ ಮತ ಯಂತ್ರ ಬಾಕ್ಸ್, ದಾಖಲೆ ಪತ್ರ, ವಿವಿಧ ಪರಿಕರಗ
ಳೊಂದಿಗೆ ಎಲ್ಲ ಐದು ಕ್ಷೇತ್ರಗಳ ಡಿಮಸ್ಟ ರಿಂಗ್ ಕೇಂದ್ರಕ್ಕೆ ಬಂದು ಮತಯಂತ್ರಗಳನ್ನು ಒಪ್ಪಿಸಿ ದಾಖಲೆ ನೀಡಿ ಸಹಿ ಹಾಕಿ ಮನೆ ಕಡೆಗೆ ತೆರಳಿದರು.
Related Articles
Advertisement
ಬುಧವಾರ ತಡರಾತ್ರಿಯವರೆಗೂ ಬೈಂದೂರಿನ ಸ.ಪ.ಪೂ. ಕಾಲೇಜು, ಕುಂದಾಪುರ ಭಂಡಾರ್ಕಾರ್ಸ್ ಕಾಲೇಜು, ಉಡುಪಿಯ ಸೈಂಟ್ ಸಿಸಿಲೀಸ್, ಕಾಪುವಿನ ದಂಡತೀರ್ಥ ಪದವಿಪೂರ್ವ ಕಾಲೇಜು ಹಾಗೂ ಕಾರ್ಕಳದ ಮಂಜುನಾಥ್ ಪೈ ಸ್ಮಾರಕ ಸರಕಾರಿ ಪ್ರಥಮದರ್ಜೆ ಕಾಲೇಜಿನ ಡಿಮಸ್ಟರಿಂಗ್ ಕೇಂದ್ರಕ್ಕೆ ಮತಯಂತ್ರ ತರಲಾಯಿತು. ಇಲ್ಲಿಂದ ಮತಯಂತ್ರಗಳನ್ನು ತಡರಾತ್ರಿ ಮತ ಎಣಿಕೆ ಕೇಂದ್ರಕ್ಕೆ ಕೊಂಡೊಯ್ಯಲಾಯಿತು. ಕುಂದಾಪುರ, ಬೈಂದೂರು, ಕಾರ್ಕಳ ಕಡೆಗೆ ತೆರಳುವ ಸಿಬಂದಿಗೆ ಬಸ್ ವ್ಯವಸ್ಥೆ ಮಾಡಲಾಗಿತ್ತು. ಐದೂ ಕ್ಷೇತ್ರಗಳ ಮತ ಎಣಿಕೆ ಮೇ 13 ರಂದು ನಡೆಯಲಿದೆ.