Advertisement

ನೋಟು ಅಮಾನ್ಯಕ್ಕೆ ಪಟೇಲ್‌ ಸಮರ್ಥನೆ

09:56 AM Nov 28, 2018 | Harsha Rao |

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಸರಕಾರದ ನೋಟು ಅಮಾನ್ಯ ಕ್ರಮವನ್ನು ಆರ್‌ಬಿಐ ಗವರ್ನರ್‌ ಊರ್ಜಿತ್‌ ಪಟೇಲ್‌ ಮಂಗಳವಾರ ಸಮರ್ಥಿಸಿ ಕೊಂಡಿದ್ದಾರೆ. ಇದರ ಫ‌ಲಿತಾಂಶಗಳು ಸ್ಪಷ್ಟವಾಗಿ ಗೋಚರಿಸುತ್ತಿವೆ ಎಂದೂ ಹೇಳಿದ್ದಾರೆ. ಮಂಗಳವಾರ ಸಂಸದೀಯ ಸಮಿತಿಯ ವಿಚಾರಣೆಗೆ ಹಾಜರಾಗಿದ್ದ ಊರ್ಜಿತ್‌, ಕೇಂದ್ರ ಸರಕಾರದೊಂದಿಗಿನ ಭಿನ್ನಾಭಿಪ್ರಾಯಗಳನ್ನು ಪಕ್ಕಕ್ಕಿಟ್ಟು ಈ ವಿವರಣೆ ನೀಡಿದ್ದಾರೆ.

Advertisement

ಹಿರಿಯ ಕಾಂಗ್ರೆಸ್‌ ಮುಖಂಡ ವೀರಪ್ಪ ಮೊಲಿ ನೇತೃತ್ವದ ಸಂಸದೀಯ ಸಮಿತಿ ಇದಾಗಿದ್ದು, ಮಾಜಿ ಪ್ರಧಾನಿ ಮನಮೋಹನ ಸಿಂಗ್‌ ಕೂಡ ಇದರಲ್ಲಿ ಸದಸ್ಯರಾಗಿದ್ದಾರೆ. ಸಮಿತಿ ಮುಂದೆ ಹಾಜರಾದ ಪಟೇಲ್‌, ಕಚ್ಚಾ ತೈಲ ಬೆಲೆ ಇಳಿಕೆ ದೇಶದ ಆರ್ಥಿಕತೆಗೆ ಉತ್ತಮವಾಗಿದೆ ಎಂದೂ ಹೇಳಿದ್ದಾರೆ. ಸಂಸದೀಯ ಸಮಿತಿ ಮುಂದಿಟ್ಟ ಹಲವು ಪ್ರಶ್ನೆಗಳಿಗೆ ಲಿಖೀತವಾಗಿ ಉತ್ತರಿಸುವುದಾಗಿ ಪಟೇಲ್‌ ತಿಳಿಸಿ ದ್ದಾರೆ ಎನ್ನಲಾಗಿದೆ. ಅಲ್ಲದೆ, ಇತ್ತೀಚೆಗೆ ಕೆಲವು ವಿಚಾರಗಳಿಗೆ ಸಂಬಂಧಿಸಿ ಸರಕಾರ‌ ಮತ್ತು ಆರ್‌ಬಿಐ ಮಧ್ಯೆ ಭಿನ್ನಾಭಿಪ್ರಾಯ ಮೂಡಿದ್ದರ ಬಗ್ಗೆಯೂ ಸಮಿತಿ ಪ್ರಶ್ನಿಸಿದೆ. 

Advertisement

Udayavani is now on Telegram. Click here to join our channel and stay updated with the latest news.

Next