ಚಾಮರಾಜನಗರ: ಜಿಲ್ಲಾಸ್ಪತ್ರೆ ಆವರಣದಲ್ಲಿ ಮುಚ್ಚ ಲಾಗಿರುವ ಜನರಿಕ್ ಔಷಧಿ ಮಳಿಗೆಯನ್ನು ಪುನರಾ ಂಭಿಸುವಂತೆ ಹಾಗೂ ಜಿಲ್ಲಾಸ್ಪತ್ರೆ ಅವ್ಯವಸ್ಥೆ ಸರಿಪಡಿ ಸುವಂತೆ ಒತ್ತಾಯಿಸಿ ಕರ್ನಾಟಕ ಸೇನಾ ಪಡೆ ಕಾರ್ಯಕರ್ತರು ನಗರದ ಜಿಲ್ಲಾಸ್ಪತ್ರೆಯ ಎದುರು ಪ್ರತಿಭಟನೆ ನಡೆಸಿದರು.
ಡೀನ್ ಭೇಟಿ: ಪ್ರತಿಭಟನೆ ಸ್ಥಳಕ್ಕೆ ಡೀನ್ ರಾಜೇಂದ್ರ, ಜಿಲ್ಲಾ ಸರ್ಜನ್ ಡಾ. ರಘುರಾಂ ಸರ್ವೇಗಾರ್ ಭೇಟಿ ನೀಡಿ, ಮಾತನಾಡಿ, ಜನರಿಕ್ ಔಷಧಿ ಮಳಿಗೆ ನಿರ್ಮಿ ಸಿರುವ ಜಾಗ ಜಿಲ್ಲಾಸ್ಪತ್ರೆಗೆ ಸೇರಿದ್ದು, ಆದರೆ ಮಳಿಗೆ ಯ ಕಟ್ಟಡ ನಮ್ಮದಲ್ಲ. ಎಚ್ಎಲ್ಎಲ್ ಕಂಪನಿ ಟೆಂ ಡರ್ ಪಡೆದುಕೊಂಡಿದೆ. ಜನರಿಕ್ ಮಳಿಗೆ ನಡೆಸುತ್ತಿದೆ. ಅದು ನಮ್ಮ ಅಧಿಕಾರದಲ್ಲಿಲ್ಲ ಎಂದು ಹೇಳಿದರು.
ಜಾಗದ ಸಮಸ್ಯೆ: ಇದರಿಂದ ಸಮಾಧಾನಿತರಾಗದ ಪ್ರತಿಭಟನಾಕಾರರು, ಬೇಜಾಬ್ದಾರಿಯುತ ಉತ್ತರ ನೀಡುತ್ತಿದ್ದೀರಾ ಎಂದು ಡೀನ್ ಅವರನ್ನು ತರಾಟೆ ತೆಗೆದುಕೊಂಡರು. ನಂತರ ಜಿಲ್ಲಾ ಸರ್ಜನ್ ಡಾ. ರಘುರಾಂ ಸರ್ವೇಗಾರ್ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರಿಗೆ ಪತ್ರ ಬರೆಯಲಾಗಿದೆ. ಎಂಎಸ್‌ಐಎಲ್ ಮೂಲಕ ಬೇರೊಂದು ಜನರಿಕ್ ಮಳಿಗೆ ತೆರೆಯಲು ನಿರ್ಧರಿಸಲಾಗಿದೆ. ಆದರೆ ಜಿಲ್ಲಾಸ್ಪತ್ರೆ ಯಲ್ಲಿ ಜಾಗದ ಸಮಸ್ಯೆಯಾಗಿದೆ ಎಂದರು.
ಭರವಸೆ ನೀಡಿದ ಅಧಿಕಾರಿಗಳು: ಇದೆಲ್ಲ ಸಬೂಬು ಬೇಡಿ. ಯಾವುದೇ ಕಾರಣ ಹೇಳದೇ ಶೀಘ್ರವೇ ಆಸ್ಪತ್ರೆ ಆವರಣದಲ್ಲಿ ಜನರಿಕ್ ಔಷಧಿ ಮಳಿಗೆ ತೆರೆದು ಬಡವರಿಗೆ ಅನುಕೂಲ ಮಾಡುವಂತೆ ಪಟ್ಟು ಹಿಡಿದರು. ಒಂದು ತಿಂಗಳೊಳಗೆ ಜೆನರಿಕ್ ಔಷಧಿ ಮಳಿಗೆ ತೆರೆಯುವುದಾಗಿ ಅಧಿಕಾರಿಗಳು ಭರವಸೆ ನೀಡಿದ ಮೇಲೆ ಪ್ರತಿಭಟನೆ ಅಂತ್ಯಗೊಳಿಸಿದರು.
Advertisement
ಕರ್ನಾಟಕ ಸೇನಾಪಡೆಯ ರಾಜ್ಯಾಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ ನೇತೃತ್ವದಲ್ಲಿ ಜಿಲ್ಲಾಸ್ಪತ್ರೆ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು ಜಿಲ್ಲಾಡಳಿತ, ಡೀನ್, ಆರೋಗ್ಯ ಸಚಿವರ ವಿರುದ್ಧ ಧಿಕ್ಕಾರ ಕೂಗಿ ದರು. ಜಿಲ್ಲಾ ಆಸ್ಪತ್ರೆ ಸತ್ತು ಹೋಗಿದೆ ಎಂದು ಪುರಿ ಚೆಲ್ಲುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
Related Articles
Advertisement
ಹೋರಾಟದ ಎಚ್ಚರಿಕೆ: ಕರ್ನಾಟಕ ಸೇನಾಪಡೆಯ ರಾಜ್ಯಾಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ ಮಾತನಾಡಿ, ಕೇಂದ್ರ ಸರ್ಕಾರ ಬಡ ಜನರಿಗೆ ಕಡಿಮೆ ದರದಲ್ಲಿ ಔಷಧಿ ವಿತರಿಸುವ ಸಲುವಾಗಿ ದೇಶಾದ್ಯಂತ ಎಲ್ಲಾ ಜಿಲ್ಲಾಸ್ಪತ್ರೆಗಳಲ್ಲಿ ಜನರಿಕ್ ಔಷಧಿ ಮಳಿಗೆ ತೆರೆದಿದೆ. ಆದರೆ ಚಾಮರಾಜನಗರ ಜಿಲ್ಲಾಸ್ಪತ್ರೆಯ ಜನರಿಕ್ ಔಷಧಿ ಮಳಿಗೆ ಕಳೆದ 4 ತಿಂಗಳಿನಿಂದ ಮುಚ್ಚಿದ್ದು, ಬಡಜನರಿಗೆ ತೊಂದರೆಯಾಗಿದೆ. ಆಸ್ಪತ್ರೆಯ ವೈದ್ಯರು ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ. ಆಸ್ಪತ್ರೆಯ ಅವ್ಯವಸ್ಥೆಯನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿದರು. ಇಲ್ಲದಿದ್ದರೆ ಚಾಮರಾಜನಗರ ಬಂದ್ ಘೋಷಿಸುವುದಾಗಿ ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಶಾ.ಮುರಳಿ, ಚಾ.ಸಿ.ಸೋಮ ನಾಯಕ, ಚಾ.ಗು. ನಾಗರಾಜು, ಪುರುಷೋ ತ್ತಮ್, ನಿಜಧ್ವನಿ ಗೋವಿಂದರಾಜು, ಶಿವಶಂಕರನಾಯಕ, ವೀರಭದ್ರ, ತಾಂಡವಮೂರ್ತಿ, ಸ್ವಾಮಿ, ಮಹೇಶ್‌ಗೌಡ, ನಂಜುಂಡಸ್ವಾಮಿ, ಚಂದ್ರಣ್ಣ ಇದ್ದರು.