Advertisement
ಹುಣಸೂರು ತಾಲೂಕಿನ ವಿಷಕಂಠ ಮೂರ್ತಿಯವರ ಜಮೀನಿನಲ್ಲಿ ಹುಣಸೂರು ಕೃಷಿ ಸಹಾಯಕ ನಿರ್ದೇಶಕರ ಕಚೇರಿ ವತಿಯಿಂದ ರೋಗಭಾದೆ ನಿಯಂತ್ರಣ ಕುರಿತ ಪ್ರಾತ್ಯಕ್ಷಿಕೆ ಆಯೋಜಿಸಿದ್ದರು.
Related Articles
Advertisement
ಶುಂಠಿ ಕೊಳೆ ರೋಗಕ್ಕೆ: ರಿಡೋಮಿಲ್ ಒಂದು ಲೀ ನೀರಿಗೆ 2 ಗ್ರಾಂ ಅಥವಾ ಕಾಫರ್ ಆಕ್ಸಿಕ್ಲೋರೈಡ್ 2 ಗ್ರಾಂ ಮತ್ತು ಸೈಪ್ರೋಮೈಸಿನ್ ಸಲ್ಫೇಟ್ 1 ಗ್ರಾ ಪ್ರತಿ ಲೀ. ನೀರಿನೊಂದಿಗೆ ಮಿಶ್ರಣ ಮಾಡಿ ಸಿಂಪಡಿಸಬೇಕು ಹಾಗೂ ಕೊಳೆ ರೋಗ ಇದ್ದಲ್ಲಿ ಶುಂಠಿ ಬುಡದ ಸುತ್ತಲೂ ಸುರಿಯಬೇಕು.
ಅಡಿಕೆ ಸುಳಿಕೊಳೆ: ಅಡಿಕೆ ಬೆಳೆಯಲ್ಲಿ ಕಾಯಿ ಕೊಳೆ ಹತೋಟಿಗಾಗಿ 100 ಲೀಟರ್ ನೀರಿನೊಂದಿಗೆ 1 ಕೆ.ಜಿ. ಸುಣ್ಣ, ಬೋರ್ಡೋ ದ್ರಾವಣ ತಯಾರಿಸಿ 1 ಕೆ.ಜಿ.ಮೈಲು ತುತ್ತ ಮಿಶ್ರಣ ಮಾಡಿ ಸಿಂಪಡಿಸಬೇಕೆಂದು ಸಲಹೆ ನೀಡಿದರು.
ಈ ವೇಳೆ ಸಹಾಯಕ ಕೃಷಿ ನಿರ್ದೇಶಕ ವೆಂಕಟೇಶ್, ಕೃಷಿಕ ಸಮಾಜದ ಅಧ್ಯಕ್ಷ ಅರುಣ್ ಕುಮಾರ್, ಸಿ.ಬಿ.ಟಿ.ಕಾಲೋನಿಯ ಆರ್.ಮಹದೇವ್, ಚಿಲ್ಕುಂದದ ಪುಟ್ಟರಾಜು, ಮಹದೇವಶೆಟ್ಟಿ, ಮಹಿಳಾ ಸ್ವಸಹಾಯ ಸಂಘದ ಮಹದೇವಮ್ಮ, ಕೃಷಿ ಅಧಿಕಾರಿಗಳಾದ ವಿನಯ್ ಕುಮಾರ್, ಆತ್ಮ ಯೋಜನೆಯ ಶಶಿಕುಮಾರ್ ಸೇರಿದಂತೆ ಕೃಷಿಕರು ಭಾಗವಹಿಸಿದ್ದರು.